ಗ್ರಾಮೀಣ ಸಂಸ್ಕೃತಿ ಪ್ರತಿಬಿಂಬಿತ ಕಲೆಗಳಿಗೆ ಪ್ರೋತ್ಸಾಹ ಅಗತ್ಯ: ಹೇಮಾವತಿ
ರಾಣೇಬೆನ್ನೂರು 26: ಗ್ರಾಮೀಣ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಜನಪದ ಹಾಗೂ ಸುಗಮ ಸಂಗೀತ ಕಾರ್ಯಕ್ರಮಗಳು ಇಂದು ಬಹುತೇಕವಾಗಿ ಪಾಶ್ಚಿಮಾತ್ಯ ಪ್ರಭಾವದ ಪರಿಣಾಮ ನೆಪತ್ಯಕ್ಕೆ ಸರಿಯುತ್ತಿರುವುದು ವಿಷಾಧಕರ ಸಂಗತಿಯಾಗಿದೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷೆ ಹೇಮಾವತಿ ಸಂತೋಷ ಉಪ್ಪಿನ್ ಹೇಳಿದರು.
ಅವರು ತಾಲೂಕಿನ ಹಳೆ ಹೊನ್ನತ್ತಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿತ ಡಾ.ಬಿ.ಆರ್.ಅಂಬೇಡ್ಕರ್ ಕೊರಮ ಸಮಾಜ ಸ್ವಸಹಾಯ ಸಂಘವು ಡಾ. ಬಿ.ಆರ್.ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನಾಚರಣೆ ಪ್ರಯುಕ್ತ ನಡೆದ ಸುಗಮ ಸಂಗೀತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನೆಲಭಾಷೆ ಜನಪದ ಸಂಸ್ಕೃತಿಯಾಗಿದ್ದು, ಸುಗಮ ಸಂಗೀತ ಭಾವನಾತ್ಮಕವಾಗಿ ಮನುಷ್ಯನ ಮಾನಸಿಕ ಶಾಂತಿ ಮತ್ತು ನೆಮ್ಮದಿ ನೀಡುವ ಮಹತ್ವದ ಸಂಗೀತವಾಗಿದೆ. ಅಂತಹ ಕಲೆ ಮತ್ತು ಕಲಾವಿದರು ಉಳಿದು ಬೆಳೆಯಬೇಕಾದರೆ ಸರ್ಕಾರದ ಜೊತೆಗೆ ಗ್ರಾಮೀಣ ನಾಗರೀಕರು ಸಹಾಯ, ಸಹಕಾರ ನೀಡಿದಾಗ ಮಾತ್ರ ಕಲಾವಿದರು ಮತ್ತಷ್ಟು ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯವಾಗುತ್ತದೆ ಎಂದರು.
ನೀಲವ್ವ ಈಶಪ್ಪ ಭಜಂತ್ರಿ ಅವರು ಕಾರ್ಯಕ್ರಮ ಉದ್ಘಾಟಿಸಿ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಗ್ರಾಮದ ಗಣ್ಯರಾದ ಚಂದ್ರಶೇಖರ ಸಿ ಹುಬ್ಬಳ್ಳಿ, ಕರಬಸಪ್ಪ ಬೆನ್ನೂರು, ಶೋಭಾ ನಿಟ್ಟೂರು, ಮಲ್ಲಿಕಾರ್ಜುನ ಹುಬ್ಬಳ್ಳಿ, ಪ್ರಭಾಕರ ಕಂಬಳಿ, ಪ್ರವೀಣ ಹುಬ್ಬಳ್ಳಿ, ರಮೇಶ ಈಳಗೇರ, ಪುಟ್ಟಪ್ಪ ಭಜಂತ್ರಿ, ದೇವೆಂದ್ರ್ಪ ಹಾವನೂರು, ವಿಷ್ಣು ಕನವಳ್ಳಿ, ಶಿವರಾಜ್ ಭಜಂತ್ರಿ, ಕರಬಸಪ್ಪ ರಾಟಿ, ಫಕ್ಕೀರಪ್ಪ ಭಜಂತ್ರಿ, ಮಹೇಶ ಬಣಕಾರ, ಹುಲಿಗೆಪ್ಪ ಭಜಂತ್ರಿ, ಚಂದ್ರಶೇಖರ ತಿಮ್ಮೇನಹಳ್ಳಿ, ಸುರೇಶ್ ಭಜಂತ್ರಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಸುಣಕಲ್ ಬಿದರಿ ಗ್ರಾಮದ ಜೈ ಭೀಮ್ ಕಲಾ ತಂಡದ ಹಿರಿಯ ಕಲಾವಿದರಾದ ರಾಮಪ್ಪ ಭ ಕುಸಗೂರು ಅವರು ನಡೆಸಿಕೊಟ್ಟ ಸುಗಮ ಸಂಗೀತ ಕಾರ್ಯಕ್ರಮವು ಗ್ರಾಮೀಣ ನಾಗರೀಕರ ಗಮನ ಸೆಳೆದವು.