ಹಿರಿಯರಿಗೆ ಗೌರವ ನೀಡಿ, ಶಿಸ್ತಿನ ಜೀವನ ನಡೆಸಿ : ಅಸೂಟಿ
ಸವದತ್ತಿ 21: ಸಮೀಪದ ಮುನವಳ್ಳಿಯಲ್ಲಿ ಹಿರಿಯ ನಾಗರಿಕರಿಗೆ ಗೌರವ ಕೊಡುವುದರ ಜೊತೆಗೆ ಅವರ ಮಾತು ಹಾಗೂ ಅಭಿಪ್ರಾಯಗಳನ್ನು ಚೆನ್ನಾಗಿ ಕೇಳಿಸಿಕೊಳ್ಳಬೇಕು. ಜೀವನದ ಸಂಧ್ಯಾ ಕಾಲದಲ್ಲಿ ಅವರ ಶರೀರ ಅವರಿಗೆ ಸರಿಯಾಗಿ ಸ್ಪಂದಿಸುವುದಿಲ್ಲ ಇಂಥ ಸಂದರ್ಭಗಳಲ್ಲಿ ಸೂಕ್ತ ಸಹಾಯ ನೀಡಬೇಕು. ಹಿರಿಯರ ಅನುಭವಗಳನ್ನು ಪಡೆದುಕೊಂಡು ಈಗಿನ ಯುವಕರು ತಮ್ಮ ಜೀವನವನ್ನು ಶಿಸ್ತುಬದ್ಧವಾಗಿ ಮಾಡಿಕೊಳ್ಳಬೇಕು ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತಶಿಕ್ಷಕ ಹ.ಬ.ಅಸೂಟಿ ಹೇಳಿದರು.
ಅವರು ಪಟ್ಟಣದ ಶ್ರೀ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಜರುಗಿದ ಹಿರಿಯ ನಾಗರಿಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ವೇ.ಮೂ. ಚಂದ್ರಯ್ಯ ಸ್ವಾಮಿಗಳು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೀರಣ್ಣ ಚಂದರಗಿ ಸಂಘ ನಡೆದು ಬಂದ ದಾರಿಯ ಕುರಿತು ಮಾತನಾಡಿದರು. ಬಸನಗೌಡ ದ್ಯಾಮನಗೌಡರ ಸೇರಿದಂತೆ ಇತರರು ಇದ್ದರು.
ಪದಾಧಿಕಾರಿಗಳು : ಅರುಣಗೌಡ ಪಾಟೀಲ (ಅಧ್ಯಕ್ಷ) ರಮೇಶ ಗೋಮಾಡಿ (ಉಪಾಧ್ಯಕ್ಷ) ಯಲ್ಲನಗೌಡ ಶಾನಭೋಗ (ಪ್ರಧಾನ ಕಾರ್ಯದರ್ಶಿ), ಮಹಾರುದ್ರಪ್ಪ ಬೋಳಿಶೆಟ್ಟಿ (ಖಜಾಂಚಿ), ಮಲ್ಲಿಕಾರ್ಜುನ ಹಿರೇಮಠ (ಸಂಘಟನಾ ಕಾರ್ಯದರ್ಶಿ), ವೆಂಕಣ್ಣ ಯಕ್ಕುಂಡಿ (ಗೌರವ ಕಾರ್ಯದರ್ಶಿ), ಸಂಚಾಲಕರಾಗಿ ಬಸವರಾಜ ದೇವಣಗಾವಿ, ಷಡಕ್ಷರಿ ಬಾಳಿ, ಮಲ್ಲಿಕಾರ್ಜುನ ಹಂಜಿ, ವೀರಣ್ಣ ಚಂದರಗಿ, ವೀರಣ್ಣ ಸಂಕಣ್ಣವರ ಆಯ್ಕೆಯಾಗಿದ್ದಾರೆ.