ಬಳ್ಳಾರಿ

ಎಸ್‌ಐಆರ್ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ: ಫಾರ್ಮ್‌ ವಿತರಣೆ ಶೇ.100 ಪೂರ್ಣ

ಎಸ್‌ಐಆರ್ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ: ಫಾರ್ಮ್‌ ವಿತರಣೆ ಶೇ.100 ಪೂರ್ಣ

ಲೋಕದರ್ಶನ ವರದಿ  

 ಬಳ್ಳಾರಿ 17:  ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 93-ಬಳ್ಳಾರಿ ಗ್ರಾಮೀಣ ಹಾಗೂ 94-ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಅಂಗವಾಗಿ ಮನೆ-ಮನೆಗೆ ತೆರಳಿ ಫಾರ್ಮ್‌ ವಿತರಣೆ ಕಾರ್ಯ ಶೇ.100ರಷ್ಟು ಪೂರ್ಣಗೊಂಡಿದೆ.  

93-ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ  

ಒಟ್ಟು ಮತದಾರರು: 2,51,325   

ಮತಗಟ್ಟೆಗಳು: 236   

ಮತದಾರರ ಮ್ಯಾಪಿಂಗ್‌: ಶೇ.97.21 ಪೂರ್ಣ   

ವಿತರಿಸಿದ ಫಾರ್ಮ್ಗಳು: 2,51,325   

ಸ್ವೀಕರಿಸಿದ ಫಾರ್ಮ್ಗಳು: 1,29,589 (ಶೇ.51.56)   

ಆನ್ಲೈನ್ ಮೂಲಕ ಸ್ವೀಕರಿಸಿದ ಅರ್ಜಿಗಳು: 393   

ಪರೀಶೀಲನೆ ವೇಳೆ 7,154 ಮತದಾರರನ್ನು ವಿವಿಧ ವರ್ಗಗಳಿಗೆ ಗುರುತಿಸಲಾಗಿದೆ. ಇವರಲ್ಲಿ:  

ಮೃತಪಟ್ಟವರು - 3,047   

ಶಾಶ್ವತವಾಗಿ ಸ್ಥಳಾಂತರಗೊಂಡವರು ಹಿ 3,314   

ಪುನರಾವರ್ತಿತ ಹೆಸರುಗಳು - 712   

ಗೈರು ಹಾಜರಾತಿ - 62   

ಇತರೆ ಪ್ರಕರಣಗಳು - 19   

94-ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ  

ಒಟ್ಟು ಮತದಾರರು: 2,79,144   

ಮತಗಟ್ಟೆಗಳು: 261   

ಮತದಾರರ ಮ್ಯಾಪಿಂಗ್‌: ಶೇ.98.01 ಪೂರ್ಣ   

ವಿತರಿಸಿದ ಫಾರ್ಮ್ಗಳು: 2,79,144   

ಸ್ವೀಕರಿಸಿದ ಫಾರ್ಮ್ಗಳು: 1,10,297 (ಶೇ.39.51)   

ಆನ್ಲೈನ್ ಮೂಲಕ ಸ್ವೀಕರಿಸಿದ ಅರ್ಜಿಗಳು: 962 (ಶೇ.0.34)   

ಈ ಕ್ಷೇತ್ರದಲ್ಲಿ 3,932 ಮತದಾರರನ್ನು ವಿವಿಧ ವರ್ಗಗಳಿಗೆ ಗುರುತಿಸಲಾಗಿದೆ. ಇವರಲ್ಲಿ:  

ಮೃತಪಟ್ಟವರು - 2,198   

ಶಾಶ್ವತವಾಗಿ ಸ್ಥಳಾಂತರಗೊಂಡವರು - 1,329   

ಈಗಾಗಲೇ ನೋಂದಾಯಿತರಾಗಿರುವವರು - 343   

ಗೈರು ಹಾಜರಾತಿ - 32   

ಇತರೆ ಪ್ರಕರಣಗಳು - 30   

ಎಸ್‌ಐಆರ್ ಅಭಿಯಾನದಡಿ ಮನೆ-ಮನೆಗೆ ವಿತರಿಸಲಾದ ಪೂರ್ವಮುದ್ರಿತ ಗಣತಿ ನಮೂನೆಗಳನ್ನು ಭರ್ತಿ ಮಾಡಿ, ನಿಗದಿತ ಅವಧಿಯೊಳಗೆ ಸಂಬಂಧಿಸಿದ ಬೂತ್ ಮಟ್ಟದ ಅಧಿಕಾರಿಗಳಿಗೆ ಸಲ್ಲಿಸುವಂತೆ 93-ಬಳ್ಳಾರಿ ಗ್ರಾಮೀಣ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ಸಹಾಯಕ ಆಯುಕ್ತ ರಾಜೇಶ್ ಎಚ್‌.ಡಿ. ಮತ್ತು 94-ಬಳ್ಳಾರಿ ನಗರ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್‌. ಮಂಜುನಾಥ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. 


ಸುದ್ದಿ ಓದಿ