ಕೊರೊನಾದಿಂದ ಗ್ರಾಮೀಣ ಸಾಂಸ್ಕೃತಿಕ ಸೊಗಡಿಗೆ ಹೊಡೆತ ಬಿದ್ದಿದೆ
ಲೋಕದರ್ಶನ ವರದಿ
ರಾಣೇಬೆನ್ನೂರು 28: ಜಾತ್ರೆ-ಹಬ್ಬ ಹರಿದಿನಗಳು ಗ್ರಾಮೀಣ ಭಾಗದಲ್ಲಿ ಸಾಂಸ್ಕೃತಿಕ ಕ್ಷೇತ್ರಕ್ಕೆ ತಮ್ಮದೇ ಆದ ಮೆರಗು ತಂದು ಗ್ರಾಮೀಣ ಬದುಕಿನ ಸೊಗಡಿಗೆ ಉತ್ತೇಜನ ನೀಡುತ್ತಿದ್ದವು. ಆದರೆ ಕೊರೊನಾ ಹೊಡೆತದಿಂದ ಗ್ರಾಮೀಣ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ, ಗ್ರಾಮೀಣರಿಗೆ ಮುದ ನೀಡುವ ಮನರಂಜನೆಯ ಕಾರ್ಯಕ್ರಮಗಳಿಗೆ ಹೊಡೆತ ಬಿದ್ದಿದೆ ಎಂದು ರೈತ ಹೋರಾಟಗಾರ, ತಾ.ಪಂ. ಮಾಜಿ ಅಧ್ಯಕ್ಷ ರವೀಂದ್ರಗೌಡ ಎಫ್. ಪಾಟೀಲ ಹೇಳಿದರು.
ಅವರು ಮುಷ್ಠುರು ಗ್ರಾಮದಲ್ಲಿ ಜರುಗಿದ ಶ್ರೀ ಜೌಡೇಶ್ವರಿ ಜಾತ್ರಾ ನಿಮಿತ್ಯ ಹಮ್ಮಿಕೊಂಡಿದ್ದ ನಮ್ಮನ್ನಗಲಿರುವ ಕರ್ನಾಟಕ ರತ್ನ ಪವರ್ಸ್ಟಾರ್ ‘ಅಪ್ಪು’ ನುಡಿನಮನ ಮತ್ತು ಜಾತ್ರಾ ನಿಮಿತ್ಯವಾಗಿ ಹಾಸ್ಯ ವೃತ್ತಿ ರಂಗಭೂಮಿ ಕಲಾವಿದ ಕೆ. ವೀರಯ್ಯಸ್ವಾಮಿಯವರ, ರಂಗ ಚೇತನ ಕಲಾಸಂಘ ದಾವಣಗೆರೆ ಇವರ ವತಿಯಿಂದ ಪ್ರದರ್ಶಿಸಲ್ಪಟ್ಟ “ ತವರುಮನೆ” ಅರ್ಥಾತ್ ಹೋರಾಟ ಮನೆ ಎಂಬ ಸುಂದರ ಸಮಾಜದ ನಾಟಕವನ್ನು ಉದ್ಘಾಟಿಸಿ ಮಾತನಾಡಿ ಅವರು ಕೊರೊನಾ ಮಧ್ಯದಲ್ಲಿಯೇ ನಾವು ಜೀವನವನ್ನು ರೂಪಿಸಿಕೊಳ್ಳಬೇಕಾಗಿದೆ, ಸಾಮಾಜಿಕ ಅಂತರ, ಮಾಸ್ಕ, ಸೆನಿಟೈಜರ್ ಬಳಕೆಯಿಂದ ನಿತ್ಯ ಜೀವನವನ್ನು ಸುಲಭವಾಗಿ ಸಾಗಿಸಬೇಕು ಎಂದರಲ್ಲದೆ, ಗ್ರಾಮೀಣ ಭಾಗದಲ್ಲಿ ಇನ್ನೂ 35 ಅ ಜನತೆ ಮೂಡನಂಬಿಕೆ ಮತ್ತು ಸುಲಭವಾಗಿ ಸಿಗದ ವ್ಯಾಕ್ಸಿನ್ ಸಂಬಂಧ ಲಸಿಕೆಯನ್ನು ಇನ್ನೂ ಹಾಕಿಸಿಕೊಳ್ಳದವರಿಂದ ಮಕ್ಕಳಿಗೆ ಮತ್ತು ಕುಟುಂಬದ ಸದಸ್ಯರಿಗೆ ತೊಂದರೆಯಾಗುತ್ತಲಿದೆ. ಆರೋಗ್ಯ ಇಲಾಖೆಯವರು ಈ ಬಗ್ಗೆ ತ್ವರಿತ ಗಮನ ಹರಿಸಿ ಕೊರೊನಾ ತಡೆಗೆ ಜಾಗೃತಿ ವಹಿಸಬೇಕೆಂದರು.
