18ರಂದು ರುದ್ರಮುನಿ ಶಿವಾಚಾರ್ಯರ ಪುಣ್ಯಾರಾಧನೆ
ಶಿಗ್ಗಾವಿ 16: : ತಾಲೂಕಿನ ಬಂಕಾಪುರದ ಅರಳೆಲೆ ಹಿರೇಮಠದ ರುದ್ರಮುನಿ ಶಿವಾಚಾರ್ಯರು. ಇವರ ಸಾಮರಸ್ಯದ 49 ನೇ ಪುಣ್ಯಾರಾಧನೆ ಮಹೋತ್ಸವ, ಜನ ಜಾಗ್ರತಿ ಧರ್ಮ ಸಮಾರಂಭ ಜ 18 ರಂದು ಶ್ರದ್ಧಾ ಭಕ್ತಿಯಿಂದ ಬಂಕಾಪುರದ ಮಠದ ಆವರಣದಲ್ಲಿ ಜರುಗಲಿದೆ. ಜ. 18 ಪ್ರಾಂಥಕಾಲ 4 ಗಂಟೆಗೆ ಲಿಂಗೈಕ್ಯ ಶ್ರೀಗಳವರ ಗದ್ದುಗೆಗೆ ಮಹಾರುದ್ರಾಭಿಷೇಕ ಜರುಗಲಿದೆ, ಬೆಳಿಗ್ಗೆ 6 ಗಂಟೆಗೆ ವೀರಭದ್ರಸ್ವಾಮಿಯ ಗುಗ್ಗಳ ಕಾರ್ಯಕ್ರಮ ಸಿದ್ದೇಶ್ವರ ದೇವಸ್ಥಾನದಿಂದ ಹೊರಡುವದು. 9 ಗಂಟೆಗೆ ಲಿಂ.ಷ.ಬ್ರ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳವರ ರಜತ (ಬೆಳ್ಳಿ) ಮೂರ್ತಿಯ ಉತ್ಸವವು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾವೇರಿ ಇವರ ಸಹಕಾರದೊಂದಿಗೆ ಕಲಾ ತಂಡ, ಹಾಗೂ ಸಕಲ ವಾದ್ಯ ವೈಭವಗಳೊಂದಿಗೆ ಮೇರವಣಿಗೆಗೆ ಹೋರಟು ಊರಿನ ಪ್ರಮುಖ ಬೀದಿಗಳ ಹಾಯ್ದು ಪುನಃ ಶ್ರೀ ಮಠಕ್ಕೆ ತಲುಪುವದು.
ಮದ್ಯಾಹ್ನ 12 ಗಂಟೆಗೆ ಮಹಾಗಣಾರಾಧನೆ ಸಾಯಂಕಾಲ 4 ಗಂಟೆಗೆ ದಿವ್ಯ ಸಾನಿದ್ಯ ಶ್ರೀ ರಂಭಾಪೂರಿ ಜಗದ್ಗುರು ಡಾ, ವೀರಸೋಮೇಶ್ವರ ಶಿವಾಚಾರ್ಯರು ಸಮಾರಂಭ ಜರುಗುವದು. ಈ ಧರ್ಮ ಸಭೆಯಲ್ಲಿ ನಾಡಿನ ಶಿವಾಚಾರ್ಯರು, ರಾಜಕೀಯ ಧುರೀಣರುಗಳು, ಉಪನ್ಯಾಸಕರು, ಸಂಗೀತಗಾರರು, ಪಾಲ್ಗೋಂಡು ಭಕ್ತಿ ಸೇವೆಯನ್ನು ಮಾಡುವರು.
