ರಾಣೆಬೆನ್ನೂರ

ರಷ್ಯಾ- ಉಕ್ರೇನ್ ಯುದ್ಧದ ಭೀತಿ: ಸಂದಿಗ್ದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು

ರಷ್ಯಾ- ಉಕ್ರೇನ್ ಯುದ್ಧದ ಭೀತಿ: ಸಂದಿಗ್ದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು


ಲೋಕದರ್ಶನ ವರದಿ 

ರಾಣಿಬೆನ್ನೂರ 26: ರಷ್ಯಾ ಮತ್ತು ಉಕ್ರೇನ್ ಮಧ್ಯ ಸಂಭಿಸುತ್ತಿರುವ ಯುದ್ಧದ ಭೀತಿಯಲ್ಲಿ ತಾಲೂಕಿನ ಚಳಗೇರಿ ಗ್ರಾಮದ ಇಬ್ಬರು ವಿದ್ಯಾರ್ಥಿಗಳಾದ ಸುಮನ ವೈಶ್ಯರ ಮತ್ತು ಅಮಿತ ವೈಶ್ಯರ ಸ್ವದೇಶಕ್ಕೆ ಬರಲಾಗದೆ ಅಲ್ಲಿಯೂ ಇರಲಾಗದೆ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ.  

      ಇಬ್ಬರು ವಿದ್ಯಾರ್ಥಿಗಳು ಉಕ್ರೇನ್ ದೇಶದ ಖಾರ್ಕಿವ್ ನ್ಯಾಷನಲ್ ಮೆಡಿಕಲ್ ಯುನಿರ್ವಸಿಟಿಯಲ್ಲಿ ಈ ಇಬ್ಬರು ವಿದ್ಯಾರ್ಥಿಗಳು ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಪರೀಕ್ಷೆ ಮುಗಿಸಿ ನಿರಾಳವಾಗಿ ಸ್ವದೇಶಕ್ಕೆ ಮರಳುವ ಸಂತೋಷದಲ್ಲಿರುವಾಗ ರಷ್ಯಾ ಮತ್ತು ಉಕ್ರೇನ್ ಮಧ್ಯ ಸಂಭಿಸುತ್ತಿರುವ ಯದ್ಧದ ಭೀತಿಯಲ್ಲಿ ಸಿಲುಕಿದ್ದಾರೆ. 

    ತಾಯಿ ಕನ್ನಿಕಾಪರಮೇಶ್ವರಿ ಮತ್ತು ತಂದೆ ಶ್ರೀಧರ ವೈಶ್ಯರ ಉದಯವಾಣಿಯೊಂದಿಗೆ ಮಾತನಾಡಿ, ನಾವು ಮಕ್ಕಳ ಪೋನ ಸಂಪರ್ಕದಲ್ಲಿ ನಿರಂತರವಾಗಿದ್ದೇವೆ ಪ್ರಸ್ತುತ ಕ್ಷೇಮವಾಗಿದ್ದಾರೆ. ಆದರೆ ಯಾವಾಗ ಏನು ಸಂಭವಿಸುತ್ತದೆಯೋ ಎಂಬುದರ ಬಗ್ಗೆ ದಿಗ್ಭ್ರಾಂತರಾಗಿದ್ದೇವೆ. ವಿದೇಶಾಂಗ ಇಲಾಖೆಯ ಅಧಿಕಾರಿಗಳು ನಮ್ಮ ಮಕ್ಕಳನ್ನು ಪ್ರಯತ್ನಶೀಲರಾಗಿ ದೇಶಕ್ಕೆ ಕರೆತರಬೇಕು ಎಂದು ಮನವಿ ಮಾಡಿದರು. 


ಸುದ್ದಿ ಓದಿ