ಎಚ್‌.ಜಿ. ಪಪೂ ಕಾಲೇಜಿನ ಫಲಿತಾಂಶ ಶೇಕಡಾ 95.55







ಸಿಂದಗಿ 12: ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್‌.ಜಿ.ಪದವಿ ಪೂರ್ವ ಕಾಲೇಜಿನ 2024 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಶೇಕಡಾ 95.55 ರಷ್ಟು ದಾಖಲೆಯಾಗಿದೆ. 

ಕಾಲೇಜಿಗೆ ಪ್ರಥಮ ಸ್ಥಾನವನ್ನು ಕಲಾ ವಿಭಾಗದ ವಿಧ್ಯಾರ್ಥಿ ಬಸವರಾಜ ಚಪ್ಪರಮನಿ(578) ಶೇ.96.33 ರಷ್ಟು ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾನೆ. ಯಲ್ಲಾಲಿಂಗ ಹದಗಲ್ಲ(573) ಶೇ.95.5 ಪಡೆದುಕೊಂಡು ದ್ವಿತೀಯ ಸ್ಥಾನ, ರಾಜಾಪಟೇಲ ಬಿರಾದಾರ (572) ಶೇ.95.33  ಅಂಕ ಪಡೆದು ತೃತೀಯ ಸ್ಥಾನ, ಪೂಜಾ ಬಿರಾದಾರ (571) ಶೇ.95.16 ಅಂಕ ಪಡೆದುಕೊಂಡಿರುತ್ತಾರೆ. 

 ವಾಣಿಜ್ಯ ವಿಭಾಗದಲ್ಲಿ ಮುತ್ತಪ್ಪ ಮೇಲಿನಮನಿ (548) ಶೇ.91.33, ವಿಜ್ಞಾನ ವಿಭಾಗದಲ್ಲಿ ಚೈತ್ರಾ ದಿಡ್ಡಿಮನಿ (514) ಶೇ.85.66 ಅಂಕಗಳನ್ನು ಪಡೆದುಕೊಂಡಿರುತ್ತಾರೆ. ಪರೀಕ್ಷೆಗೆ ಕುಳಿತಿರುವ ಒಟ್ಟು 431 ವಿದ್ಯಾರ್ಥಿಗಳಲ್ಲಿ 40 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 253 ವಿದ್ಯಾರ್ಥಿಗಳು ಪ್ರಥಮ ಸ್ಥಾನದಲ್ಲಿ, 91 ವಿದ್ಯಾರ್ಥಿಗಳು ದ್ವಿತೀಯ ಸ್ಥಾನದಲ್ಲಿ ಹಾಗೂ 24 ವಿದ್ಯಾರ್ಥಿಗಳು ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕರಾದ ಅಶೋಕ ಮನಗೂಳಿ ಮತ್ತು ಆಡಳಿತ ಮಂಡಳಿಯ ನಿರ್ದೇಶಕರು, ಕಾಲೇಜಿನ ಪ್ರಾಚಾರ್ಯ ಎ.ಆರ್‌.ಹೆಗ್ಗಣದೊಡ್ಡಿ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಬಳಗ ಅಭಿನಂದನೆ ಸಲ್ಲಿಸಿದ್ದಾರೆ.