ಗ್ರಾಮ ಪಂಚಾಯಿತಿಗಳಿಗೆ ಫಲಿತಾಂಶ ಪ್ರಕಟ
ಲೋಕದರ್ಶನ ವರದಿ
ಸವದತ್ತಿ 01: ಅವಧಿ ಪೂರ್ಣಗೊಂಡಿದ್ದ ತಾಲೂಕಿನ 5 ಗ್ರಾಮ ಪಂಚಾಯಿತಿಗಳಿಗೆ ಅ.28 ರಂದು ನಡೆದ ಮತದಾನದ ಫಲಿತಾಂಶ ಸೋಮವಾರ ಪ್ರಕಟಗೊಂಡಿದೆ.
ಹೊಸೂರು ಗ್ರಾಮ ಪಂಚಾಯಿತಿಯ 20 ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿ 1, ಪಂಗಡ 1, ಅ ವರ್ಗ 6, ಬ ವರ್ಗ 1, ಸಾಮಾನ್ಯ 11, ಮಲ್ಲೂರು 17 ಸ್ಥಾನಗಳ ಪೈಕಿ ಪ.ಜಾ 2, ಪಂಗಡ 2, ಅ ವರ್ಗ 3, ಬ ವರ್ಗ 1, ಸಾಮಾನ್ಯ 9, ಬಡ್ಲಿ 9 ಸ್ಥಾನಗಳ ಪೈಕಿ ಪ.ಜಾ 2, ಪಂಗಡ 2, ಸಾಮಾನ್ಯ 5, ಯಕ್ಕುಂಡಿ 22 ಸ್ಥಾನಗಳ ಪೈಕಿ 2 ಅವಿರೋಧ ಆಯ್ಕೆಯಾಗಿದ್ದು ಪ.ಜಾ 6, ಪಂಗಡ 1, ಅ ವರ್ಗ 3, ಬ ವರ್ಗ 1, ಸಾಮಾನ್ಯ 11 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆಂದು ಚುನಾವಣಾ ಶಿರಸ್ತೆದಾರ ಶಶಿರಾಜ ವನಕೆ ತಿಳಿಸಿದ್ದಾರೆ.
ಫಲಿತಾಂಶ ತಹಶೀಲ್ದಾರ ಕಚೇರಿ ಎದುರು ಜಯಗಳಿಸಿದ ಅಭ್ಯರ್ಥಿಗಳ ಬೆಂಬಲಿಗರಿಂದ ಪಟಾಕಿ ಸಿಡಿಸಿ, ಗುಲಾಲ ಎರಚಿ ಸಂಭ್ರಮಾಚರಿಸಲಾಯಿತು.