ಸೆನ್ಸೆಕ್ಸ್: ಆರಂಭಿಕ ವಹಿವಾಟಿನಲ್ಲಿ 41,000 ಮಟ್ಟಕ್ಕೇರಿದ ಸೂಚ್ಯಂಕ
ಮುಂಬೈ, ಅ 15 :ದೂರಸಂಪರ್ಕ, ಆಟೋ ಮತ್ತಿತರ ಷೇರುಗಳಿಗೆ ಹೆಚ್ಚಿದ ಬೇಡಿಕೆ ಹಿನ್ನೆಲೆಯಲ್ಲಿ ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್ಇ)ದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಗುರುವಾರ ಆರಂಭಿಕ ವಹಿವಾಟಿನಲ್ಲಿ 41,000 ಮಟ್ಟ ದಾಟಿ, 41,048.05ರಲ್ಲಿತ್ತು.
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ(ಎನ್ಎಸ್ಇ)ದ ಸಂವೇದಿ ಸೂಚ್ಯಂಕ ನಿಫ್ಟಿ ಸಹ 52 ಅಂಕ ಏರಿಕೆ ಕಂಡು 12,923.45ರಲ್ಲಿತ್ತು.ಸೆನ್ಸೆಕ್ಸ್ ಮಧ್ಯಂತರ ವಹಿವಾಟಿನಲ್ಲಿ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 41,048.05 ಹಾಗೂ 40,451.13ರಲ್ಲಿತ್ತು. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ನಿಫ್ಟಿ ಮಧ್ಯಂತರ ವಹಿವಾಟಿನಲ್ಲಿ ಗರಿಷ್ಠ ಮತ್ತು ಕನಿಷ್ಠ 12,025.45 ಹಾಗೂ 11,906.36ರಲ್ಲಿತ್ತು.
ಪ್ರಮುಖ 30 ಕಂಪೆನಿಗಳ ಷೇರುಗಳ ಪೈಕಿ 14 ಏರಿಕೆ ಕಂಡರೆ, 16 ಇಳಿಕೆ ಕಂಡಿವೆ. ಲಾಭ ಗಳಿಸಿದ ಷೇರುಗಳಲ್ಲಿ ಟಾಟಾ ಸ್ಟೀಲ್, ಎನ್ ಟಿಪಿಸಿ, ಏಷ್ಯನ್ ಪೇಂಟ್ಸ್, ಒಎನ್ ಜಿಸಿ, ಬಜಾಜ್ ಫೈನಾನ್ಸ್ ಸೇರಿವೆ. ಉಳಿದಂತೆ ಟೆಕ್ ಮಹೀಂದ್ರಾ, ಎಚ್ ಸಿಎಲ್ ಟೆಕ್ನಾಲಜೀಸ್, ಟಿಸಿಎಸ್ ಮತ್ತು ಐಟಿಸಿ ನಷ್ಟ ಕಂಡಿವೆ.