ಚಿಕ್ಕೋಡಿ

ರಸ್ತೆ ಅಪಘಾತ ಪ್ರಕರಣ: ಪರಿಹಾರ ನೀಡದ ಸಾರಿಗೆ ಸಂಸ್ಥೆಯ ಬಸ್ ಜಪ್ತಿ ಮಾಡಿದ ನ್ಯಾಯಾಲಯ

ರಸ್ತೆ ಅಪಘಾತ ಪ್ರಕರಣ: ಪರಿಹಾರ ನೀಡದ ಸಾರಿಗೆ ಸಂಸ್ಥೆಯ ಬಸ್ ಜಪ್ತಿ ಮಾಡಿದ ನ್ಯಾಯಾಲಯ

ಚಿಕ್ಕೋಡಿ 12: ರಸ್ತೆ ಅಪಘಾತದಲ್ಲಿ ಮೃತ ಪಟ್ಟ ವಾರಸುದಾರರಿಗೆ ಸೂಕ್ತ ಪರಿಹಾರ ನೀಡದ ಹಿನ್ನಲ್ಲೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ವೊಂದನ್ನು ನ್ಯಾಯಾಲಯ ಜಪ್ತಿ ಮಾಡಿದೆ. 

ಕಳೆದ 2014ರಲ್ಲಿ ಚಿಕ್ಕೋಡಿ ತಾಲೂಕಿನ ಅಂಕಲಿ ಬಳಿ ಬಸ್ ಹಾಗೂ ಟಾಟಾ ಏಸ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಇದರಲ್ಲಿ ಚಿಕ್ಕೋಡಿ ತಾಲೂಕಿನ ಚೆಂದೂರ ಗ್ರಾಮದ ಅಪ್ಪಾಸಾಹೇಬ ಸೌಧೆ ಮೃತಪಟ್ಟಿದ್ದರು.  

ಈ ಕುರಿತು ಮೃತನ ಪತ್ನಿ ಅಶ್ವಿನಿ ಸೌಧೆ ಪ್ರಕರಣ ದಾಖಲಿಸಿದ್ದರು. ಪ್ರಕರಣ ಕೈಗೆತ್ತಿಕೊಂಡಿರುವ ಚಿಕ್ಕೋಡಿ ಏಳನೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮೃತ ವಾರಸುದಾರರಿಗೆ 15  ಲಕ್ಷ ರೂ ಪರಿಹಾರ ನೀಡಬೇಕೆಂದು ಆದೇಶ ನೀಡಿತ್ತು. ಆದರೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಪರಿಹಾರದ ಹಣ ನೀಡದೇ ಇರುವ ಕಾರಣದಿಂದ ನ್ಯಾಯಾಲಯ ಬಸ್ ಜಪ್ತಿ ಮಾಡಲು ಆದೇಶ ಮಾಡಿತ್ತು. ಗುರುವಾರ ನ್ಯಾಯಾಲಯದ ಬೇಲಿಪ್ ಆನಂದ ಪಾಶ್ಚಾಪೂರೆ ಹಾಗೂ ನ್ಯಾಯವಾದಿ ಬಸವರಾಜ ಅಮಾತೆ ಅವರು ಚಿಕ್ಕೋಡಿ ಬಸ್ ನಿಲ್ದಾಣಲ್ಲಿ ಚಿಕ್ಕೋಡಿ ಘಟಕದ ಬಸ್ ಜಪ್ತಿ ಮಾಡಿದ್ದಾರೆ. 


ಸುದ್ದಿ ಓದಿ