ಶಿಗ್ಗಾವ್

ಎಸ್‌ಡಿಪಿಐ ಈ ಕ್ಷೇತ್ರದಲ್ಲಿ ತನ್ನ ಕಾರ್ಯ ಚಟುವಟಿಕೆ ಪ್ರಾರಂಭಿಸಿದೆ : ರಿಯಾಜ್ ಕರಬ್

ಎಸ್‌ಡಿಪಿಐ ಈ ಕ್ಷೇತ್ರದಲ್ಲಿ ತನ್ನ ಕಾರ್ಯ ಚಟುವಟಿಕೆ ಪ್ರಾರಂಭಿಸಿದೆ : ರಿಯಾಜ್ ಕರಬ್

 ಶಿಗ್ಗಾವಿ 15: ಎಸ್‌ಡಿಪಿಐ ಶಿಗ್ಗಾವಿ ಮತ್ತು ಸವಣೂರು ತಾಲೂಕುಗಳಲ್ಲಿ ತನ್ನ ಕಾರ್ಯ ಚಟುವಟಿಕೆ ಪ್ರಾರಂಭಿಸಿದೆ, ಈ ನಿಟ್ಟಿನಲ್ಲಿ ಸೆ.25 ರಂದು ರಾಜ್ಯ ಸಮಿತಿ ಸಭೆ ನಡೆಯುತ್ತಿರುವುದರಿಂದ ಅದರಲ್ಲಿ ನಮ್ಮ ಅಭ್ಯರ್ಥಿ ಯಾರು ಎಂಬುದನ್ನು ಬಹಿರಂಗಪಡಿಸಲಾಗುವುದು ಎಂದು ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಹಾಗೂ ಉಪಚುನಾವಣೆಯ ಉಸ್ತುವಾರಿ ರಿಯಾಜ್ ಕರಬ್ ತಿಳಿಸಿದರು. 

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಿಗ್ಗಾವಿ ಉಪಚುನಾವಣೆ ಪ್ರಯುಕ್ತ ನಡೆದ ಎಸ್‌ಡಿಪಿಐ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಇರತ ರಾಜಕೀಯ ಪಕ್ಷಗಳು ಇಲ್ಲಿನ ಜನರನ್ನು ಮತ ಬ್ಯಾಂಕ್‌ಗಳಾಗಿ ಬಳಸಿಕೊಂಡಿವೆಯೇ ಹೊರತು ಅಭಿವೃದ್ಧಿ ಕಾರ್ಯ ಮಾಡದೇ ಇರುವುದು ದೊಡ್ಡ ದುರಂತ, ಇಲ್ಲಿ ಗೆದ್ದ ಎಲ್ಲ ಪಕ್ಷದ ಅಭ್ಯರ್ಥಿಗಳು ಇಲ್ಲಿಯವರೆಗೂ ಜನಪರ ಕಾರ್ಯ ಮಾಡಿಲ್ಲ, ಬೇರೆ ತಾಲೂಕಿಗೆ ಹೋಲಿಸಿದರೆ ಶಿಗ್ಗಾವಿ ಯಾವುದೇ ಅಭಿವೃದ್ಧಿ ಕಂಡಿಲ್ಲ. ಹೀಗಾಗಿ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಹೋಗುವ ಅಭ್ಯರ್ಥಿ ಈ ಕ್ಷೇತ್ರಕ್ಕೆ ಬೇಕಿದೆ. ಆ ನಿಟ್ಟಿನಲ್ಲಿ ಎಸ್‌ಡಿಪಿಐ ಕೆಲಸ ಪ್ರಾರಂಭಿಸಿದೆ ಎಂದರು. 

ಈ ಸಂದರ್ಭದಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಮಹಮ್ಮದ್ ಖಾಸಿಂ ರಬ್ಬಾನಿ, ಸದಸ್ಯರಾದ ನಾಸೀರ್ ಇರ್ಷಾದ್, ಅಕ್ತೋರ್ ಅಲಿ, ತಬರಾಜ್ ಖಾನ್, ಇರ್ಷಾದ್ ಮಾಸನಕಟ್ಟಿ ಇತರರು ಇದ್ದರು. 


ಸುದ್ದಿ ಓದಿ