ರಾಣೆಬೆನ್ನೂರ

ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅನುಪಮವಾದದು: ಸುರೇಶ್ ಹುಗ್ಗಿ

ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅನುಪಮವಾದದು: ಸುರೇಶ್ ಹುಗ್ಗಿ

ರಾಣೇಬೆನ್ನೂರು 24:ರಾಣೆಬೆನ್ನೂರು ತಾಲೂಕಿನ  ಪ್ರೌಢ ಶಾಲೆಗಳ ಎಸ್ ಎಸ್ ಎಲ್ ಸಿ  ವಾರ್ಷಿಕ ಪರೀಕ್ಷಾ ಫಲಿತಾಂಶ ಹೆಚ್ಚಿಸಲು ತಾವೆಲ್ಲ ಪ್ರಯತ್ನಿಸಬೇಕಾಗಿದೆ. ಮುಂಬರುವ ಸ್ಪರ್ಧಾತ್ಮಕ ದಿನಗಳಿಗೆ ನಮ್ಮ ಶಾಲೆಗಳಿಗೆ ಬರುವ ಮಕ್ಕಳನ್ನು ತಯಾರಿಗೊಳಿಸಬೇಕಾಗಿದೆ. ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೆ ಪುನಶ್ಚೇತನ ಚಟುವಟಿಕೆಗಳನ್ನು ರೂಪಿಸಿಕೊಂಡು ತಮ್ಮ ಶಾಲೆ ಹಾಗೂ ತರಗತಿಗಳಲ್ಲಿ ಅಳವಡಿಸಿಕೊಳ್ಳಲು ಮುಂದಾಗಬೇಕಾದ ಅಗತ್ಯವಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಸುರೇಶ್ ಹುಗ್ಗಿ ಹೇಳಿದರು.  

ಅವರು ನಗರದ ಮೌನೇಶ್ವರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಇಂಗ್ಲಿಷ್ ಭಾಷಾ ಶಿಕ್ಷಕರ ಎಸ್‌.ಎಸ್‌.ಎಲ್‌. ಸಿ.ಪ್ರಶ್ನೆ ಪತ್ರಿಕೆಗಳ ತಯಾರಿಕೆ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಸುಂದರ್ ಅಡಿಗ ಅವರು ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಭಾಷೆಯು ಪ್ರಮುಖವಾಗಿದೆ. ಪರೀಕ್ಷಾ ದೃಷ್ಟಿಯಿಂದ ಕಬ್ಬಿಣದ ಕಡಲೆಯಂತೆ ಭಾವಿಸಿರುವ ಆಂಗ್ಲ ಭಾಷೆಯನ್ನು ನಮ್ಮ ಮಕ್ಕಳಿಗೆ ಸುಲಭಗೊಳಿಸಿ, ಅವರ ಶೈಕ್ಷಣಿಕ ಪ್ರಗತಿಗೆ ಮತ್ತು ಸರಳತೆಗೆ ಶ್ರಮಿಸಬೇಕಾಗಿದೆ ಎಂದರು. ಉಪನಿರ್ದೇಶಕರಾದ ಸುರೇಶ್ ಹುಗ್ಗಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಾಮ ಸುಂದರ ಅಡಿಗ, ಸಮಾಜ ವಿಜ್ಞಾನ ಪರೀವೀಕ್ಷಕರಾದ ಆರ್ ಮಂಜಪ್ಪ, ಕಾರ್ಯಾಗಾರದ  ಸಂಪನ್ಮೂಲ ಶಿಕ್ಷಕರಾದ ಕಳಸೂರು ಪ್ರೌಢಶಾಲೆಯ ಆಂಗ್ಲ ಭಾಷೆ ಶಿಕ್ಷಕರಾದ ಕುಮಾರ ಕಾಳೆ  ಹಾಗೂ  ತಾಲೂಕ  ಆಂಗ್ಲ ಭಾಷೆ ಶಿಕ್ಷಕರ ವೇದಿಕೆಯ ಅಧ್ಯಕ್ಷರಾದ ಜಗದೀಶ ಮಳೆಮಠ ಇವರನ್ನು ವೇದಿಕೆಯ ಪರವಾಗಿ ಗೌರವಾದರಗಳೊಂದಿಗೆ  ಸನ್ಮಾನಿಸಲಾಯಿತು. ಹಾವೇರಿ ಜಿಲ್ಲಾ ಇಂಗ್ಲೀಷ್ ಭಾಷಾ ಶಿಕ್ಷಕರ ವೇದಿಕೆಯ ಗೌರವಾಧ್ಯಕ್ಷರಾದ ಹಾಗೂ ರಾಜ್ಯ ಸಂಪನ್ಮೂಲ ಶಿಕ್ಷಕರಾದ ಎಸ್‌.ಆರ್‌. ತೆವರಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಆಂಗ್ಲ ಭಾಷೆಯನ್ನು ಕಷ್ಟಪಟ್ಟು ಕಲಿಸದೆ ಇಷ್ಟಪಟ್ಟು ಕಲಿಸುವ ಶಿಕ್ಷಕರು ನಾವಾಗಬೇಕು ಎಂದು ಹೇಳಿದರು. 

ಮೌನೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಜಿ.ಎಸ್‌. ಬಡಿಗೇರ್ , ಇಸಿಒ ಎಸ್‌.ಎಂ. ಬನ್ನಿಕೋಡ, ಲೋಕೇಶ ನಾಯಕ , ಸೂರಲಿಂಗಯ್ಯ, ಎಂ.ಬಿ.ಪೂಜಾರ, ಟಿ ಗುಡ್ಡಪ್ಪ , ಜಿ.ಬಿ.ವಿವೇಕಾನಂದ, ಎಸ್‌.ಎಂ. ಸಂಗಾಪುರ, ಆರ್ ಎಚ್ ಹರಪನಹಳ್ಳಿ  ಎಂ. ಬಿ. ಕೋಟೆಪ್ಪನವರ,  ಎಂ ಬಿ ಪೂಜಾರ, ಆನಂದ ದೇವರಮನಿ, ಎಸ್ ಬಿ ಉಜಿನಿ , ಕುಬೇಂದ್ರ ನಾಯಕ, ಅಕ್ಕಮ್ಮ ಮಣ್ಣಮ್ಮನವರ, ಶಿವಲೀಲಾ ಮಳಲಿ, ಹೇಮಾ ಜಿ,  ಮುಂತಾದ ಶಿಕ್ಷಕರು ಹಾಜರಿದ್ದರು.ವಾಗೀಶ ವಾಲಿ ಕಾರ್ಯಕ್ರಮ ನಿರೂಪಿಸಿದರು. ಆರ್‌. ಐ.ಮಿಶ್ರಕೋಟಿ ವಂದಿಸಿದರು. 


ಸುದ್ದಿ ಓದಿ