ನಿವೃತ್ತಿ: ಉಪನ್ಯಾಸಕ ಈಶ್ವರ ಮೇಟಿಗೆ ಬೀಳ್ಕೊಡುಗೆ
ಲೋಕದರ್ಶನ ವರದಿ
ಬೈಲಹೊಂಗಲ 03: ತಾಲೂಕಿನ ದೊಡವಾಡ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಉಪನ್ಯಾಸಕ ಈಶ್ವರ ಮೇಟಿ ವಯೋ ನಿವೃತ್ತಿ ಹೊಂದಿದ ನಿಮಿತ್ತ ಕಾಲೇಜು ಅಭಿವೃದ್ಧಿ ಸಮಿತಿಯ ಆಡಳಿತ ಮಂಡಳಿ, ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು, ಶಾಲಾ ಕಾಲೇಜುಗಳ ಶಿಕ್ಷಕರು ವತಿಯಿಂದ ಸೋಮವಾರ ಬೀಳ್ಕೊಡುಗೆ ಸನ್ಮಾನ ಕಾರ್ಯಕ್ರಮ ಏರಿ್ಡಸಲಾಗಿತ್ತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಈಶ್ವರ ಮೇಟಿ ತನ್ನ ಬಳಿ ಕಲಿಯುವ ಮಕ್ಕಳಿಗೆ ಉತ್ತಮ ಭವಿಷ್ಯ ಕೊಡಬಲ್ಲ ಶಿಕ್ಷಣ, ಸಮಾಜದ ಜನರ ಮೆಚ್ಚುಗೆ ಪಡೆಯವ ವ್ಯಕ್ತಿತ್ವ, ಅತ್ಯುತ್ತಮ ಮಾನವೀಯ ಮೌಲ್ಯಗಳನ್ನು ಕಲಿಸಿ ಮಾರ್ಗದರ್ಶನ ಮಾಡಿದ ಗುರು ಶ್ರೇಷ್ಠನೆನಿಸಿಕೊಳ್ಳುತ್ತಾನೆ ಅಲ್ಲದೆ ವಿದ್ಯಾರ್ಥಿಗಳ ಜೀವನದುದ್ದಕ್ಕೂ ಆತ ನೆನಪಿನಲ್ಲುಳಿಯುತ್ತಾನೆ ಎಂದರು.
ಅತಿಥಿಗಳು, ಉಪನ್ಯಾಸಕರು, ವಿದ್ಯಾರ್ಥಿಗಳು ಮೇಟಿಯವರ ಕರ್ತವ್ಯ ನಿಷ್ಠೆ, ವಿದ್ಯಾರ್ಥಿಗಳ ಮತ್ತು ಕಾಲೇಜು ಅಭಿವೃದ್ಧಿ ಬಗ್ಗೆ ಇದ್ದ ಕಾಳಜಿಯನ್ನು ಶ್ಲಾಘಿಸಿದರು.
ಆಡಳಿತ ಮಂಡಳಿಯ ಅಶೋಕ ಪರಂಡಿ, ಪ್ರಾಚಾರ್ಯ ರಮೇಶ ಮೋಟೆ, ಮಂಜುನಾಥ ಸಂಗೊಳ್ಳಿ, ಸಿ.ಎಸ್.ಸೊಬರದ, ಎಮ್.ಬಿ.ಹಾರೋಬಿಡಿ, ಉಪನ್ಯಾಸಕರಾದ ವಿಕಾಸ ಉಂಡಾಳೆ, ಮಹೇಶ ಕಡಗಿ, ಲಲಿತಾ ಹೊಸಮನಿ, ಸವಿತಾ ಸಾಲೋಟಗಿ, ಸುರಖಾ ರಾಟೋಡ, ಪದ್ಮಾ ಜಗದಾಳ, ಐ.ಎಮ್.ಅಂಬಿ, ಜ್ಯೋತಿ ಅಂದಾನಶೆಟ್ಟಿ, ಅಕ್ಷತಾ ಬಶೆಟ್ಟಿ ಸೇರಿದಂತೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.