ರಾಷ್ಟ್ರೀಯ

ಪ್ಲೇಆಫ್ ಮೇಲೆ ಡೆಲ್ಲಿ ಕಣ್ಣು

ಪ್ಲೇಆಫ್ ಮೇಲೆ ಡೆಲ್ಲಿ ಕಣ್ಣು

ದುಬೆ, ಅ 30 : ಶ್ರೇಯಸ್ ಅಯ್ಯರ್ ಸಾರಥ್ಯದ ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ 13ನೇ ಪಂದ್ಯದಲ್ಲಿ ಶನಿವಾರ ಮುಂಬಯಿ ಇಂಡಿಯನ್ಸ್ ತಂಡದ ಸವಾಲು ಎದುರಿಸಲಿದ್ದು, ಪ್ಲೇಆಫ್ ಖಾತರಿಪಡಿಸಿಕೊಳ್ಳುವ ಗುರಿ ಹೊಂದಿದೆ. ಗುರುವಾರ ನಡೆದ ಪಂದ್ಯದಲ್ಲಿ ರವೀಂದ್ರ ಜಡೇಜಾ ಅವರ ಸಹಾಸದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ 6 ವಿಕೆಟ್ ಗಳಿಂದ ಕೋಲ್ಕೊತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸಿದ ಪರಿಣಾಮ 16 ಅಂಕ ಹೊಂದಿದ್ದ ಮುಂಬಯಿ ಅಧಿಕೃತವಾಗಿ ಪ್ಲೇಆಫ್ ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ. ಹೀಗಾಗಿ ಒಂದು ಹಂತವನ್ನು ಯಶಸ್ವಿಯಾಗಿ ದಾಟಿರುವ ಮುಂಬಯಿ, ಶನಿವಾರದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಗೆದ್ದು ಅಂಕಪಟ್ಟಿಯ ಮೊದಲ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಳ್ಳುವ ಇರಾದೆ ಹೊಂದಿದೆ.

ಗಾಯದ ಸಮಸ್ಯೆಯಿಂದಾಗಿ ಹಿಂದಿನ ಮೂರು ಪಂದ್ಯಗಳಿಗೆ ಅಲಭ್ಯರಾಗಿರುವ ರೋಹಿತ್ ಶರ್ಮ ಡೆಲ್ಲಿ ವಿರುದ್ಧ ಕಣಕ್ಕಿಳಿಯುವರೇ ಎಂಬುದನ್ನು ಕಾದು ನೋಡಬೇಕಿದೆ.ಏತನ್ಮಧ್ಯೆ, ಸತತ ಹ್ಯಾಟಿಕ್ ಸೋಲಿನಿಂದ ಕಂಗೆಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್, ಮುಂಬಯಿ ವಿರುದ್ಧ ಪುಟಿದೇಳುವುದರೊಂದಿಗೆ ಪ್ಲೇಆಫ್ ಹಂತವನ್ನು ಖಚಿತಪಡಿಸಿಕೊಳ್ಳುವ ಗುರಿ ಹೊಂದಿದೆ.  ತನ್ನ ಐದು ಪಂದ್ಯಗಳು ಬಾಕಿ ಇರುವಂತೆಯೇ 14 ಅಂಕ ಗಳಿಸಿ ಪ್ಲೇಆಫ್ ಸನಿಹಕ್ಕೆ ತಲುಪಿದ್ದ ಡೆಲ್ಲಿ, ಅಸ್ಥಿರ ಪ್ರದರ್ಶನದಿಂದಾಗಿ ಪಂಜಾಬ್, ಕೋಲ್ಕೊತಾ ಮತ್ತು ಹೈದರಾಬಾದ್ ವಿರುದ್ಧ ಸೋತು ನಿರಾಸೆ ಕಂಡಿದೆ. ಆದರೀಗ ಪ್ಲೇಆಫ್ ಸ್ಥಾನವನ್ನು ಸುಗಮವಾಗಿಸಿಕೊಳ್ಳಲು ಡೆಲ್ಲಿ ತಂಡ ಗೆಲ್ಲಲೇಬೇಕಾಗಿದೆ.

ಪಂದ್ಯ ಆರಂಭ: ಮಧ್ಯಾಹ್ನ 3.30

ಸ್ಥಳ: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ದುಬೈ

ನೇರ ಪ್ರಸಾರ: ಸ್ಟಾರ್ ಸ್ಟೋರ್ಟ್ಸ್

ಸಂಭಾವ್ಯ ತಂಡಗಳು

ಡೆಲ್ಲಿ ಕ್ಯಾಪಿಟಲ್ಸ್

ಶ್ರೇಯಸ್ ಅಯ್ಯರ್ (ನಾಯಕ). ಪೃಥ್ವಿ ಶಾ, ಶಿಖರ್ ಧವನ್, ಅಜಿಂಕ್ಯ ರಹಾನೆ, ಶಿಮ್ರಾನ್ ಹೆಟ್ಮಾಯರ್, ಮಾರ್ಕಸ್ ಸ್ಟೋಯ್ನಿಸ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ರಿಷಭ್ ಪಂತ್, ಅಲೆಕ್ಸ್ ಕ್ಯೇರಿ, ಆ್ಯನ್ರಿಚ್ ನೋರ್ಜೆ, ತುಷಾರ್ ದೇಶಪಾಂಡೆ  ಕಗಿಸೊ ರಬಾಡ

ಮುಂಬಯಿ ಇಂಡಿಯನ್ಸ್

ರೋಹಿತ್ ಶರ್ಮ/ ಕೀರನ್ ಪೊಲಾರ್ಡ್ (ನಾಯಕ), ಹಾರ್ದಿಕ್ ಪಾಂಡ್ಯ, ಸೌರಭ್ ತಿವಾರಿ, ಕೃಣಾಲ್ ಪಾಂಡ್ಯ, ಜಸ್ ಪ್ರಿತ್  ಬುಮ್ರಾ,ಸೂರ್ಯಕುಮಾರ್ ಯಾದವ್, ಅನುಕುಲ್ ರಾಯ್, ಕ್ವಿಂಟನ್ ಡಿ ಕಾಕ್, ಇಶನ್ ಕಿಶಾನ್, ಟ್ರೆಂಟ್ ಬೌಲ್ಟ್, ನೇಥನ್ ಕೌಲ್ಟರ್ ನೈಲ್


ಸುದ್ದಿ ಓದಿ