ರಾಷ್ಟ್ರೀಯ

ಸೆನ್ಸೆಕ್ಸ್ : ಆರಂಭಿಕ ವಹಿವಾಟಿನಲ್ಲಿ 300 ಅಂಕ ಕುಸಿತ

ಸೆನ್ಸೆಕ್ಸ್ : ಆರಂಭಿಕ ವಹಿವಾಟಿನಲ್ಲಿ 300 ಅಂಕ ಕುಸಿತ

ಮುಂಬೈ, ಅ 29 : ಹಣಕಾಸು, ಎಫ್‌ಎಂಸಿಜಿ, ಕೈಗಾರಿಕೆಗಳು, ಆಟೋ ಮತ್ತು ಬಂಡವಾಳ ಸರಕು ಷೇರುಗಳ ಭಾರಿ ಮಾರಾಟದ ಹಿನ್ನೆಲೆಯಲ್ಲಿ ಮುಂಬೈ ಷೇರು ವಿನಿಮಯ ಕೇಂದ್ರ (ಬಿಎಸ್‌ಇ)ದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಗುರುವಾರ ಆರಂಭಿಕ ವಹಿವಾಟಿನಲ್ಲಿ 385 ಅಂಕ ಕುಸಿದು 39,537.17ರಲ್ಲಿತ್ತು.ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಸೂಚ್ಯಂಕ ನಿಫ್ಟಿ ಸಹ 96 ಅಂಕ ಕುಸಿದು 11,633.30ರಲ್ಲಿತ್ತು. ಸೆನ್ಸೆಕ್ಸ್ ಮಧ್ಯಂತರ ವಹಿವಾಟಿನಲ್ಲಿ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 39,886.16 ಮತ್ತು 39,524.25ರಲ್ಲಿತ್ತು. ನಿಫ್ಟಿ ಮಧ್ಯಂತರ ವಹಿವಾಟಿನಲ್ಲಿ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 11,709.60 ಮತ್ತು 11,609.20ರಲ್ಲಿತ್ತು. ಪ್ರಮುಖ 30 ಕಂಪೆನಿಗಳ ಷೇರುಗಳ ಪೈಕಿ 13 ಏರಿಕೆ ಕಂಡರೆ  17 ಕುಸಿದಿವೆ.ನಷ್ಟ ಕಂಡ ಷೇರುಗಳ ಪೈಕಿ ಎಲ್ ಅಂಡ್ ಟಿ,ಟೈಟಾನ್, ಒಎನ್‌ಜಿಸಿ, ಹಿಂದ್ ಯೂನಿಲಿವರ್ , ಮತ್ತು ಬಜಾಜ್ ಆಟೋ ಸೇರಿವೆ. ಉಳಿದಂತೆ ಅಲ್ಟ್ರಾಸೆಮ್ಕೊ, ಐಸಿಐಸಿಐ ಬ್ಯಾಂಕ್, ಟಿಸಿಎಸ್ ಮತ್ತು ಭಾರ್ತಿ ಏರ್ ಟೆಲ್‍ ನಷ್ಟ ಕಂಡಿವೆ.



ಸುದ್ದಿ ಓದಿ