ರಸ್ತೆ ತಡೆ :ನೀರು ಪೂರೈಸುವಂತೆ ರೈತರಿಂದ ಪ್ರತಿಭಟನೆ

ರಸ್ತೆ ತಡೆ :ನೀರು ಪೂರೈಸುವಂತೆ  ರೈತರಿಂದ ಪ್ರತಿಭಟನೆ

ಬಳ್ಳಾರಿ 06: ತುಂಗಭದ್ರಾ ಕಾಲುವೆಯಾಶ್ರಯದಲ್ಲಿ ಬೆಳೆದು ನಿಂತ 1.50 ಲಕ್ಷ ಎಕರೆ ಪ್ರದೇಶಗಳ ಮೆಣಸಿನ ಕಾಯಿ, ಹತ್ತಿ ಬೆಳೆಗಳು ಒಣಗುತ್ತಿದ್ದು ಡಿಸೆಂಬರ್ 31ರವರೆಗೆ ಹೆಚ್ಎಲ್ಸಿ ಮತ್ತು ಎಲ್ಎಲ್ಸಿ ಕಾಲುವೆಗಳಿಗೆ ನೀರು ಪೂರೈಸಬೇಕೆಂದು ರೈತರು ಆಗ್ರಹಿಸಿದ್ದಾರೆ. ತುಂಗಭದ್ರಾ ರೈತ ಸಂಘದ ಅಧ್ಯಕ್ಷರಾದ ಜಿ.ಪುರುಷೋತ್ತಮಗೌಡ ಅವರ ನೇತೃತ್ವದಲ್ಲಿ ನೂರಾರು ರೈತರು ಇಂದು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. 

ಈ ವೇಳೆ ಮಾತನಾಡಿದ ಗೌಡರು, ನವೆಂಬರ್ 18ರಂದು ತುಂಗಭದ್ರಾ ಜಲಾಶಯದಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಹೆಚ್ಎಲ್ಸಿ ಕಾಲುವೆಗೆ ಡಿಸೆಂಬರ್ 5ರವರೆಗೆ ಅಧಿಕೃತವಾಗಿ ನಂತರ ಇದೇ ಡಿ.6ರಿಂದ 30ರವರೆಗೆ ನಿಂತ ಬೆಳೆಗಳಿಗೆ ನೀರು ಬಿಡಲು ತೀಮರ್ಾನಿಸಲಾಗಿತ್ತು. ಜಲಾಶಯದ ಮುಖ್ಯಾಧಿಕಾರಿ ಮಂಪ್ಪ ನೀರಿನ ಕೊರತೆ ಇರುವುದರಿಂದ ಕೆಲವು ದಿನ ಕಾಲುವೆಗೆ ನೀರು ಸ್ಥಗಿತಗೊಳಿಸಿ ನೀರು ಪೂರೈಸುವುದಾಗಿ ಹೇಳಿದ್ದರು. ಈ ರೀತಿಯಾದರೆ ಈಗಾಗಲೇ ಬೆಳೆದು ನಿಂತಿರುವ 1.50 ಎಕರೆ ಪ್ರದೇಶದ ಮೆಣಸಿನ ಕಾಯಿ, ಹತ್ತಿ ಬೆಳೆಗಳು ನಾಶವಾಗುತ್ತವೆ. ಕೋಟ್ಯಾಂತರ ರೂಪಾಯಿ ನಷ್ಟವಾಗಲಿದೆ. ನಷ್ಟಗೊಂಡ ರೈತರು ಆತ್ಮಹತ್ಯೆ ಹಾದಿ ಹಿಡಿಯಬೇಕಾಗುತ್ತದೆ. ಪ್ರತಿ ಎಕರೆಗೆ ಕನಿಷ್ಟ ರೂ.50 ಸಾವಿರದಂತೆ ಖಚರ್ು ಮಾಡಿ ಬೆಳೆ ಬೆಳೆದಿರುವ ರೈತರು ಇದೀಗ ಆತಂಕಗೊಂಡಿದ್ದಾರೆ. ರೈತರು ಆಘಾತಕ್ಕೊಳಗಾಗುವ ಮುನ್ನ ಎಚ್ಚೆತ್ತುಕೊಂಡು ಕಾಲುವೆಗಳಿಗೆ ನೀರು ಪೂರೈಸಬೇಕೆಂದು ಒತ್ತಾಯಿಸಿದರು. ಅಲ್ಲಿಪುರ ಮಹಾದೇವತಾತನ ಮಠದ ಬಳಿಯ ಹೆಚ್ಎಲ್ಸಿ ಕಾಲುವೆ ಸೇತುವೆ ಮೇಲೆ ಪೊಲೀಸ್ ಇಲಾಖೆ ಸೂಚನೆಯಂತೆ 20 ನಿಮಿಷ ಪ್ರತಿಭಟನೆ ನಡೆಸಿದ ರೈತರು ವಾಹನಗಳನ್ನು ತಡೆಗಟ್ಟಿ ನ್ಯಾಯಕ್ಕಾಗಿ ಪ್ರತಿಭಟಿಸಿದರು. ಬಳಿಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಪತ್ರವನ್ನು ಸಲ್ಲಿಸಿ ಈ ಕೂಡಲೇ ರೈತರ ಹಿತದೃಷ್ಟಿಯಿಂದ ಕಾಲುವೆಗೆ ನೀರು ಪೂರೈಸುವಂತೆ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ರೈತರಾದ ಗಂಗಾವತಿ ವೀರೇಶ್, ಮಸೀದಿಪುರ ಬಸವನಗೌಡ, ಕೃಷ್ಣನಗರ ಕ್ಯಾಂಪ್ ಶಿವಯ್ಯ, ಟಿ.ರಂಜಾನ್ ಸಾಬ್, ಕರೂರು ರಾಮನಗೌಡ, ಕೊಂಚಗೇರಿ ಮಲ್ಲಪ್ಪ, ಜಾಲಿಹಾಳ್ ಶ್ರೀಧರ್, ಶ್ರೀಧರಗಡ್ಡೆ ವೀರನಗೌಡ, ಕಂಪ್ಲಿ ಸತ್ಯನಾರಾಯಣರಾವ್, ಮುಷ್ಟಗಟ್ಟೆ ಭೀಮನಗೌಡ, ಆಗಲೂರು ಸಿದ್ಧಪ್ಪ, ಎತ್ತಿನಬೂದಿಹಾಳ್ ಬಸಯ್ಯಸ್ವಾಮಿ, ಕುಡಿತಿನಿ ಎಲೆ ಪಂಪಾಪತಿ, ಸುಗ್ಗಿನಹಳ್ಳಿ ಕೋಟಲ್ ಕ್ಯಾಂಪ್ ತಿರುಮಲೇಶ್ ಇನ್ನಿತರರು ಪಾಲ್ಗೊಂಡಿದ್ದರು. 

ಸುದ್ದಿ ಓದಿ