ರಾಣೆಬೆನ್ನೂರ

ಗ್ರಾಮೀಣ ಮಟ್ಟದ ಹಾರ್ಡ್‌ ಟೆನ್ನಿಸ್ ಬಾಲ್ ಕ್ರೀಕೆಟ್ ಪಂದ್ಯಾವಳಿ

ಗ್ರಾಮೀಣ ಮಟ್ಟದ ಹಾರ್ಡ್‌ ಟೆನ್ನಿಸ್ ಬಾಲ್ ಕ್ರೀಕೆಟ್ ಪಂದ್ಯಾವಳಿ


ಲೋಕದರ್ಶನ ವರದಿ 

ರಾಣಿಬೆನ್ನೂರ 02:  ಕ್ರೀಡೆ ಸ್ಪರ್ಧೆಯ ಸಂಕೇತವಲ್ಲ. ಬಾಂಧವ್ಯ, ಸಾಮರಸ್ಯೆತೆಗೆ ಪ್ರೇರಕ. ಅದು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವ ಶಕ್ತಿ ಹೊಂದಿದ್ದು, ಸಮಾಜದಲ್ಲಿನ ಏಕತೆಗೆ ಪ್ರತೀಕವಾಗಿದೆ. ಗ್ರಾಮೀಣ ಕ್ರೀಡೆಯಲ್ಲಿ ಸಂಸ್ಕೃತಿಯು ಒಳಗೊಳ್ಳುವುದಿಂದ ಇಲ್ಲಿನ ಕ್ರೀಡೆಗಳಿಗೆ ಪ್ರೋತ್ಸಾಹ ಅಗತ್ಯ. ಸತತ ಪರಿಶ್ರಮದಿಂದ ಗ್ರಾಮೀಣ ಪಟುಗಳು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಬೇಕು ಎಂದು ಎನ್‌.ಡ್ಲಬ್ಯೂ.ಕೆ.ಎಸ್‌.ಆರ್‌.ಟಿ.ಸಿ ನಿಗಮದ ನಿರ್ದೇಶಕ ಸಂತೋಷಕುಮಾರ ಪಾಟೀಲ ಹೇಳಿದರು. 

     ಅವರು ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ   ರಾಯಲ್ ಕ್ರಿಕೆಟರ್ಸ್‌ ಆಯೋಜಿಸಿದ್ದ ಗ್ರಾಮೀಣಮಟ್ಟದ ಹಾರ್ಡ್‌ ಟೆನ್ನಿಸ್ ಬಾಲ್  ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಯುವಕರು ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಕ್ರೀಯಾತ್ಮಕ ಚಟುವಟಿಕೆಗಳಲ್ಲಿ ಸದಾ ತೊಡಗಿಸಿಕೊಳ್ಳಬೇಕು. ಕ್ರೀಡೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಲು ಸಾಧ್ಯ. ಕ್ರೀಡೆ ಯುವಜನರ ಚೇತನವಾಗಬೇಕು. ಮೊಬೈಲ್ ಬಳಕೆ ಕಡಿಮೆಮಾಡಿಕೊಂಡು ಅದರಿಂದ ಆಗುವ ದುಷ್ಪರಿಣಾಮದಿಂದ ದೂರವಿರಬೇಕು ಎಂದು ಸಂತೋಷ ಪಾಟೀಲ ಹೇಳಿದರು.  

    ವೇದಿಕೆಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಜ್ಯೋತಿ ಉಪ್ಪಿನ, ರತ್ನಮ್ಮ ಮಾಗಣ್ಣನವರ, ಬಿಜೆಪಿ ಗ್ರಾಮೀಣ ಯುವ ಘಟಕ ಅಧ್ಯಕ್ಷ ವೀರು ಪಾಟೀಲ, ಗದಿಗೆಪ್ಪ, ಯಶೋದಮ್ಮ, ಚಂದ್ರ​‍್ಪ, ಸುನಿತಾ, ಕಾವ್ಯಾ, ನೂರಸಾಬ್, ಮಾರುತಿ  ಸೇರಿದಂತೆ ಮತ್ತಿತರ ಗಣ್ಯರು, ಗ್ರಾಮದ ಮುಖಂಡರು, ಯುವಕರು ಉಪಸ್ಥಿತರಿದ್ದರು. 


ಸುದ್ದಿ ಓದಿ