ಚಿಕ್ಕೋಡಿ

90ಲಕ್ಷ ರೂ. ವೆಚ್ಚದ ರಸ್ತೆಹಿಗಟಾರ್ ಕಾಮಗಾರಿಗೆ ಚಾಲನೆ

90ಲಕ್ಷ ರೂ. ವೆಚ್ಚದ ರಸ್ತೆಹಿಗಟಾರ್ ಕಾಮಗಾರಿಗೆ ಚಾಲನೆ


ಚಿಕ್ಕೋಡಿ, 12 : ಚಿಕ್ಕೋಡಿ ತಾಲೂಕಿನ ಹಳೆ ಯಡೂರಿನಲ್ಲಿ 90ಲಕ್ಷ ರೂ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾದ ಕಾಂಕ್ರೀಟ್ ರಸ್ತೆ ಮತ್ತು ಗಟಾರ್ ನಿರ್ಮಾಣ ಕಾಮಗಾರಿಗೆ ಗಣ್ಯರು ಚಾಲನೆ ನೀಡಿದರು. ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ್ ಹುಕ್ಕೇರಿ ಅವರ ಪ್ರಯತ್ನಗಳಿಂದ ಈ ಯೋಜನೆಗೆ ಅನುದಾನ ದೊರೆತಿದೆ. ಗ್ರಾಮದ ಅಭಿವೃದ್ಧಿ ಕಾರ್ಯಗಳಲ್ಲಿ ಹುಕ್ಕೇರಿ ತಂದೆಹಿಮಗ ನೀಡುತ್ತಿರುವ ಕೊಡುಗೆ ಶ್ಲಾಘನೀಯವಾಗಿದೆ ಎಂದು ಚನ್ನಪ್ಪ ಹಕಾರೆ ಹೇಳಿದರು.ಈ ಸಂದರ್ಭದಲ್ಲಿ ಅಮಿತ್ ಪಾಟೀಲ, ತೇಜಗೌಡ ಪಾಟೀಲ, ಗಣಪತಿ ಉಗಾರೇ, ವಿನಾಯಕ ಚಿಕ್ಕೋಡಿ, ಸುಬೋಧ ಜೋಶಿ, ಪೊಪಟ್ ಕಿಲ್ಲೇದಾರ, ಭೂಪಾಲ್ ಬೋರಗಾವೇ, ಸಚಿನ್ ಬೋರಗಾವೇ, ರವಿ ಬೋರಗಾವೇ, ಉತ್ತಮ ಆಂಬಿ, ಅಕ್ಬರ್ ಲಾಟಕರ, ರಾಜು ಧಡ್ಡೆ, ಜೇಪಾಲ್ ಬೋರಗಾವೇ, ಶಿವು ಹಂಜಿ, ದಾದಾ ನರವಾಡೇ, ಪಿಡಿಒ ಕರಿಗಾರ, ಗಜು ಕಮತೆ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