ಜಿಬಿ ಬ್ಯಾಂಕ್ ಮುಂದೆ ಎರಡನೇ ದಿನಕ್ಕೆ ಪೂರೈಸಿದ ನಿವೃತ್ತ ನೌಕರ ಧರಣಿ
ಬಳ್ಳಾರಿ 11: ನಗರದಲ್ಲಿ ನಿವೃತ್ತ ಬ್ಯಾಂಕ್ ನೌಕರರ ವೇತನದಲ್ಲಿ ಕಡಿತಗೊಳಿಸಿರುವ ಹೆಚ್ಚುವರಿ ಹಣ ವಾಪಸತಿಗೆ ಆಗ್ರಹಿಸಿ ಆಲ್ ಬ್ಯಾಂಕ್ ನೌಕರರ ವೆಲ್ಫೇರ್ ಸೊಸೈಟಿ ಸದಸ್ಯರು ಇಲ್ಲಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಧಾನ ಕಚೇರಿ ಎದುರು ನಡೆಸುತ್ತಿರುವ ಧರಣಿ ಮಂಗಳವಾರ ಎರಡನೇ ದಿನ ಪೂರೈಸಿದೆ.ಸುಡುವ ಬಿಸಿಲಿನಲ್ಲಿಯೇ ವಯೊವೃದ್ಧ ನಿವೃತ್ತ ನೌಕರರು ಬ್ಯಾಂಕ್ ಪ್ರಧಾನ ಕಚೇರಿ ಮುಂದೆ ಧರಣಿ ಕುಳಿತಿದ್ದಾರೆ. ಬ್ಯಾಂಕ್ ಆಡಳಿತ ಮಂಡಳಿಯು ನಿವೃತ್ತ ನೌಕರರಿಂದ ನಾಲ್ಕೈದು ಲಕ್ಷ ರೂಪಾಯಿ ಹೆಚ್ಚುವರಿ ಯಾಗಿ ಕಡಿತಗೊಳಿಸಿದೆ ಕೇಂದ್ರ ಸರಕಾರದ ಮಾರ್ಗಸೂಚಿಯನ್ನು ಪಾಲಿಸದೆ ಊಹಾತ್ಮಕ ಲೆಕ್ಕಾಚಾರದ ಮೂಲಕ ಹಣ ಕಡಿತ ಮಾಡಲಾಗುತ್ತದೆ ಎಂದು ಧರಣಿ ನಿರುತ ನಿವೃತ್ತ ನೌಕರರು ಆರೋಪಿಸಿದರು.ಬ್ಯಾಂಕ್ ನಿವೃತ್ತ ಉದ್ಯೋಗಿ ಶಕುಂತಲಮ್ಮ ಹೈಕೋರ್ಟ್ ನಿಂದ ಬ್ಯಾಂಕಿಗೆ ನೋಟಿಸ್ ಜಾರಿಗೊಳಿಸಿದ ಬಳಿಕ ಹೆಚ್ಚುವರಿ ಹಣ ವಾಪಸ್ ಮಾಡಲಾಗಿದೆ ಉಳಿದ ಉದ್ಯೋಗಿಗಳ ಪ್ರಕರಣದಲ್ಲಿಯೂ ಹೆಚ್ಚುವರಿ ಹಣ ಹಿಂದಿರುಗಿಸುವಂತೆ ಒತ್ತಾಯ ಮಾಡಲಾಗುತ್ತಿದೆ ಈ ಸಂಬಂಧ ಬ್ಯಾಂಕ್ ಅಧ್ಯಕ್ಷರಿಗೆ ಪತ್ರಬರೆದರೂ ಪ್ರಯೋಜನವಾಗಿಲ್ಲ ಎಂದು ಆಲ್ ಬ್ಯಾಂಕ್ ನೌಕರರ ವೆಲ್ಫೇರ್ ಸೊಸೈಟಿ ಅಧ್ಯಕ್ಷ ಎಚ್. ಬಸವರಾಜ್ ತಿಳಿಸಿದರು.ಮಾತುಕತೆ ವಿಫಲವಾಗಿದೆ ಹಾಗೂ ಸೋಮವಾರ ಹಾಗೂ ಮಂಗಳವಾರವೂ ಕೆ ಜಿ ಬಿ ಬ್ಯಾಂಕಿನ ಆಡಳಿತ ಮಂಡಳಿ ನಮಗೆ ಮಾತುಕತೆಗೆ ಕರೆದಿದ್ದರು ಆದರೆ ಅವರಿಂದ ಹೆಚ್ಚುವರಿ ಹಣ ವಾಪಸ್ ಮಾಡೋದು ಕುರಿತು ಸ್ಪಷ್ಟ ಭರವಸೆ ಸಿಗಲಿಲ್ಲ ಹೀಗಾಗಿ ನಾವು ಧರಣಿ ಮುಂದುವರಿಸಲು ನಿತ್ಯಸಿದ್ದೇವೆ ಎಂದು ಎಚ್. ಬಸವರಾಜ್ ಸ್ಪಷ್ಟಪಡಿಸಿದ್ದಾರೆ.
ಪೆಂಡಾಲ್ ಗೆ ಅನುಮತಿ ಇಲ್ಲ!! ಬ್ಯಾಂಕ್ ಮುಂದೆ ಪೆಂಡಾಲ್ ಹಾಕಲು ನಮಗೆ ಪೊಲೀಸರು ಅನುಮತಿ ನೀಡುತ್ತಿಲ್ಲ ಇದರಿಂದಾಗಿ ಬಿಸಿನಲ್ಲಿಯೇ ಧರಣಿ ಕೂತಿದ್ದೇವೆ ಸಮಸ್ಯೆ ಪರಿಹಾರ ಕಾಣದವರೆಗೂ ಧರಣಿ ಮುಂದುವರಿಸಲಿದ್ದೇವೆ ಎಂದು ತಿಳಿಸಿದ್ದಾರೆ.ಇಂದಿನ ಧರಣಿಯಲ್ಲಿ ಬಳ್ಳಾರಿ, ರಾಯಚೂರು, ಗುಲ್ಬರ್ಗ,ಬೆಂಗಳೂರು, ಕೋಲಾರ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದ 65 ವರ್ಷಗಿಂತಲೂ ಹೆಚ್ಚು ವಯೋಮಾನದ ಸುಮಾರು 20 ಜನ ನಿವೃತ್ತ ನೌಕರರು ಭಾಗವಹಿಸಿದ್ದರು.ಅಧ್ಯಕ್ಷ ಎಚ್ ಬಸವರಾಜ್ ಸಂಘದ ಸದಸ್ಯ ಹಾಗೂ ರಾಜ್ಯದ ಮಾನವ ಹಕ್ಕು ಆಯೋಗದ ಮಾಜಿ ಉಪಾಧ್ಯಕ್ಷ ಕೆ ಶರ್ಮಾ ಜಿ.ಎನ್. ಸಿಂಪಿ, ಸಿ. ಸಿ. ಅಳ್ಳೊಳ್ಳಿ, ಬದರಿನಾರಾಯಣ, ಸತೀಶ್ ರಹಳೆ, ಮಧುಸೂದನ್, ಕೇಶವ ಐತಾಳ್, ಮಲ್ಲಿಕಾರ್ಜುನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.