ಎಲ್ಲರ ಸಹಕಾರದಿಂದ ಮೀಸಲಾತಿ ಸಾಧ್ಯವಾಯಿತು: ಬೊಮ್ಮಾಯಿ
ಲೋಕದರ್ಶನ ವರದಿ
ಶಿಗ್ಗಾವಿ 07: ಎಲ್ಲ ಸಣ್ಣ ಸಮಾಜಗಳ ನಿರಂತರ ಅಧ್ಯಯನದಿಂದ ಜಯಪ್ರಕಾಶ್ ಹೆಗಡೆಯವರ ಸಲಹೆಗಳ ಮೇರೆಗೆ ಹಾಗೂ ಸಮಾಜದ ಜೊತೆಗಿನ ಒಡನಾಟದಿಂದ ಮತ್ತು ಪ್ರಧಾನಮಂತ್ರಿ ಮೋದಿಯವರ ಸಹಕಾರದಿಂದ ಮೀಸಲಾತಿ ತರಲು ಸಾಧ್ಯವಾಯಿತು ಎಂದು ಸಿ.ಎಂ. ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದ ಸವಣೂರ ರಸ್ತೆಯಲ್ಲಿರುವ ಸಿ.ಎಂ. ನಿವಾಸದ ಸಭಾಂಗಣದಲ್ಲಿ ನಡೆದ ಆದಿ ಬಣಜಿಗ ಸಮಾಜವನ್ನು 2ಡಿ ಸೇರ್ಪಡೆ ಮಾಡಿ ಗೆಜೆಟ್ ಹೊರಡಿಸಿದ್ದಕ್ಕಾಗಿ ಅಭಿನಂದನಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಂದೆ ಬರಲು ಅವಕಾಶವಿದೆ ಅಲ್ಲದೇ ಸಮಾನತೆ ಇದ್ದಾಗ್ಯೂ ಅತ್ಯಂತ ಸಣ್ಣ ಸಮಾಜ ಕಾಯಕನಿಷ್ಟೆ ಬಡವರ ಪರವಾಗಿ ಆರ್ಥಿ ಕವಾಗಿ ಹಿಂದುಳಿದ ವರ್ಗಗಳ ಪರಿಗಣಿಸಿ ವಗರ್ೀಕರಣ ಮಾಡಿದಾಗ ವ್ಯವಸ್ಥೆ ಹೇಗಿದೆ ಎಂದು ಗೊತ್ತಾದ್ಯಾಗೂ ಸುಮ್ಮನೇ ಕುಳಿತುಕೊಳ್ಳುವ ಜಾಯಮಾನ ನನ್ನದಲ್ಲ ಎಂದರು.
ಸಣ್ಣ ಸಮಾಜವನ್ನು ಹುಡುಕಿ ನಾಯ್ಯವನ್ನು ಒದಗಿಸಲು ಕಾರಣ ನೀವೇ ನನಗೆ ಆರ್ಶಿವಾದ ಮಾಡಿದ್ದರ ಫಲವಾಗಿ ಇಂದು ಕೋವಿಡ ಮತ್ತು ಪ್ರವಾಹ ಎದುರಿಸಿ ರೈತರ ಬೆಳೆ ಪರಿಹಾರ ಕೊಟ್ಟಿದ್ದು ನಿಮ್ಮ ಬಸವರಾಜ ಬೊಮ್ಮಾಯಿ ಸರಕಾರ ನಂತರ ರಾಜ್ಯ ಸರಕಾರದ ಬೊಕ್ಕಸಕ್ಕೆ ಹಣ ತಂದು ಜನ ಕಲ್ಯಾಣ ಕಾರ್ಯಕ್ರಮ ಮಾಡಲು ಪಣ ತೊಟ್ಟಿದ್ದೇನೆ ಹಾಗೂ ದುಡಿಮೆಯ ದೊಡ್ಡಪ್ಪ ಆದ್ದರಿಂದ ದುಡಿಮೆಯ ವರ್ಗಕ್ಕೆ ನಾವು ಹೆಚ್ಚಿನ ಬದ್ದತೆ ಒದಗಿಸಲು ಸಹಕಾರವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮುಖಂಡ ಶರಣಬಸವ 1988 ರಿಂದ ಇಲ್ಲಿಯವರೆಗೂ ಸಮಾಜದ ಹಿರಿಯರ ನಿರಂತರ ಹೋರಾಟ ಮತ್ತು ಇಂದು ಬಸವರಾಜ ಬೊಮ್ಮಾಯಿಯವರ ದಿಟ್ಟತನದ ನಿರ್ಧಾರದಿಂದ ಸಾಕಾರಗೊಂಡಿದೆ ಅದಕ್ಕೆ ಇಂದು ಸಾಮಾಜಿಕ ನ್ಯಾಯ ದೊರಕಿದ ಹಿನ್ನಲೆಯಲ್ಲಿ ಆದಿ ಬಣಜಿಗ ಸಮಾಜದ ವತಿಯಿಂದ ಅಭಿನಂದನಾ ಕಾರ್ಯಕ್ರಮ ನೇರವೇರಿದೆ ಎಂದರು.
ಮುಖಂಡ ಶಶಿಧರ ಹೊನ್ನಣ್ಣವರ ಮಾತನಾಡಿ ಮೀಸಲಾತಿ ನಿರಂತರ ಹೋರಾಟದ ಪ್ರತಿಫಲವಾಗಿ ಹಾಗೂ ಕೊಟ್ಟ ಮಾತಿನಂತೆ ನಡೆದುಕೊಂಡು ನುಡಿದಂತೆ ನಡೆದ ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಸಲ್ಲುತ್ತದೆ ಅಲ್ಲದೇ ಯಾರು ಮಾಡದ ಕೆಲಸವನ್ನು ಬೊಮ್ಮಾಯಿಯವರು ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಂಕರಗೌಡ್ರ ಪಾಟೀಲ, ಸದಾಶಿವ ಕಾರಡಗಿ, ಸೀಮಾ ಮಸೂತಿ, ಗಂಗಾಧರ ಬಾಣದ, ರಾಜಣ್ಣ ಕೊರವಿ, ಧರಿಯಪ್ಪಗೌಡ ಪಾಟೀಲ, ಶೈಲಾ ಮುದಿಗೌಡ್ರ, ನಿಂಬಣ್ಣವರ ಸೇರಿದಂತೆ ಆದಿ ಸಮಾಜದ ಸದಸ್ಯರು ಉಪಸ್ಥಿತರಿದ್ದರು. ಸಮಾಜದ ಮುಖಂಡ ನವೀನ ಸವಣೂರ ಕಾರ್ಯಕ್ರಮ ನಿರ್ವಹಿಸಿದರು