ಕಾರ್ಯಕ್ರಮವನ್ನು ಯುವ ನಾಯಕ ಚಂದ್ರಣ್ಣ ಬೇಡರ ಟೇಪ್ ಕತ್ತರಿಸುವ ಮೂಲಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಗೀರೀಶ ಮಾಗನೂರ, ರಮೇಶ ಗೊಂದಳ್ಳಿ, ಹರಿಹರಗೌಡ ಎಸ್. ಪಾಟೀಲ, ತಿಪ್ಪನಗೌಡ-ಗೌಡ್ರ, ಬಸವರಾಜ ಯಲಕನೂರ, ಮಲ್ಲಪ್ಪ, ಪ್ರಶಾಂತ ರಡ್ಡಿ ಯರೇಕುಪ್ಪಿ, ಬೀರ್ಪ ತಾಂಟಗಂಟೆ, ಮುಂತಾದವರು ಭಾಗವಹಿಸಿದ್ದರು. ಖ್ಯಾತ ನ್ಯಾಯವಾದಿ ನಾಗರಾಜ ಅಂಬಲಿ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಇತ್ತೀಚೆಗೆ ಸಿನಿಮಾ ಮತ್ತು ದೃಶ್ಯ ಮಾಧ್ಯಮಗಳ ಹಾವಳಿಯಿಂದ ಟಿ.ವಿ.ಯಲ್ಲಿ ಮೂಡಿಬರುವ ಧಾರವಾಹಿಗಳಿಂದ ವೃತ್ತಿರಂಗಭೂಮಿ ಕಲಾವಿದರ ಬದುಕು ಬರಡಾಗಿದೆ. ಆದರೆ ಮುಷ್ಠುರು ಗ್ರಾಮದಲ್ಲಿ ರಂಗಭೂಮಿ ಕಲಾವಿದರನ್ನು ಚಲನಚಿತ್ರ ನಟರನ್ನು , ಕಲಾವಿದರನ್ನು ಕರೆಯಿಸಿ ಸತ್ಕರಿಸಿ ಗೌರವ ಸಹಾಯಹಸ್ತ ನೀಡವ ಓದಾರ್ಯಗುಣ ಬೆಳೆದುಕೊಂಡು ಬಂದಿರುವುದು ಹೆಮ್ಮೆಯ ಸಂಗತಿ ಎಂದರಲ್ಲದೆ ರಂಗನಾಯಕಿ ಚಲನಚಿತ್ರದಲ್ಲಿ 50 ವರ್ಷಗಳ ಹಿಂದಯೇ ರಾಣೇಬೆನ್ನೂರುನಲ್ಲಿ ಕಲಾವಿದವಿರಿಗೆ ಪ್ರೋತ್ಸಾಹವನ್ನು ನೀಡುವುದರ ಬಗ್ಗೆ ಚಲನಚಿತ್ರದಲಿ ಎಳೆಎಳೆಯಾಗಿ ಬಿಂಬಿಸಲಾಗಿದೆ ಎಂದರು.
ಪ್ರಶಾಂತ ರೆಡ್ಡಿ ಯರೇಕುಪ್ಪಿ ನೆರವೇರಿಸಿಕೊಟ್ಟರು ಶುಭನಗೌಡ ಪಾಟೀಲ ಸ್ವಾಗತಿಸಿದರು. ಹನುಮಂತಪ್ಪ ಯಲ್ಲಕ್ಕನವರ ವಂದಿಸಿದರು.