ರಾಷ್ಟ್ರೀಯ

ಪೆಟ್ರೋಲ್ ಬೆಲೆ ಏರಿಕೆಗೆ ಇಂದು ಬಿಡುವು....!!

ಪೆಟ್ರೋಲ್ ಬೆಲೆ ಏರಿಕೆಗೆ  ಇಂದು ಬಿಡುವು....!!

ನವದೆಹಲಿ, ಆಗಸ್ಟ್ 31:  ಭಾನುವಾರದಂದು ಏರಿಕೆ ಕಂಡಿದ್ದ ಪೆಟ್ರೋಲ್ ದರದಲ್ಲಿ   ಇಂದು ಯಾವುದೇ ಬದಲಾವಣೆಯಾಗಿಲ್ಲ. ದೆಹಲಿ ಸೇರಿದಂತೆ ಅನೇಕ ನಗರದಲ್ಲಿ ಸೋಮವಾರ ಪೆಟ್ರೋಲ್ ಬೆಲೆ ಏರಿಕೆಯಾಗಿಲ್ಲ . 

ದೆಹಲಿಯಲ್ಲಿ ಇಂದು   ಪೆಟ್ರೋಲ್ ಬೆಲೆ 82.03 ರೂಪಾಯಿಗೆ ಮಾರಾಟವಾಗುತ್ತಿದೆ ಎಂದು ಎಂದು ಸರ್ಕಾರಿ ಒಡೆತನದ  ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ.

ದೆಹಲಿಯಲ್ಲಿ ಒಟ್ಟಾರೆ ಕಳೆದ 16 ದಿನಗಳಲ್ಲಿ 13 ದಿನಗಳ ಕಾಲ ಪೆಟ್ರೋಲ್ ಏರಿಕೆ ಕಂಡು ಸುಮಾರು 1.60 ರೂ. ಏರಿಕೆಯಾಗಿತ್ತು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಏರಿಕೆ ಕಾಣುತ್ತಿದ್ದು, ಬ್ರೆಂಟ್ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್ ಬೆಲೆ 45  ಡಾಲರ್ ನಷ್ಟಿತ್ತು.ದೇಶದ ಹಲವು ನಗರದಲ್ಲಿ ಪೆಟ್ರೋಲ್ ಡೀಸೆಲ್ ದರ ಇಂತಿದೆ 

ದೆಹಲಿ-82.03-73.56, ಕೋಲ್ಕತಾ-83.52-77.06- ಮುಂಬೈ-88.68-80.11- ಚೆನ್ನೈ-85.00-78.86-  ಬೆಂಗಳೂರು-84.39-77.60 ಕಳೆದ 20 ದಿನಗಳಿಂದ ದೆಹಲಿಯಲ್ಲಿ ಡೀಸೆಲ್ ಬೆಲೆ ಬದಲಾಗಿಲ್ಲ. 

ಸುದ್ದಿ ಓದಿ