ಗಡಿ ಭಾಗದ ಎಲ್ಲ ರಸ್ತೆಗಳ ಅಭಿವೃದ್ಧಿಗೆ ಶ್ರೀಮಂತ ಪಾಟೀಲ ಒತ್ತು
ಲೋಕದರ್ಶನ ವರದಿ
ಸಂಬರಗಿ 02: ಕಳೆದ 50ವರ್ಷಗಳಿಂದ ಗಡಿ ಭಾಗದಲ್ಲಿ ಎಲ್ಲೆಲ್ಲಿ ರಸ್ತೆಗಳವೆ ಎಂದು ಹುಡುಕಬೇಕಿತ್ತು. ಆದರೆ ಶಾಸಕ ಶ್ರಿಮಂತ ಪಾಟೀಲ ಆಯ್ಕೆಯಾದ ನಂತರ
ಅವರ ಪ್ರಯತ್ನದಿಂದ ಗಡಿ ಭಾಗದ ಎಲ್ಲಾ ರಸ್ತೆಗಳು ಡಾಂಬರಿಕರಣಗೊಂಡಿದ್ದು ರಸ್ತೆಗಳು ಉತ್ತಮ ಅಭಿವೃದ್ಧಿ ಆಗಿವೆ. ಹೀಗಾಗಿ ಸಂಚಾರ ಅಡೆತಡೆ ನಿವಾರಿಸಲಾಗಿದೆ.
ನಮ್ಮ ಗ್ರಾಮದಿಂದ ತಾಲುಕಾ ಸ್ಥಳಕ್ಕೆ ಬರಲು20 ಕಿ ಮಿ ದೂರ
ತಲುಪಲು ಒಂದು ಗಂಟೆ ಹಿಡಿಯತ್ತಿತ್ತು. ಆದರೆ ರಸ್ತೆ ಡಾಂಬರೀಕರಣ ಗೊಂಡಿರುವುದರಿಂದ ಇಪ್ಪತ್ತು ನಿಮಿಷದಲ್ಲಿ ನಾವು ತಾಲುಕಾ ಸ್ಥಳಕ್ಕೆ ತಲುಪುತ್ತಿದ್ದೇವೆ ಇದಕ್ಕೆ ಶಾಸಕ ಶ್ರೀಮಂತ ಪಾಟೀಲ ಅವರ ಶ್ರಮ ಮುಖ್ಯ. ಗ್ರಾಮೀಣ ಪ್ರದೇಶದಲ್ಲಿ ಗ್ರಾಮಗಳ ಕಲ್ಪಿಸುವ ರಸ್ತೆಗಳತ್ತ ಕಣ್ಣು ಹಾಯಿಸಿದರೆ ಮಾತ್ರ ರಸ್ತೆಯನ್ನು ಹುಡುಕಿಕೊಂಡು ಓಡಾಡುವ ಕಾಲವಿತ್ತು. ಈಗ ಕಣ್ಣು ಮುಚ್ಚಿ ವಾಹನ ಚಲಾಯಿಸುವ ಕಾಲ ಬಂದಿದೆ. ಈ ಭಾಗದ ರಸ್ತೆಗಳ ಡಾಂಬರಿಕರಣಕ್ಕೆ ಹೆಚ್ಚು ವತ್ತು
ನೀಡಿದ್ದಾರೆ.
ಈಗಾಗಲೆ ಅರಳಹಟ್ಟಿಯಿಂದ ಮಧಭಾವಿ ಮಾರ್ಗ ವಿಜಯಪೂರ -ಬೆಳಗಾವಿ ಸಂಪರ್ಕ ರಸ್ತೆ, ಶಿರುರ, ಸಂಬರಗಿ, ಖಿಳೆಗಾಂವ, ಅನಂತಪುರ, ಖಿಳೆಗಾಂವ
ಅಜುರ, ಶಿವನುರ, ಜಂಬಗಿ, ತೆವರಟ್ಟಿ, ಅವಳೆತೋಟ, ಶಿಂಧೆ ತೋಟ, ಬಾರಿಗಿಡಿತೋಟ ಚಮಕೆರಿ, ವಿಷ್ಣುವಾಡಿ, ಶಿರುರ-ಸಲಗರ, ಜಕಾರಟ್ಟಿ-ಖುಟ್ಟೆ ತೋಟ ಸೇರಿದಂತೆ ಕ್ಷೇತ್ರದ ರಸ್ತೆ ಡಾಂಬರಿಕರಣ ಹೊಂದಿವೆ.
ಈ ಕುರಿತು ಬಿಜೆಪಿ ಮುಖಂಡ ಆರ ಎಂ ಪಾಟೀಲ ಇವರನ್ನು ಸಂರ್ಪಕಿಸಿದಾಗ ಶಾಸಕ ಶ್ರಿಮಂತ ಪಾಟೀಲ ಆಯ್ಕೆಯಾದ ನಂತರ ಅಭಿವೃದ್ಧಿಗೆ ಹೆಚ್ಚು
ಒತ್ತು ನೀಡಿದ್ದಾರೆ. ಅದರಲ್ಲಿ ರಸ್ತೆ, ಶಾಲಾ ಕೊಠಡಿ, ನೀರಾವರಿಗೆ ಹೆಚ್ಚು ಒತ್ತು ನೀಡಿದ್ದಾರೆ
ಕಳೆದ 50 ವರ್ಷಗಳಲ್ಲಿ ಮಾಡದ ಕೆಲಸಗಳನ್ನು ಅವರು ದುಪ್ಪಟ್ಟು ಮಾಡಿದ್ದಾರೆ. ಕಾಗವಾಡ ವಿಧಾನ ಸಭಾ ಕ್ಷೇತ್ರ ಮಾದರಿ ಕ್ಷೇತ್ರ ಮಾಡುವ ಗುರಿ ಹೊಂದಿದ್ದಾರೆ. ಕ್ಷೇತ್ರದಲ್ಲಿ ಪಕ್ಷಾತೀತವಾಗಿ ಕಾಮಗಾರಿ ಮಾಡಿದ್ದಾರೆ