ಶಿಗ್ಗಾವ್

ಮಕರ ಸಂಕ್ರಾಂತಿಗೆ ಗೊಟಗೋಡಿಯ ಉತ್ಸವಕೆ ರಾಕ್‌ಗಾರ್ಡನ್ ಸಜ್ಜು

ಮಕರ ಸಂಕ್ರಾಂತಿಗೆ ಗೊಟಗೋಡಿಯ ಉತ್ಸವಕೆ ರಾಕ್‌ಗಾರ್ಡನ್ ಸಜ್ಜು

ಸುಧಾಕರದೈವಜ್ಞ 

ಶಿಗ್ಗಾವಿ : ಮಕರ ಸಂಕ್ರಾಂತಿ ಹಬ್ಬ ಬಂತೆಂದರೆ ಗೊಟಗೋಡಿಯ ಉತ್ಸವ ರಾಕ್‌ಗಾರ್ಡನ್‌ನಲ್ಲಿ ಸಂಭ್ರಮದ ವಾತಾವರಣ ಸೃಷ್ಟಿ ಆಗಿರುತ್ತದೆ ಅಲ್ಲದೇ ಹಬ್ಬದ ಸಂದರ್ಭ, ಗೊತ್ತಿದ್ದೋಗೊತ್ತಿಲ್ಲದೆಯೋ ತಾವು ಮಾಡಿದ ಪಾಪಗಳಿಂದ ವಿಮೋಚನೆ ಪಡೆಯಲು ಹಾಗೂ ಉತ್ತರಾಯಣ ಆಹ್ವಾನಿಸಲು ನದಿಗಳಲ್ಲಿ ಸ್ನಾನ ಮಾಡುವುದು ವಾಡಿಕೆ. ಇದಕ್ಕೆ‘ಕರಿ’ ಸ್ನಾನಎನ್ನುತ್ತಾರೆ. 

ಕರಿ ಸ್ನಾನದಬಳಿಕ ಹಬ್ಬಕ್ಕೆಂದು ಮುಂಚೆಯೇ ಮನೆಯಲ್ಲಿ ತಯಾರಿಸಿದ ಸಜ್ಜಿರೊಟ್ಟಿ, ಎಣ್ಣೆಗಾಯಿ ಪಲ್ಯ, ಹುಗ್ಗಿಮತ್ತಿತರ ಖಾದ್ಯಗಳನ್ನು ಕಟ್ಟಿಕೊಂಡು ಯಾವುದಾದರೂ ಪ್ರವಾಸಿ ಕೇಂದ್ರಗಳಿಗೋ ಅಥವಾ ಪುಣ್ಯಕ್ಷೇತ್ರಗಳಿಗೆ ಕುಟುಂಬ ಸಮೇತರಾಗಿ ಹೋಗಿ ಸಹಭೋಜನ ಮಾಡುತ್ತಾರೆ. ವಿಶಾಲವಾದ ಪ್ರದೇಶದಲ್ಲಿ ಹಸಿರು ಪರಿಸರದ ಮಧ್ಯೆ ತಳೆದು ನಿಂತಿರುವ ಉತ್ಸವ ರಾಕ್‌ಗಾರ್ಡನ್ ವೀಕ್ಷಿಸಲು ಸಂಕ್ರಾಂತಿ ಹಬ್ಬದಎರಡು ದಿನರಾಜ್ಯದ ನಾನಾ ಕಡೆಯಿಂದ ಪ್ರವಾಸಿಗರು ಬರುತ್ತಾರೆ. ಇವರಿಗೆ ಅಗತ್ಯ ಸೌಲಭ್ಯಗಳು ಸೇರಿದಂತೆ ಮತ್ತಿತರ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಲಾಗಿರುತ್ತದೆ. 

