ರಾಣೆಬೆನ್ನೂರ

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಸಾಧನೆಗೈದ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಸಾಧನೆಗೈದ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು

ರಾಣೇಬೆನ್ನೂರ, ಆ.10 ತಾಲೂಕಿನ ಚೌಡಯ್ಯದಾನಪುರದ ಸರಕಾರಿ ಪ್ರೌಢಶಾಲೆಯ 2020-21ನೇ ಸಾಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶವು ಶೇ.100 ರಷ್ಟು ಆಗಿದ್ದು, 15 ವಿದ್ಯಾರ್ಥಿಗಳಲ್ಲಿ  ಸೌಮ್ಯ ನಾಗರಾಜ ಅರಸಪ್ಪನವರ 567(ಶೇ.90.72), ಸರೋಜಾ ಈರ​‍್ಪ ಲಮಾಣಿ 535(ಶೇ.85.60) ರಷ್ಟು ಅಂಕಗಳನ್ನು ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. 

ಪ್ರಥಮ ಸ್ಥಾನದಲ್ಲಿ 8 ವಿದ್ಯಾರ್ಥಿಗಳು, ದ್ವಿತೀಯ ಸ್ಥಾನದಲ್ಲಿ 5 ವಿದ್ಯಾರ್ಥಿಗಳು ಪಾಸಾಗಿದ್ದು, ಶಾಲೆಗೆ ಕೀರ್ತಿ ತಂದಿರುವ ಎಲ್ಲ ವಿದ್ಯಾರ್ಥಿಗಳನ್ನು ಮುಖ್ಯೋಪಾಧ್ಯಾಯ ವಿಜಯಕುಮಾರ ಎನ್‌.ಪಿ ಹಾಗೂ ಶಾಲಾ ಸಿಬ್ಬಂಧಿ ಮತ್ತು ಗ್ರಾಮದ ಗಣ್ಯರು ಅಭಿನಂದಿಸಿದ್ದಾರೆ. 


ಸುದ್ದಿ ಓದಿ