ಸೌಂದತ್ತಿ

ಶಾಲೆಗಳ ಅಭಿವೃದ್ಧಿಯಲ್ಲಿ ಸಮುದಾಯದ ಪಾತ್ರ ಮುಖ್ಯ: ಬೆಟ್ಟದ

ಶಾಲೆಗಳ ಅಭಿವೃದ್ಧಿಯಲ್ಲಿ ಸಮುದಾಯದ ಪಾತ್ರ ಮುಖ್ಯ: ಬೆಟ್ಟದ

ಸವದತ್ತಿ 01: ಶಾಲೆಗಳು ಅಭಿವದ್ಧಿಯಾಗಬೇಕಾದರೆ ಭೌತಿಕ ಸೌಲಭ್ಯಗಳು ದೊರೆಯಬೇಕು. ಅದಕ್ಕಾಗಿ ಸಮುದಾಯದ ಪಾತ್ರವೂ ಸಹ ಅಷ್ಟೇ ಮುಖ್ಯವಾಗಿದೆ ಎಂದು ಸಂಪನ್ಮೂಲ ಶಿಕ್ಷಕ ಎಸ್‌.ಬಿ.ಬೆಟ್ಟದ ತಮ್ಮ ಅಭಿಪ್ರಾಯ ಹಂಚಿಕೊಂಡರು. ಸ್ಥಳೀಯ ಸ.ಕಿ.ಪ್ರಾ ಕನ್ನಡ ಶಾಲೆ ಶಾಂತಿನಗರದಲ್ಲಿ ಮಕ್ಕಳ ಕಲಿಕಾ ಹಬ್ಬ ಮತ್ತು ಬೀಳ್ಕೊಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಕ್ಕಳಿಂದಲೇ ತಯಾರಿಸಿದ ಪೀಪಿ ಆಟಿಕೆಯನ್ನು ಊದುವ ಮೂಲಕ ಉದ್ಘಾಟಿಸಿದರು. ನಂತರ ಶಾಲೆಯ ಮುಖ್ಯ ಶಿಕ್ಷಕರಾದ ತಮ್ಮನಗೌಡ ಏಗನಗೌಡ್ರ ಮಾತನಾಡಿ ಸಮುದಾಯದ ಸಹಭಾಗಿತ್ವ ಶಾಲೆಗಳ ಏಳಿಗೆಗೆ ಅತ್ಯಗತ್ಯ ಎಂದರು. ಶಾಲಾ ಮಕ್ಕಳು ತಯಾರಿಸಿದ ಕಲಿಕಾ ಹಬ್ಬದ ವಸ್ತು ಪ್ರದರ್ಶನ ಏರಿ​‍್ಡಸಲಾಗಿತ್ತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.  ಶಿಕ್ಷಕರಾದ ಆರ್‌.ಪಿ.ನಲವಡೆ, ಎನ್‌.ಎನ್‌.ಕಬ್ಬೂರ ಶಿಕ್ಷಕಿ ಎನ್‌.ಎಸ್‌.ಚಂದಾಪೂರ ಹಾಗೂ ಶಾಲೆಯ ಎಸ್‌.ಡಿ.ಎಮ್‌.ಸಿಯ ಸರ್ವ ಸದಸ್ಯರು ಹಾಜರಿದ್ದರು. 


ಸುದ್ದಿ ಓದಿ