ಚಿಕ್ಕೋಡಿ

ಗ್ರಾಮೀಣ ರಸ್ತೆಗಳ ಸುಧಾರಣೆಗೆ ರೂ.3.40 ಕೋಟಿ: ಪವನ ಕತ್ತಿ

ಗ್ರಾಮೀಣ ರಸ್ತೆಗಳ ಸುಧಾರಣೆಗೆ ರೂ.3.40 ಕೋಟಿ: ಪವನ ಕತ್ತಿ
ಚಿಕ್ಕೋಡಿ: ತಾಲೂಕಿನ ಬೆಳಗಲಿ ಕ್ರಾಸ್‌ದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಬಿಜೆಪಿ ಮುಖಂಡ ಪವನ ಕತ್ತಿ ಚಾಲನೆ ನೀಡಿದರು.

ಚಿಕ್ಕೋಡಿ 24: ನಾಗರಮುನ್ನೋಳಿ ಜಿಲ್ಲಾ ಪಂಚಾಯ್ತಿ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಗ್ರಾಮಗಳಲ್ಲಿ ಒಟ್ಟು ರೂ. 3.40 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಬಿಜೆಪಿ ಮುಖಂಡ ಪವನ ಕತ್ತಿ ಹೇಳಿದರು. 

ತಾಲೂಕಿನ ನಾಗರಮುನ್ನೋಳಿ ಜಿಲ್ಲಾ ಪಂಚಾಯ್ತಿ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು. 

ತಾಲೂಕಿನ ಜಾಗನೂರ ಗ್ರಾಮದಿಂದ ಹನುಮಂತ ಖಿಂಡಿ ತೋಟದ ಮೂಲಕ ಕರೆಮ್ಮದೇವಿ ದೇವಸ್ಥಾನದ ಕೂಡು ರಸ್ತೆ ಸುಧಾರಣೆಗೆ ರೂ. 40 ಲಕ್ಷ, ಮೀರಾಪುರಹಟ್ಟಿ ಗ್ರಾಮದ ಕೋಲಾರ ತೋಟದಿಂದ ಮಹಾನಂದಿ ತೋಟದವರೆಗೆ ರಸ್ತೆ ಸುಧಾರಣಗೆ ರೂ.30 ಲಕ್ಷ, ನಾಗರಮುನ್ನೋಳಿ ಗ್ರಾಮದ ಬೆಳಗಲಿ ಕ್ರಾಸ್‌ದಿಂದ ಪುಂಡಲಿಕ ಕಾಂಬಳೆ ತೋಟದವರೆಗೆ ರಸ್ತೆಗೆ ಸುಧಾರಣೆಗೆ ರೂ. 80 ಲಕ್ಷ, ಬೆಳಗಲಿ (ಕಲ್ಮಡ ಅಂಗನವಾಡಿ) ದಿಂದ ಕಿವಡನ್ನವರ ತೋಟದವರೆಗೆ ರಸ್ತೆ ಸುಧಾರಣೆಗೆ ರೂ.70 ಲಕ್ಷ, ಬೆಳಕೂಡ ಗ್ರಾಮದ ನಾಗರಮುನ್ನೋಳಿ ಅಡ್ಡ ರಸ್ತೆಯಿಂದ ಬಸವನಗರ ರಸ್ತೆ ಸುಧಾರಣೆಗೆ ರೂ.40 ಲಕ್ಷ, ಇಟ್ನಾಳ ಗ್ರಾಮದ ಜೋಡಕುರಳಿ ರಸ್ತೆಯಿಂದ ಟೋನಪೆ ಕಾಲೋನಿವರೆಗೆ ರಸ್ತೆ ಸುಧಾರಣೆಗೆ ರೂ.40 ಲಕ್ಷ, ಉಮರಾಣಿ ಗ್ರಾಮದಲ್ಲಿ ಲಕ್ಷ್ಮೀ ಗುಡಿಯಿಂದ ದುಂಡಯ್ಯ ಮಠಪತಿ ರಸ್ತೆ ಸುಧಾರಣೆಗೆ ರೂ. 40 ಲಕ್ಷ ಅನುದಾನ ಮಂಜೂರಾಗಿದೆ.  

ಆಯಾ ಗ್ರಾಮಗಳ ರೈತಾಪಿ ಜನರ ಅನುಕೂಲಕ್ಕಾಗಿ ರಸ್ತೆಗಳನ್ನು ನಿರ್ಮಿಸಲಾಗುತ್ತಿದ್ದು, ಗ್ರಾಮಸ್ಥರು ಉಸ್ತುವಾರಿ ವಹಿಸಿ ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಿಕೊಳ್ಳಬೇಕು. ಅಧಿಕಾರಿಗಳು ಮತ್ತು ಗುತ್ತಿಗೆದಾರರು ವಿಶೇಷ ಮುತುವರ್ಜಿ ವಹಿಸಿ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಬೇಕು ಎಂದು ಪವನ ಕತ್ತಿ ಸೂಚನೆ ನೀಡಿದರು. 

ಸಂಕೇಶ್ವರದ ಹಿರಾ ಶುಗರ ನಿರ್ದೇಶಕ ಸುರೇಶ ಬೆಲ್ಲದ, ಮುಖಂಡ ಗುಲಾಬ ಜಮಾದಾರ, ತಿಮ್ಮಣ್ಣಾ ಗಾಡಿವಡ್ಡರ, ಲಾಡಜಿ ಮುಲ್ತಾನಿ, ಮುರಿಗೆಪ್ಪ ಅಡಿಸೇರಿ, ವಿರುಪಾಕ್ಷ ಈಟಿ, ಸಿದ್ದು ಖಿಂಡಿ, ಅರ್ಜುನ ಕಿವಡ, ಡಾ.ಅರುಣ ಮರಾ​‍್ಯಯಿ, ರಾಮಣ್ಣ ಹಾಲಟ್ಟಿ, ಶಿವರಾಯ ಸನದಿ, ಲಕ್ಷ್ಮಣ ಹನುಮನ್ನವರ, ಲಕ್ಷ್ಮಣ ಹುದ್ದಾರ, ಮಹೇಶ ಕೋರೆ, ಈರಗೌಡ ಪಾಟೀಲ, ಪ್ರಕಾಶ ಮನಗೂಳಿ, ಮಲ್ಲಪ್ಪ ಟೋನಪೆ, ಮತ್ತಿತರರು ಇದ್ದರು.  


ಸುದ್ದಿ ಓದಿ