ರಾಷ್ಟ್ರೀಯ

ನವೆಂಬರ್ 16 ರಿಂದ ಶಬರಿಮಲೆ ದೇವಾಲಯ ದರ್ಶನ ಭಾಗ್ಯ

ನವೆಂಬರ್ 16 ರಿಂದ ಶಬರಿಮಲೆ  ದೇವಾಲಯ ದರ್ಶನ  ಭಾಗ್ಯ

ತಿರುವನಂತಪುರ, ಸೆಪ್ಟೆಂಬರ್ 13:  ಮಂಡಲಂ-ಮಕರವಿಲಕ್ಕು ಋತುವಿನಲ್ಲಿ ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯ ನವೆಂಬರ್ 16 ರಿಂದ  ತೆರೆಯಲಿದ್ದು, ರಾಜ್ಯ ಮೂಲದವರಿಗೆ ಮಾತ್ರ ಪ್ರವೇಶಕಾಶ ನೀಡಬೇಕೆಂದು ವೈದ್ಯರು ಶಿಫಾರಸು ಮಾಡಿದ್ದಾರೆ. 

ಇದರಿಂದ ಜನಸಂದಣಿಯನ್ನು ತಪ್ಪಿಸಿ ಕೊರೊನಾ ಸೋಂಕು ಹರಡುವುದನ್ನ ತಡೆಗಟ್ಟಬಹುದು  ಎನ್ನಲಾಗಿದೆ. ಧಾರ್ಮಿಕ ಸಚಿವ ಕಡಕಂಪಲ್ಲಿ ಸುರೇಂದ್ರನ್ ಅವರು ನವೆಂಬರ್ 16 ರಂದು ದೇವಾಲಯವನ್ನು  ಸಾರ್ವಜನಿಕರಿಗಾಗಿ ಮುಕ್ತಗೊಳಿಸಲಾಗುವುದು ಎಂದು ದೃಢಪಡಿಸಿದ್ದಾರೆ. 

ಪ್ರತಿ ಚಳಿಗಾಲದಲ್ಲೂ ಎರಡು ತಿಂಗಳ ಮಂಡಲಂ-ಮಕರವಿಲಕ್ಕು ಋತುವಿನಲ್ಲಿ, 30 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು  ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುತ್ತಿದ್ದರು. ಆದರೆ, 2019 ರಲ್ಲಿಎಲ್ಲಾ ವಯಸ್ಸಿನ ಮಹಿಳೆಯರು ಆಲಯವನ್ನ ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. 

ಇದಕ್ಕೆ ವಿರೋಧ ವ್ಯಕ್ತಪಡಿಸಿ ಸಾಕಷ್ಟು ಪ್ರತಿಭಟನೆಗಳ ನಡೆದ ಹಿನ್ನೆಲೆಯಲ್ಲಿ ಕೇವಲ 7.7 ಲಕ್ಷ ಭಕ್ತರು ಮಾತ್ರ ತೀರ್ಥಯಾತ್ರೆ ಕೈಗೊಂಡಿದ್ದರು.ಧಾರ್ಮಿಕ ಸಚಿವ ಕಡಕಂಪಲ್ಲಿ ಸುರೇಂದ್ರನ್ ಅವರು ನವೆಂಬರ್ 16 ರಂದು ದೇವಾಲಯವನ್ನು  ಸಾರ್ವಜನಿಕರಿಗಾಗಿ ಮುಕ್ತಗೊಳಿಸಲಾಗುವುದು ಎಂದು ದೃಢಪಡಿಸಿದ್ದಾರೆ. 

'ಎಲ್ಲಾ ಕೋವಿಡ್ -19 ನಿಯಂತ್ರಣಕ್ಕಾಗಿ ನಿಬಂಧನೆಗಳನ್ನ ಅನುಸರಿಸಲಾಗುವುದು ಮತ್ತು ಭಕ್ತರ ಸಂಖ್ಯೆಯನ್ನು ಕಡಿಮೆಗೊಳಿಸಲು ರಾಜ್ಯ ತೀರ್ಮಾನಿಸಿದೆ. ಇನ್ನು ತೀರ್ಥಯಾತ್ರೆ ಕೈಗೊಳ್ಳುವ ಮೊದಲು ಭಕ್ತರು ಕೊರೊನಾ ನೆಗಿಟಿವ್ ವರದಿ ಸಲ್ಲಿಸುವುದು ಕಡ್ಡಾಯವಾಗಿದೆ. 

ಸುದ್ದಿ ಓದಿ