ಸೆನ್ಸೆಕ್ಸ್: 200ಕ್ಕೂ ಹೆಚ್ಚು ಅಂಕದಿಂದ ಚೇತರಿಕೆ
ಮುಂಬೈ, ಅ 30 : ಎಲ್ಲಾ ವಲಯಗಳ ಷೇರುಗಳಿಗೆ ಹೆಚ್ಚಿದ ಖರೀದಿ ಬೆಂಬಲದಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕ, ಸೆನ್ಸೆಕ್ಸ್ ಶುಕ್ರವಾರ 208 ಅಂಕ ಏರಿಕೆ ಕಂಡು 39,958.56ರಲ್ಲಿ ಚೇತರಿಸಿಕೊಂಡಿದೆ.ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ಸೂಚ್ಯಂಕ ನಿಫ್ಟಿ ಸಹ 68.05 ಅಂಕ ಏರಿಕೆ ಕಂಡು 11,738.85ರಲ್ಲಿತ್ತು.ಸೆನ್ಸೆಕ್ಸ್ ಮಧ್ಯಂತರ ವಹಿವಾಟಿನಲ್ಲಿ ಕ್ರಮವಾಗಿ 39,988.25 ಮತ್ತು 39,636.06 ರಲ್ಲಿತ್ತು.ನಿಫ್ಟಿ ಮಧ್ಯಂತರ ವಹಿವಾಟಿನಲ್ಲಿ ಕ್ರಮವಾಗಿ 11,748.95 ಮತ್ತು 11,637.20ರಲ್ಲಿತ್ತು. ಬಿಎಸ್ಇ ಯ ಪ್ರಮುಖ 30 ಕಂಪೆನಿಗಳ ಷೇರುಗಳ ಪೈಕಿ 23 ಏರಿಕೆ ಕಂಡರೆ, 7 ಕುಸಿದಿವೆ.ಏರಿಕೆ ಕಂಡ ಷೇರುಗಳ ಪೈಕಿ ಎನ್ಟಿಪಿಸಿ, ನೆಸ್ಲೆ ಇಂಡಿಯಾ,ಎಚ್ಸಿಎಲ್ ಟೆಕ್ನಾಲಜೀಸ್ ಸೇರಿವೆ.ಉಳಿದಂತೆ ಬಜಾಜ್ ಫೈನಾನ್ಸ್, ಮಾರುತಿ ಸುಜುಕಿ, ಭಾರ್ತಿ ಏರ್ಟೆಲ್ ಮತ್ತು ಪವರ್ಗ್ರಿಡ್ ಕುಸಿದಿವೆ.