ಒಟ್ಟಿಗೆ ತೆರೆ ಹಂಚಿಕೊಳ್ಳಲಿದ್ದಾರೆ ಶಿವಣ – ತಮಿಳು ಸ್ಟಾರ್ ವಿಕ್ರಂ : ಅಭಿಮಾನಿಗಳಿಗೆ ಖುಷಿ
ಬೆಂಗಳೂರು, ಜ 04 :ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಮತ್ತು ತಮಿಳುನಟ ವಿಕ್ರಂ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಜೊತೆಯಾಗಿ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಕಳೆದ ಕೆಲ ದಿನಗಳಿಂದ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ವಿಕ್ರಂ ಹಾಗೂ ಶಿವರಾಜ್ ಕುಮಾರ್ ಒಟ್ಟಾಗಿ ನಟಿಸಲಿರುವ ಸಿನಿಮಾ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಹಿಂದಿ, ಮಲಯಾಳಂನಲ್ಲಿಯೂ ಸಿದ್ಧವಾಗಲಿದೆ. ಪ್ಯಾನ್ ಇಂಡಿಯಾ ಸಿನಿಮಾ ಎನ್ನಲಾಗಿದ್ದು, ಕಥೆಯಲ್ಲಿ ನಟರಿಬ್ಬರಿಗೂ ಒಂದೇ ಬಗೆಯ ಆದ್ಯತೆ ನೀಡಲಾಗಿದೆಯಂತೆ.ಈ ಚಿತ್ರಕ್ಕೆ ಕಾರ್ತಿಕ್ ಸುಬ್ಬರಾಜು ಆಕ್ಷನ್ ಕಟ್ ಹೇಳಲಿದ್ದು, ಸದ್ಯದಲ್ಲೇ ಪ್ರೊಡಕ್ಷನ್ ಹೌಸ್ ಅಧಿಕೃತವಾಗಿ ಪ್ರಕಟಣೆ ನೀಡಲಿದೆ. ಈ ಸುದ್ದಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.