ಮನರಂಜನೆ

ಶನಿ ಮಹಾದೇವಪ್ಪನವರಿಗೆ 5 ಲಕ್ಷ ರೂ. ವಿಶೇಷ ಪ್ಯಾಕೇಜ್ ಗೆ ಶ್ರಮಿಸಿದ್ದೆವು: ಜಗ್ಗೇಶ್

ಶನಿ ಮಹಾದೇವಪ್ಪನವರಿಗೆ 5 ಲಕ್ಷ ರೂ. ವಿಶೇಷ ಪ್ಯಾಕೇಜ್ ಗೆ ಶ್ರಮಿಸಿದ್ದೆವು: ಜಗ್ಗೇಶ್

ಬೆಂಗಳೂರು, ಡಿ 04 : ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಶನಿ ಮಹಾದೇವಪ್ಪ ಅವರ ನಿಧನಕ್ಕೆ ಕಲಾವಿದರ ಸಂತಾಪ ಮುಂದುವರಿದಿದ್ದು, ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹಿರಿಯ ನಟ ಜಗ್ಗೇಶ್ ಟ್ವೀಟ್ ಮಾಡಿ, '1984ರಿಂದ ಅವರನ್ನು ಬಲ್ಲೆ.  ಮಾವ ಎಂದು ಕರೆಯುತ್ತಿದ್ದೆ, ಅಣ್ಣನ ಆತ್ಮೀಯತೆ ಅವರದ್ದು. ಸಕ್ಕರೆ ಖಾಯಿಲೆಯಿಂದ ಎರಡು ಕಣ್ಣು ಕಳೆದುಕೊಂಡಿದ್ದ. 10ವರ್ಷ ಹಿಂದೆ ಮೇಯರ್ ಫಂಡ್ ನಿಂದ ಈತನಿಗೆ ವಿಶೇಷ ಪ್ಯಾಕೇಜ್ 5 ಲಕ್ಷ ರೂ. ಬರುವಂತೆ ಶ್ರಮಿಸಿದ್ದೆ ಹಾಗು ವೈಯಕ್ತಿಕವಾಗಿ ನಾನು ಬ್ಯಾಂಕ್ ಜನಾರ್ದನ ಜೂತೆಹೋಗಿ ಕೈಲಾದ ಸಹಾಯ ಮಾಡಿದ್ದೆ' ಎಂದು ಹೇಳಿದ್ದಾರೆ.

ಕೋವಿಡ್ ಸೋಂಕಿಗೆ ತುತ್ತಾಗಿದ್ದ 90 ವರ್ಷದ ಶನಿ ಮಹದೇವಪ್ಪ ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಜನವರಿ 3ರಂದು ಕೊನೆಯುಸಿರೆಳೆದರು.  ಇವರ ನಿಧನಕ್ಕೆ ಸ್ಯಾಂಡಲ್ ವುಡ್ ನ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಸುದೀಪ್, ಪುನೀತ್ ರಾಜ್ ಕುಮಾರ್, ಸುಮಲತಾ ಅಂಬರೀಶ್,  ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ. ಕನ್ನಡ ಸಿನಿಮಾರಂಗದಲ್ಲಿ ಅನೇಕ ವರ್ಷಗಳಿಂದ ಕಲಾಸೇವೆ ಮಾಡಿರುವ ಮಹಾದೇವಪ್ಪ ಸುಮಾರು 550ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕವಿರತ್ನ ಕಾಳಿದಾಸ, ಭಕ್ತ ಕುಂಬಾರ, ಶ್ರೀನಿವಾಸ ಕಲ್ಯಾಣ ಸೇರಿದಂತೆ, ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ಸಿನಿಮಾಗಳು ಸೇರಿದಂತೆ ಎಲ್ಲಾ ರೀತಿಯ ಚಿತ್ರಗಳಲ್ಲೂ ಮಹಾದೇವಪ್ಪ ನಟಿಸಿದ್ದಾರೆ. ಅದರಲ್ಲೂ ವರನಟ ಡಾ.ರಾಜ್ ಕುಮಾರ್ ಅವರ ಸುಮಾರು 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

  


ಸುದ್ದಿ ಓದಿ