ಕನ್ನಡ ಭಾಷೆ ಬಗ್ಗೆ ಗೌರವವಿರಲಿ : ಜಂಬಗಿ
ಸವದತ್ತಿ 04: ಕನ್ನಡ ಭಾಷೆ,ನೆಲ ಜಲ ಸಂಸ್ಕೃತಿಯ ಬಗ್ಗೆ ಕನ್ನಡಿಗರಲ್ಲಿ ಅಭಿಮಾನ, ಗೌರವ ಭಾವನೆ ಇರಬೇಕು.ಕನ್ನಡ ಭಾಷೆಯ ಉತ್ತೇಜನದಲ್ಲಿ ಕನ್ನಡ ಶಾಲೆಗಳ ಪಾತ್ರ ಬಹುಮುಖ್ಯವಾಗಿದೆಯೆಂದು ಪ್ರಧಾನಗುರುಗಳಾದ ಎಸ್.ಬಿ.ಜಂಬಗಿ ಹೇಳಿದರು.
ಸವದತ್ತಿ ತಾಲೂಕಿನ ಮದ್ಲೂರ ಗ್ರಾಮದ ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಏರಿ್ಡಸಿದ್ದ 67ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಹಿರಿಯ ಶಿಕ್ಷಕರಾದ ಜಿ.ಎ.ಸುಣಗಾರ ಹಾಗೂ ಅತಿಥಿ ಶಿಕ್ಷಕ ಎ.ಜಿ.ಕಮತಗಿ ಕಾರ್ಯಕ್ರಮನುದ್ದೇಶಿಸಿ ಮಾತನಾಡಿದರು. ಎಸ್ಡಿಎಮ್ಸಿ ಮಾಜಿ ಅಧ್ಯಕ್ಷ ಸುರೇಶ ಹೊಟ್ಟಿನವರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಹಶಿಕ್ಷಕರಾದ ಎಂ.ಎ.ಹುದ್ಲಿ, ಅತಿಥಿ ಶಿಕ್ಷಕರಾದ ಎಸ್.ಜಿ.ಸುಣಗಾರ, ಎಸ್.ಪಿ.ಪೂಜೇರ ಉಪಸ್ಥಿತರಿದ್ದರು. ಸಹಶಿಕ್ಷಕರಾದ ಬಿ.ಎನ್.ಅಂಗಡಿ ನಿರೂಪಿಸಿದರು.ಎಸ್.ಎನ್.ಗೊಂಧಳಿ ಸ್ವಾಗತಿಸಿದರು. ಎಸ್.ಆಯ್.ಹಂಚಿನಮನಿ ವಂದಿಸಿದರು.