ಹೊಸಪೇಟೆ

ಗತಕಾಲಕ್ಕೆ ಮರಳುವುದೆಂದರೆ ನಮ್ಮ ಹಕ್ಕುಗಳನ್ನು ಕಳೆದುಕೊಳ್ಳುವುದೆಂದೇ ಅರ್ಥ: ಗೋಪಾಲ ಕೃಷ್ಣ

ಗತಕಾಲಕ್ಕೆ ಮರಳುವುದೆಂದರೆ ನಮ್ಮ ಹಕ್ಕುಗಳನ್ನು ಕಳೆದುಕೊಳ್ಳುವುದೆಂದೇ ಅರ್ಥ: ಗೋಪಾಲ ಕೃಷ್ಣ

ಹೊಸಪೇಟೆ 04: ಸಾಮಾಜಿಕವಾಗಿ ಈಗಲೂ ಜಾತಿ ವ್ಯವಸ್ಥೆ ಅಳಿದುಳಿದ ರೂಪಗಳಲ್ಲಿ ಜಾರಿಯಲ್ಲಿದೆ. ಸ್ವತಂತ್ರ ಭಾರತದಲ್ಲಿ ಜಾತಿ ನಿಷೇಧವಾಗಿರುವುದು ಸಂವಿಧಾನ ಜಾರಿಯಾದ ಮೇಲೆ. ಜನ್ಮಸಿದ್ಧ ಹಕ್ಕುಗಳನ್ನು ಸಂವಿಧಾನವು ಭಾರತದಲ್ಲಿ ಹುಟ್ಟಿದ ಜನತೆಗೆ ಖಚಿತಪಡಿಸುವ ವಾಗ್ದಾನವನ್ನು ಮಾಡುತ್ತದೆ. ಆದ್ದರಿಂದ ಸನಾತನ ಸಂಸ್ಕೃತಿಯ, ಗತಕಾಲದ ಸಮಾಜಕ್ಕೆ ಮರಳುವುದು ಎಂದರೆ ನಮ್ಮ ಜನ್ಮಸಿದ್ಧ ಹಕ್ಕುಗಳನ್ನು ಕಳೆದುಕೊಳ್ಳುವುದು ಎಂದೇ ಅರ್ಥ. ಅದು ಕೇವಲ ಪರಿಶಿಷ್ಟರು ಮಾತ್ರ ಕಳೆದುಕೊಳ್ಳುವ ಸಂಗತಿಯಲ್ಲಾ. ಬದಲಾಗಿ ಸಮಸ್ತ ಸಮಾಜವೇ ತನ್ನ ಹಕ್ಕುಗಳನ್ನು ಕಳೆದುಕೊಂಡು ಜಮೀನ್ದಾರಿ ವ್ಯವಸ್ಥೆಯ ಕೂಪಕ್ಕೆ ಸಿಲುಕುವ ಅಪಾಯವಿದೆ ಎಂದು ಗೋಪಾಲಕೃಷ್ಣ ಸಂಶೋಧನಾ ವಿಧ್ಯಾರ್ಥಿ, ಕನ್ನಡ ವಿಶ್ವವಿದ್ಯಾಲಯ ಹಂಪಿ ಇವರು ಆತಂಕ ವ್ಯಕ್ತಪಡಿಸಿದರು. 

ದಿ.04ರಂದು ಹೊಸಪೇಟೆಯ ಆವಿಷ್ಕಾರ ಕಛೇರಿಯಲ್ಲಿ ಆವಿಷ್ಕಾರ - ಪ್ರಗತಿಪರ ಸಾಂಸ್ಕೃತಿಕ ವೇದಿಕೆ ಸಂಘಟನೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಿವರಾಮ ಕಾರಂತ ಅವರ ಕಾದಂಬರಿ ‘ಚೋಮನದುಡಿ’ ಕುರಿತು ಯುವ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಚೋಮನದುಡಿ ಒಂದು ಅಸ್ಪೃಷ್ಯ ಕುಟುಂಬದ ಚಿತ್ರಣವನ್ನಾಗಿ ಭಾವಿಸದೇ, ಒಂದು ಕೊಳೆತು ಹೋದ ಸಮಾಜವು ತನ್ನದೇ ಸಮಾಜದ ಸದಸ್ಯರನ್ನು ಎಷ್ಟೇಲ್ಲಾ ಹೃದಯಹೀನವಾಗಿ ದೈಹಿಕವಾಗಿ, ಲೈಂಗಿಕವಾಗಿ ಶೋಷಣೆ ಮಾಡುತ್ತದೆ ಎಂಬುದನ್ನು ಕಾದಂಬರಿಯಲ್ಲಿ ನೋಡಬೇಕಿದೆ. ನಮ್ಮ ಸಭ್ಯತೆಯು ಬಡವರ ಬಡತನವನ್ನು ದೂರದಲ್ಲಿ ನಿಂತು “ಐಯೋ..!”ಎನ್ನುತ್ತಿದೆ ವಿನಹಃ ಅವರ ಜಾಗದಲ್ಲಿ ನಿಂತು ಅನುಭವಿಸುತ್ತಿಲ್ಲಾ ಎಂದು ವಿಷಾಧ ವ್ಯಕ್ತಪಡಿಸಿದರು. 

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ರಾಜು ಸಂಕ್ಲಾಪುರ ಇಂಗ್ಲೀಷ್ ಉಪನ್ಯಾಸಕರು ಜಗತ್ತಿನೊಂದಿಗೆ ಸಂಪರ್ಕ ಸಾಧಿಸಲು ಇಂಗ್ಲೀಷ್ ಭಾಷೆ ಅನಿವಾರ್ಯ. ಶ್ರೇಷ್ಠ ಸಂಶೋಧನೆಗಳು, ವಿಚಾರಗಳು ದಿನಂಪ್ರತಿ ಇಂಗ್ಲೀಷ್‌ನಲ್ಲಿ ಪ್ರಕಟಣೆ ಕಾಣುತ್ತೀವೆ ಎಂದರು. 

ಪಂಪಾಪತಿ ಇವರು ಕಾದಂಬರಿಯ ಬಗ್ಗೆ ಟಿಪ್ಪಣಿಯನ್ನು ಮಂಡಿಸಿದರು. ಪ್ರಕಾಶ್ ನಾಯಕ್ ಕಾರ್ಯಕ್ರಮದ ನಿರೂಪಣೆ ಮಾಡಿದರು. ಶೇಖರ್ ಬಾಬು ಸ್ವಾಗತಿಸಿದರು. ಅಭಿಷೇಕ್ ಕಾಳೆ ವಂದಿಸಿದರು. ಅಂಜಿನಿ, ಹರ್ಷ ಯಾದವ್, ಶಂಕರ್, ಸಣ್ಣೀರ​‍್ಪ, ಹೋನ್ನೂರಸ್ವಾಮಿ, ಯೋಗೇಶ್, ವೇಂಕಟೇಶ್, ಮಾರುತಿ, ಮುಂತಾದವರು ಭಾಗವಹಿಸಿದ್ದರು. 


ಸುದ್ದಿ ಓದಿ