ಸೆನ್ಸೆಕ್ಸ್ : 44,729.52 ಅಂಕದೊಂದಿಗೆ ಹೊಸ ಎತ್ತರದಲ್ಲಿ ಬೆಳಗಿನ ವಹಿವಾಟು ಆರಂಭ
ಮುಂಬೈ, ಡಿಸೆಂಬರ್ 2 : ಆರೋಗ್ಯ ರಕ್ಷಣೆ, ಕೈಗಾರಿಕೆಗಳು, ಇಂಧನ ಮತ್ತು ಎಫ್‌ಎಂಸಿಜಿ ಷೇರುಗಳ ಖರೀದಿ ಬೆಂಬಲದೊಂದಿಗೆ
ಮುಂಬೈ ಷೇರು ವಿನಿಮಯ ಕೇಂದ್ರ (ಬಿಎಸ್ಇ)ದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಬುಧವಾರ ಬೆಳಗಿನ ವಹಿವಾಟಿನಲ್ಲಿ
74 ಅಂಕ ಏರಿಕೆಯೊಂದಿಗೆ ಹೊಸ ಎತ್ತರವಾದ 44,729.53ರ ಮಟ್ಟದಲ್ಲಿತ್ತು.
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಸೂಚ್ಯಂಕ ನಿಫ್ಟಿ ಸಹ 12 ಅಂಕ ಏರಿಕೆಯೊಂದಿಗೆ 13,121.40ರಲ್ಲಿತ್ತು. ಸೆನ್ಸೆಕ್ಸ್ ದಿನದ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 44,729.64 ಮತ್ತು 44,560.51ರಲ್ಲಿತ್ತು.
ನಿಫ್ಟಿ
ದಿನದ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 13,128.50 ಮತ್ತು 13,087.80ರಲ್ಲಿತ್ತು.
ಬಿಎಸ್ ಇ ನ ಪ್ರಮುಖ 30 ಷೇರುಗಳ ಪೈಕಿ 17 ಏರಿಕೆ ಕಂಡರೆ 13 ಕಂಪೆನಿಗಳ ಷೇರುಗಳು ಕುಸಿತ ಕಂಡಿವೆ.
ಏರಿಕೆ ಕಂಡ ಷೇರುಗಳ ಪೈಕಿ, ಟೈಟಾನ್, ಟಾಟಾ ಸ್ಟೀಲ್ , ಬಜಾಜ್ ಆಟೋ, ಮಾರುತಿ ಸುಜುಕಿ ಮತ್ತು ಏಷ್ಯನ್ ಪೇಂಟ್ಸ್ ಸೇರಿವೆ.
ನಷ್ಟ
ಕಂಡ ಷೇರುಗಳಲ್ಲಿ ಟೆಕ್ ಮಹೀಂದ್ರಾ, ಪವರ್‌ಗ್ರಿಡ್ , ಬಜಾಜ್ ಫೈನಾನ್ಸ್,ಮತ್ತು ಕೊಟಕ್ ಬ್ಯಾಂಕ್ ಸೇರಿವೆ.