ರಾಷ್ಟ್ರೀಯ

ಮಧ್ಯಪ್ರದೇಶ; ರಸ್ತೆ ಅಪಘಾತ, ಸ್ಥಳದಲ್ಲೇ ಆರು ಮಂದಿ ಸಾವು

ಮಧ್ಯಪ್ರದೇಶ; ರಸ್ತೆ ಅಪಘಾತ,  ಸ್ಥಳದಲ್ಲೇ ಆರು ಮಂದಿ ಸಾವು

ಖಂಡ್ವಾ, ಡಿಸೆಂಬರ್ 4: ಮಧ್ಯ ಪ್ರದೇಶದ ಖಂಡ್ವಾದಲ್ಲಿ   ಭೀಕರ  ರಸ್ತೆ ಅಪಘಾತ ಸಂಭವಿಸಿದೆ. ಖಂಡ್ವಾ -ಬೈತೂಲ್  ರಾಷ್ಟ್ರೀಯ  ಹೆದ್ದಾರಿಯ  ಮೆಹ್ಲೂ ಗ್ರಾಮದ ಬಳಿ ಟ್ರಾಕ್ಟರ್  ಟ್ರಾಲಿ ಉರುಳಿ ಅಪಘಾತ ಸಂಭವಿಸಿದ್ದು, ಅವಗಢದಲ್ಲಿ  ಮದುವೆ ದಿಬ್ಬಣದಲ್ಲಿದ್ದ   ವರ ಸೇರಿದಂತೆ ಆರು  ಮಂದಿ  ಸ್ಥಳದಲ್ಲೇ ಮೃತಪಟ್ಟಿದ್ದಾರೆ.  ಇನ್ನೂ 18 ಮಂದಿ ಗಂಭೀರವಾಗಿ ಗಾಯಗೊಂಡಿದ್ದು,  ಗಾಯಾಳುಗಳನ್ನು ಹರ್ಸೂದ್  ಹಾಗೂ ಖಲ್ವಾಲ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ.

ಘಟನೆ  ನಡೆದ    ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಅಪಘಾತಕ್ಕೀಡಾಗಿರುವ   ಟ್ರಾಕ್ಟರ್ ಟ್ರಾಲಿಯಲ್ಲಿ 35  ಮಂದಿ  ಪ್ರಯಾಣಿಸುತ್ತಿದ್ದರು.  ಗಾಯಗೊಂಡವರ  ಪೈಕಿ   ಹಲವರ  ಸ್ಥಿತಿ ಚಿಂತಾಜನಕವಾಗಿದೆ  ಎಂದು ಮಾಧ್ಯಮಗಳು  ವರದಿ ಮಾಡಿವೆ. 

ಟ್ರಾಕ್ಟರ್ ಟ್ರಾಲಿ  ಉರುಳಿದಾಗ  ಅದರಲ್ಲಿದ್ದವರೆಲ್ಲರೂ  ಟ್ರಾಲಿಯ ಕೆಳಗೆ ಸಿಲುಕಿಕೊಂಡು ಸಾವು ನೋವು ಸಂಭವಿಸಿವೆ.  ಐದು ಆಂಬುಲೆನ್ಸ್‌ಗಳು ಘಟನಾ ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ  ದಾಖಲಿಸಿವೆ.  ಅಪಘಾತ ಬಗ್ಗೆ   ಮಾಹಿತಿ ಪಡೆದುಕೊಂಡ  ಖಾಂಡ್ವಾ  ಜಿಲ್ಲಾಧಿಕಾರಿ  ದ್ವಿವೇದಿ  ಹಾಗೂ   ಎಸ್ಪಿ ವಿವೇಕ್ ಸಿಂಗ್ ಸ್ಥಳಕ್ಕೆ ಧಾವಿಸಿದ್ದಾರೆ.  ಟ್ರ್ಯಾಕ್ಟರ್-ಟ್ರಾಲಿ   ರಾಷ್ಟ್ರೀಯ ಹೆದ್ದಾರಿಯ   ರೇಲಿಂಗ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಎಂದು  ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. 

ಸುದ್ದಿ ಓದಿ