ಸಿರುಗುಪ್ಪ

ಎಸ್‌ಇಎಸ್ ಶಾಲಾ ಬಾಲಕಿಯರು ರಾಜ್ಯಮಟ್ಟಕ್ಕೆ ಆಯ್ಕೆ

ಎಸ್‌ಇಎಸ್ ಶಾಲಾ ಬಾಲಕಿಯರು ರಾಜ್ಯಮಟ್ಟಕ್ಕೆ ಆಯ್ಕೆ

ಸಿರುಗುಪ್ಪ 08: ಬಳ್ಳಾರಿ ಜಿಲ್ಲಾ ಮಟ್ಟದ ಅಥ್ಲೆಟಿಕ್ ವಿಭಾಗದಲ್ಲಿ ನಗರದ ಎಸ್‌ಇಎಸ್ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 

 ವೇದಾವತಿ ಜಿಗಿತ 400ಮೀ. ಓಟದಲ್ಲಿ ಪ್ರಥಮ, 200ಮೀ ಓಟದಲ್ಲಿ ದ್ವಿತೀಯ ಕೆ. ಶ್ರಾವಣಿ, ಚಕ್ರ ಎಸೆತದಲ್ಲಿ ಪ್ರಥಮ ಕಾವ್ಯ, ಚದುರಂಗದಲ್ಲಿ ಪ್ರಥಮ ಪೂಜ 600ಮೀ, ಪುಷ್ಪ 400ಮೀ ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಿರುಗುಪ್ಪ ವಿದ್ಯಾಸಂಸ್ಥೆ ಅಧ್ಯಕ್ಷ ಬಿ ಇ ದೊಡ್ಡಯ್ಯ ಶಾಲಾ ಮುಖ್ಯ ಶಿಕ್ಷಕಿ ಪದ್ಮಾವತಿ, ದೈಹಿಕ ಶಿಕ್ಷಣ ಶಿಕ್ಷಕಿ ಅಖ್ತರ್ ಬಾನು, ಸಹ ಶಿಕ್ಷಕರಾದ ಗಾದಿಲಿಂಗಪ್ಪ, ಜಾಜಿ ರಾಮಪ್ಪ ಇದ್ದರು. 


ಸುದ್ದಿ ಓದಿ