ಕಾಗವಾಡ

ನಿವೃತ್ತಿ: ಸರಕಾರಿ ಶಾಲೆ ಶಿಕ್ಷಕ ವಂಜೇರಿಗೆ ಅದ್ದೂರಿ ಬೀಳ್ಕೊಡುಗೆ

ನಿವೃತ್ತಿ: ಸರಕಾರಿ ಶಾಲೆ ಶಿಕ್ಷಕ ವಂಜೇರಿಗೆ ಅದ್ದೂರಿ ಬೀಳ್ಕೊಡುಗೆ

ಕಾಗವಾಡ 31: ಶಿಕ್ಷಕ ವೃತ್ತಿ ಒಂದು ಸಮಾಜ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಆ ವೃತ್ತಿಯಲ್ಲಿ ಯಾರು ಪ್ರಾಮಾಣಿಕವಾಗಿ ಮಕ್ಕಳ ಏಳಿಗೆಗಾಗಿ ಶ್ರಮಿಸುತ್ತಾರೆ ಅವರ ಜೀವನದಲ್ಲಿ ಕೂಡ ಒಂದು ಕಪ್ಪು ಚುಕ್ಕೆ ಇಲ್ಲದಂತೆ ತಮ್ಮ ನಿವೃತ್ತಿ ಜೀವನ ಸಂತೋಷದಿಂದ ಕಳೆಯುತ್ತಾರೆ ಎಂದು ತಾಲ್ಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಸ್ ಎಸ್ ಭಾವಿ ಹೇಳಿದರು.  

ಅವರು ನವಲಿಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಇಪ್ಪತ್ತಾರು ವರ್ಷಗಳ ಸುದೀರ್ಘ ಸೇವೆಸಲ್ಲಿಸಿ  ನಿವೃತ್ತಿ ಹೊಂದಿದ ಶಿಕ್ಷಕ ಪಿ ಕೆ ವಂಜೇರಿ ಬಿಳ್ಕೋಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯಾರಾದರೂ ನಿವೃತ್ತಿ ಆಗುತ್ತಾರೆ ಎಂದರೆ ಕೆಲವರಿಗೆ ದುಃಖ ಆಗುತ್ತದೆ ಅದರೆ ಸರಕಾರಿ ಶಾಲೆಯ ಶಿಕ್ಷಕರಿಗೆ ಬಹಳ ಸಂತೋಷ ಆಗುತ್ತದೆ ಯಾಕೆಂದರೆ ಈಗಿನ ಕಾಲದಲ್ಲಿ ಸರಕಾರಿ ನೌಕರಿ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ ಶಿಕ್ಷಕರ ಕೊರತೆ ಅಧಿಕ ಖಾಲಿ ಇವೆ ಅದರ ಹೊಣೆ ಇದ್ದ ಶಿಕ್ಷಕ ಮೇಲೆ ಇರುತ್ತದೆ ಹೀಗಾಗಿ ಯ್ಯಾವಾಗ ನಿವೃತ್ತಿ ಹೊಂದುತ್ತೆವೆ ಎನ್ನುವ ಮನಸ್ಥಿತಿಗೆ ಬಂದು ಬಿಟ್ಟಿದೆವೆ ಇಂತಹದರ ನಡುವೆ ನವಲಿಹಾಳ ಗ್ರಾಮಕ್ಕೆ ಉತ್ತಮ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪಿ ಕೆ ವಂಜೆರಿ ಅವರ ಜೀವನ ಸುಖಮಯವಾಗಿರಲಿ ಎಂದು ಶುಭಹಾರೈಸಿದರು.  

ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿ ಕುಮಾರ ಗಾಣಿಗೇರ ಮಾತನಾಡಿ ಪಿ ಕೆ ವಂಜೆರಿ ಅವರ ಸಮಯಪಾಲನೆ, ಕರ್ತವ್ಯ ನಿಷ್ಟೆ, ಮಕ್ಕಳೊಂದಿಗೆ ಮಧುರ ಬಾಂಧವ್ಯ ಹೊಂದಿ ಜನಾನುರಾಗಿಯಾಗಿದ್ದರು. ಸ್ನೇಹಿತರೊಂದಿಗೆ ಸ್ನೇಹಜೀವಿಯಾಗಿ, ಆಪಾರ ಶಿಷ್ಯಬಳಗ ಹೊಂದಿದ್ದಾರೆ. ಇವರ ನಿವೃತ್ತಿ ಜೀವನ ಸುಖಕರವಾಗಿರಲಿ, ಆನಂದದಾಯಕವಾಗಿರಲಿ, ಎಲ್ಲರನ್ನು ತಮ್ಮವರೆಂದು ಪ್ರೀತಿಸುವ ಅವರ ಪ್ರೀತಿ ಸದಾ ನಮ್ಮ ಜೊತೆಗಿರಲಿ ಎಂದು ಶುಭ ಹಾರಿಸಿದರು.  

ಶಿಕ್ಷಕರ ಸಂಘದ ಅಧ್ಯಕ್ಷ ಎಮ್ ಜಿ ಸಂಕಪಾಳ ಹಾಗೂ ಶಿಕ್ಷಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು, ಶಿಕ್ಷಕ ಪ್ರಹ್ಲಾದ ಪೋತದಾರ ಸ್ವಾಗತಿಸಿದರು, ವಿನೋದ ಮಹೇಶಕರ ವಂದಿಸಿದರು.  

ಗ್ರಾಮ ಪಂಚಾಯತ ಸದಸ್ಯ ಸಾವಂತ ಖಾಂಡೇಕರ, ಸುಭಾಷ ಗೇಂಡ, ಎಸ್‌ಡಿಎಂಸಿ ಅಧ್ಯಕ್ಷ ರಾಜು ಗೂಗಾಡೆ, ಉಪಾಧ್ಯಕ್ಷ ರಾಜು ಕಾಂಬಳೆ, ಮುಖ್ಯೋಪಾಧ್ಯಾಯ ತುಕಾರಮ ಮಿರ್ಜೆ, ಬಿ ಆರ್ ಜಾಧವ, ವಿ ಕಾಂಬಳೆ, ವಿಠ್ಠಲ ಗಾಯಕವಾಡ, ಗಜಾನನ ಐಹೊಳೆ ಸೇರಿದಂತೆ ಶಿಕ್ಷಕರು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