ಜುಗೂಳ-ಮಂಗಾವತಿಯಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ : ರಾಜು ಕಾಗೆ
ಕಾಗವಾಡ 03 : ಕೃಷ್ಣಾ ನದಿ ತೀರದ ಪ್ರಭಾವ ಪೀಡಿತ ಜುಗೂಳ, ಮಂಗಾವತಿ ಗ್ರಾಮಗಳ ಗ್ರಾಮಸ್ಥರಿಗೆ ಪ್ರವಾಹ ಸಂದರ್ಭದಲ್ಲಿ ಸುರಕ್ಷಿತ ಸ್ಥಳಗಳಿಗೆ ತಮ್ಮ ಜಾನುವಾರಗಳೊಂದಿಗೆ ಸ್ಥಳಾಂತರಗೊಳ್ಳಲು ಎತ್ತರದ ರಸ್ತೆಗಳ ಅವಶ್ಯಕತೆ ಇದ್ದು, ಈಗ ಈ ರಸ್ತೆಗಳ ಅಭಿವೃದ್ಧಿಯಿಂದಾಗಿ ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂದು ಶಾಸಕ ರಾಜು ಕಾಗೆ ಹೇಳಿದ್ದಾರೆ.
ಅವರು, ಬುಧವಾರ ದಿ. 03 ರಂದು ತಲಾ 2 ಕೋಟಿ ಅನುದಾನದಲ್ಲಿ ತಾಲೂಕಿನ ಜುಗೂಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಂಗಾವತಿ ಗ್ರಾಮದಲ್ಲಿ ಮಂಗಾವತಿ-ಕಾಗವಾಡ ರಸ್ತೆ ಮತ್ತು ಜುಗೂಳ ಗ್ರಾಮದಲ್ಲಿ ಜುಗೂಳ-ಹಳೆ ಮಿರಜ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. ಕ್ಷೇತ್ರದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಈಗಾಗಲೇ ಅನೇಕ ರಸ್ತೆಗಳ ಅಭಿವೃದ್ಧಿ ಜೊತೆಗೆ ಸುಮಾರು ಸಮುದಾಯ ಭವನಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ನದಿ ತೀರದ ಜುಗೂಳ ಮತ್ತು ಮಂಗಾವತಿ ಗ್ರಾಮಗಳ ಈ ರಸ್ತೆಗಳ ಅಭಿವೃದ್ಧಿಯಿಂದಾಗಿ ಇಲ್ಲಿಯ ರೈತರಿಗೆ ಅನುಕೂಲವಾಗಲಿದೆ ಎಂದರು. ಇದೇ ಸಮಯದಲ್ಲಿ ಜುಗೂಳ ಗ್ರಾಮದ ಸುಪುತ್ರ ಕಿರಣ ಬಾಬಾಸಾಹೇಬ್ ಪಾಟೀಲ್ ( ಮುಗಳೆ ) ಮೆಸ್ಕಾಂ ನಲ್ಲಿ ಸಹಾಯಕ ಇಂಜಿನಿಯರ್ ಆಗಿ ನಿಯುಕ್ತಗೊಂಡಿದ್ದ ಕಾರಣ ಶಾಸಕರು ಅವರನ್ನು ಸನ್ಮಾನಿಸಿ, ಶುಭ ಕೋರಿದರು.
ಈ ವೇಳೆ ಜುಗೂಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಕಾಸಾಹೇಬ ಪಾಟೀಲ, ಬಾಳಸಾಹೇಬ ಪಾಟೀಲ, ಬಾಬಾಸಾಹೇಬ ಪಾಟೀಲ, ರಾಜು ಕಡೋಲೆ, ವಿಲಾಸ ಕಡೋಲೆ, ಸುಭಾಷ ಪಾಟೀಲ, ರಾಜುಗೌಡ ಪಾಟೀಲ, ಕಲಗೌಡ ಪಾಟೀಲ, ಎಂ.ಬಿ. ಕೊರಬು, ಸುರೇಶ ಪಾಟೀಲ, ಬಾಬಾಸಾಹೇಬ ತಾರದಾಳೆ, ಅನಿಲ ಸುಂಕೆ, ಉಮೇಶ ಪಾಟೀಲ, ರವಿ ಕುರಣೆ, ಸಂಜಯ ಮಿಣಚೆ, ಅಕ್ಷಯ ಪಾಟೀಲ, ಜಯಪಾಲ ಯಮಕನಮರಡಿ, ಜಹಾಂಗೀರ ಕಲಾವಂತ, ಮಹಾದೇವ ಕಾಂಬಳೆ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.