ಗ್ರಾಮೀಣ ನಾಗರೀಕರು ಕಾನೂನಿನ ಬಗ್ಗೆ ಕನಿಷ್ಠ ಜ್ಞಾನ ಹೊಂದಬೇಕು: ಮಡಿವಾಳರ
ಲೋಕದರ್ಶನ ವರದಿ
ರಾಣೇಬೆನ್ನೂರು 26: ಭಾರತ ದೇಶವು ಎಂದಿನಿಂದಲೂ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ನಂಬಿಕೆಯಿಂದ ಭಾವೈಕ್ಯತೆಯೊಂದಿಗೆ ಬದುಕಿ ಬಾಳಿ ಜೀವನವನ್ನು ಸಾಗಿಸುತ್ತಾ ಬಂದಿದ್ದೇವೆ. ಆದರೆ ಇತ್ತೀಚಿನ ಕೇಲವು ವರ್ಷಗಳಲ್ಲಿ ಪರಸ್ಪರ ನಂಬಿಕೆ ವಿಶ್ವಾಸ ಇಲ್ಲದಂತಹ ಜೀವನವನ್ನು ಸಾಗಿಸುವಂತಾಗಿದೆ ಇದರಿಂದ ಯಾವ ಕುಟುಂಬದಲ್ಲಿಯೂ ಶಾಂತಿ, ನೆಮ್ಮದಿ ಇಲ್ಲದಂತಾಗಿ ಅಶಾಂತಿಯ ವಾತಾವರಣ ಮೂಡುತ್ತಲಿದೆ ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಉಪಾಧ್ಯಕ್ಷ, ನೋಟರಿ ಕುಮಾರ ಡಿ. ಮಡಿವಾಳರ ಹೇಳಿದರು.
ಅವರು ತಾಲೂಕಿನ ಕಾಕೂಳ ಗ್ರಾಮದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ 75ನೇ ವರ್ಷಾಚರಣೆ ನಿಮಿತ್ತವಾಗಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ 2015 ರ ಅನುಷ್ಠಾನದಡಿಯಲ್ಲಿ ರಾಜ್ಯ ಕಾನೂನು ಪ್ರಾದಿಕಾರವು ಜಿಲ್ಲಾ ಮತ್ತು ತಾಲೂಕಾ ಕಾನೂನು ಸೇವಾ ಸಮಿತಿಯು , ಜಿ.ಪಂ. ತಾ.ಪಂ, ಗ್ರಾ.ಪಂ ಮತ್ತು ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಗ್ರಾಮೀಣ ನಾಗರೀಕರ ಉಚಿತ ಕಾನೂನು ಅರಿವು ನೆರವು ಶಿಭಿರ ಉದ್ಘಾಟಿಸಿ ಮಾತನಾಡಿದರು. ಪ್ರತಿಯೋಬ್ಬರಿಗೂ ಇಂದು ಕಾನೂನಿನ ಕನಿಷ್ಠ ಜ್ಞಾನ ಅಗತ್ಯವಿದೆ. ಅವಿಭಕ್ತ ಕುಟುಂಬವು ಇಂದು ಬಹುತೇಕವಾಗಿ ವಿಭಕ್ತ ಕುಟುಂಬವಾಗಿ ಮಾರ್ಾಡಾಗಿದೆ ಇದರಿಂದ ಅನೇಕ ಸಮಸ್ಯೆಗಳು ಅಲ್ಲಲ್ಲಿ ಕಂಡು ಬರುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ ಎಂದ ಅವರು ಯಾವುದೇ ನ್ಯಾಯವನ್ನು ಪಡೆಯಬೇಕಾದರೆ ಕಾನೂನಿನ ಮೂರೆ ಹೂಗಬೇಕಾಗುತ್ತದೆ ಅಂತಹ ಸಂಧರ್ಭದಲ್ಲಿ ನ್ಯಾಯ ವಂಚಿತರು ಉಚಿತವಾಗಿ ಸಿಗುವ ಈ ಸಮಿತಿಯ ಪ್ರಯೋಜನವನ್ನು ಪಡೆಯುವುದರ ಮೂಲಕ ರಾಜ್ಯ ಪ್ರಾಧಿಕಾರದ ಉದ್ದೇಶಿತ ಯೋಜನೆಯನ್ನು ಯಶಸ್ವಿಗೂಳಿಸಲು ಮುಂದಾಗಬೇಕು ಎಂದು ಕುಮಾರ ಮಡಿವಾಳರ ಅವರು ಕರೆ ನೀಡಿದರು.
ಕಾಕೋಳ ಗ್ರಾಮ ಪಂಚಾಯಿತಿ ಸದಸ್ಯ ನೀಲಪ್ಪ ಮೋಟೆಬೆನ್ನೂರು ಅವರು ಕಾನೂನು ಅರಿವು ನೆರವು ಶಿಭಿರದ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿಗಳಾದ ಉಮೇಶ ಕೂನಬೇವ, ಎಂ.ಬಿ. ಜಾಡರ, ಪಿಡಿಓ ಎಸ್.ಸಮ್. ಮಾರೇರ, ಸದಸ್ಯರಾದ ಜಯಪ್ಪ ಅಗಸನಹಳ್ಳಿ, ಸೇರಿದಂತೆ ಮತ್ತಿತರ ಗಣ್ಯರು ಗ್ರಾಮದ ಮುಖಂಡರು ಅಭಿಯಾನದಲ್ಲಿ ಪಾಲ್ಗೂಂಡ ನ್ಯಾಯವಾದಿಗಳು ಉಪಸ್ಥಿತರಿದ್ದರು. ಶಿಭಿರದಲ್ಲಿ ನ್ಯಾಯವಾದಿಗಳಾದ ಶ್ರೀಮತಿ ಸರಸ್ವತಿ ಕಮದೂಡ, ವಿ.ಎಂ. ಸಂದ್ಯಾಳ, ಎಂ.ಬಿ ಜಾಡರ, ಯು.ಎಂ. ಕೂನಬೇವ ಮೋದಲಾದವರು ಮಾನವ ಹಕ್ಕು ಮತ್ತು ಕರ್ತವ್ಯಗಳು, ಲೋಕ್ ಅದಾಲತ್ ಎಂ.ವಿ. ಆ್ಯಕ್ಟ್ ಮತ್ತು ಪೋಕ್ಷೂ ಕಾಯ್ದೆ ಕುರಿತು ವಿಶೇಷ ಉಪನ್ಯಾಸ ನೀಡಿದರು.