ಸ್ವಯಂ ಸೇವಕರ ನಿಯೋಜನೆ : ಯಾವುದೇ ಅಹಿತಕರ ಘಟನೆ ಸಂಭವಿಸದಂತೆ, ಪ್ರವಾಸಿಗರಿಗೆ ಅಗತ್ಯ ಮಾಹಿತಿ ಹಾಗೂ ಮಾರ್ಗದರ್ಶನ ನೀಡಲು ಸುತ್ತಮುತ್ತಲಿನ ಗ್ರಾಮಗಳ 100 ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ. ಶುದ್ಧಕುಡಿವ ನೀರು: ಗಾರ್ಡನ್ ವೀಕ್ಷಿಸುವಾಗ ಬಳಲಿದವರಿಗೆ ವಿಶ್ರಾಂತಿ ಪಡೆಯಲು ವಿಶೇಷ ಆಸನಗಳು ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. 

ಆಂಬ್ಯುಲೆನ್ಸ್‌ : ಪ್ರವಾಸಿಗರ ಸುರಕ್ಷತೆಗಾಗಿ ಹಾವೇರಿ ಜಿಲ್ಲಾಆರೋಗ್ಯ ಇಲಾಖೆಯ ಸಹಕಾರದೊಂದಿಗೆ ವಿಶೇಷ ಆಂಬ್ಯುಲೆನ್ಸ್‌ ವ್ಯವಸ್ಥೆ ಮಾಡಲಾಗಿದೆ. ಬಂದೋ ಬಸ್ತ್‌:ಹಾವೇರಿಜಿಲ್ಲಾ ಪೊಲೀಸ್‌ಅಧೀಕ್ಷರ ನೆರವಿನಿಂದ ಜ.14 ಮತ್ತು 15 ರಂದುಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾಕ್ರಮವಾಗಿ ಪೊಲೀಸ್ ಬಂದೋ ಬಸ್ತ್‌ಕೂಡ ಮಾಡಲಾಗಿದೆ. 

ಡೊಳ್ಳುಕುಣಿತ ಪ್ರದರ್ಶನ : ಈ ಬಾರಿ ಸಂಕ್ರಾಂತಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲು ಉತ್ಸವ ರಾಕ್‌ಗಾರ್ಡನ್ ನಿರ್ಧರಿಸಿದೆ. ಹಾನಗಲ್‌ತಾಲೂಕು ಶೇಷಗಿರಿಯ ಶ್ರೀ ಮೈಲಾರಲಿಂಗೇಶ್ವರ ಜಾನಪದ ಕಲಾ ತಂಡದ ಡೊಳ್ಳು ಕುಣಿತ ಪ್ರದರ್ಶನದ ಮೂಲಕ ಪ್ರವಾಸಿಗರನ್ನು ಸ್ವಾಗತಿಸಲಿದೆ. ಸವಿರುಚಿಊಟ :ಗಾರ್ಡನ್‌ನ ಕ್ಯಾಂಟೀನ್‌ನಲ್ಲಿ ಶೇಂಗಾ ಹೊಳಿಗೆ, ಮಾದ್ಲಿ, ಜೋಳದ ಕಡಕ್‌ರೊಟ್ಟಿ, ಸಜ್ಜಿರೊಟ್ಟಿ, ಚಪಾತಿ, ಅನ್ನ-ಸಾಂಬಾರು, ಮೊಸರನ್ನ, ಎಣ್ಣೆಗಾಯಿ ಪಲ್ಯ, ಕಾಳು ಪಲ್ಯ, ಕೊಸಂಬರಿ, ಪಾಯಸ, ಉಪ್ಪಿನಕಾಯಿ, ಚಟ್ನಿ ಪುಡಿ, ಗುರೆಳ್ಳು ಪುಡಿ ಮತ್ತಿತರ ಖಾದ್ಯಗಳನ್ನೊಳಗೊಂಡ ಸವಿರುಚಿಯಾದ ಊಟ ದೊರೆಯುಲಿದೆ. 


ಸುದ್ದಿ ಓದಿ