ಜನ ಜಾಗೃತಿ ಧರ್ಮ ಸಮಾರಂಭದ ದಿವ್ಯ ಸಾನಿದ್ಯವನ್ನು ರಂಭಾಪೂರಿ ಜಗದ್ಗುರು ಡಾ, ವೀರಸೋಮೇಶ್ವರ ಶಿವಾಚಾರ್ಯರು ಬಾಳೆಹೊನ್ನೂರ ವಹಿಸುವರು. ಅಧ್ಯಕ್ಷತೆಯನ್ನು ಅರಳೇಲೆ ಹಿರೇಮಠದ ಷ.ಬ್ರ.ರೇವಣಸಿದ್ದೇಶ್ವರ ಶಿವಾರ್ಯರು ವಹಿಸುವರು. ನೇತೃತ್ವವನ್ನು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷರಾದ ವಿಮಲ ರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು, ಸಮ್ಮುಖವನ್ನು ಕರ್ಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯರು, ಮಳಲಿ ಸಂಸ್ಥಾನಮಠದ ಡಾ, ಗುರುನಾಗಭೂಷಣ ಶಿವಾಚಾರ್ಯ, ಗಂಜಿಗಟ್ಟಿ ಚರಮೂರ್ತೇಶ್ವರ ಮಠದ ಶಿವಲಿಂಗ ಶಿವಾಚಾರ್ಯ, ಮಣಕಟ್ಟಿಯ ಮುರುಘೇಂದ್ರಮಠದ ವಿಶ್ವಾರಾದ್ಯಾ ಮಹಾಸ್ವಾಮಿಗಳು, ಕೂಡಲ ಗುರುಮಹೇಶ್ವರ ಶಿವಾಚಾರ್ಯರು, ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು, ಶಿವಾನಂದ ಶಿವಾಚಾರ್ಯ, ಹಾವೇರಿ ಬಣ್ಣದಮಠದ ಅಭಿನವರುದ್ರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು, ನೆಗಳೂರ ಗುರುಶಾಂತೇಶ್ವರ ಶಿವಾಚಾರ್ಯರು, ರಾಣೆಬೆನ್ನೂರ ಮಧ್ದರಕಿ ಹಿರೇಮಠದ ಶಿವಯೋಗಿ ಶಿವಾಚಾರ್ಯರು, ಅಕ್ಕಿಆಲೂರನ ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯರು ಉಪಸ್ಥಿತರಿರುವರು.
ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ನೇರವೇರಿಸುವರು, ಮುಖ್ಯ ಅಥಿತಿಗಳಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗಮಿಸುವರು, ರುದ್ರಮುನಿ ಶ್ರೀಗಳ ಭಾವ ಚಿತ್ರ ಬಿಡುಗಡೆಯನ್ನು ಸಿ.ಬಿ.ಯಲಿಗಾರ ಸೇವಾಸಂಸ್ಥೆಯ ಅಧ್ಯಕ್ಷ ಶಶಿಧರ ಯಲಿಗಾರ ನೇರವೆರಿಸುವರು. ಅಥಿತಿಗಳಾಗಿ ಮಾಜಿ ಸಂಸದ ಮಂಜುನಾಥ ಕುನ್ನೂರ, ಹಾವೇರಿ ನಗರಸಭಾ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಉದ್ದಿಮೆದಾರ ಸಿದ್ದಾರ್ಥಗೌಡ್ರ ಪಾಟೀಲ, ಪ್ರಥಮ ದರ್ಜೆ ಗುತ್ತಿಗೆದಾರ ಶ್ರೀಕಾಂತ ದುಂಡಿಗೌಡ್ರ, ರೈತ ಸೇನಾ ಜಿಲ್ಲಾ ಅಧ್ಯಕ್ಷ ಯುವ ಚಿತ್ರನಟರಾದ ವರುಣಗೌಡ ಎಂ ಪಾಟೀಲ, ಆಗಮಿಸುವರು. ಡಾ, ಆರ್.ಎಸ್.ಅರಳೆಲೆ ಹಿರೇಮಠ ಸೇರಿದಂತೆ ಹಲವರುಉಪಸ್ಥಿತರಿರುವರು.