ರಾಷ್ಟ್ರೀಯ

ದೇಶದಲ್ಲಿ ಆಗಸ್ಟ್ ನಲ್ಲೇ ಅಧಿಕ ಮಳೆ, ತುಂಬಿದ ಜಲಾಶಯಗಳು

ದೇಶದಲ್ಲಿ ಆಗಸ್ಟ್ ನಲ್ಲೇ  ಅಧಿಕ ಮಳೆ, ತುಂಬಿದ  ಜಲಾಶಯಗಳು

ನವದೆಹಲಿ, ಆಗಸ್ಟ್ 29: ದೇಶದಲ್ಲಿ ಆಗಸ್ಟ್ ತಿಂಗಳಲ್ಲಿ ಶೇ.25ರಷ್ಟು ಅಧಿಕ ಮಳೆಯಾಗಿದೆ. ಇದು 44 ವರ್ಷಗಳಲ್ಲೇ ಅಧಿಕ ಎನ್ನಲಾಗಿದೆ.

 

1983ರ ಆಗಸ್ಟ್ ನಲ್ಲಿ ಶೇ.23.8ರಷ್ಟು ಹೆಚ್ಚುವರಿ ಮಳೆ ಸುರಿದಿತ್ತು. 1976ರ ಆಗಸ್ಟ್ ನಲ್ಲಿ  ದೇಶದಲ್ಲಿ ಶೇ.28.4ರಷ್ಟು ಹೆಚ್ಚುವರಿ ಮಳೆಯಾಗಿದೆ.

 

ಕೇಂದ್ರ ಜಲ ಆಯೋಗವು ನೀಡಿರುವ ಮಾಹಿತಿ ಪ್ರಕಾರ ಆಗಸ್ಟ್ 27ರವರೆಗೆ ದೇಶದ ಜಲಾಶಯಗಳ ಒಟ್ಟಾರೆ ನೀರು ಸಂಗ್ರಹದ ಸ್ಥಿತಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಉತ್ತಮವಾಗಿದೆ. ಕಳೆದ 10 ವರ್ಷಗಳ ಸರಾಸರಿ ಸಂಗ್ರಹಕ್ಕಿಂತ ಈ ವರ್ಷ ಉತ್ತಮವಾಗಿದೆ.

 

ದೇಶದಲ್ಲಿ ಈವರೆಗೆ ಸಾಮಾನ್ಯಕ್ಕಿಂತ ಶೇ.9ರಷ್ಟು ಹೆಚ್ಚುವರಿ ಮಳೆಯಾಗಿದೆ. ಆಂಧ್ರಪ್ರದೇಶ, ಬಿಹಾರ, ಗುಜರಾತ್, ತಮಿಳುನಾಡು, ಗೋವಾದಲ್ಲಿ ಹೆಚ್ಚು ಮಳೆ ಬಿದ್ದಿದೆ. ಸಿಕ್ಕಿಂನಲ್ಲಿ ದಾಖಲೆ ಪ್ರಮಾಣದ ಹೆಚ್ಚುವರಿ ಮಳೆಯಾಗಿದೆ.

 

ಕೃಷ್ಣಾ, ಗೋದಾವರಿ, ಕಾವೇರಿ, ಗಂಗಾ, ನರ್ಮದಾ ಸೇರಿದಂತೆ ಪ್ರಮುಖ ನದಿಗಳ ಜಲಾಶಯಗಳು ನೀರಿನ ಸಂಗ್ರಹದ ಸ್ಥಿತಿ ಉತ್ತಮವಾಗಿದೆ. ಜಮ್ಮು ಮತ್ತು ಕಾಶ್ಮೀರ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡಿನಲ್ಲೂ   ಹೆಚ್ಚು ಮಳೆಯಾಗಿದೆ.

 

ಸುದ್ದಿ ಓದಿ