ರಾಜ್ಯ ವಿಶ್ವಕರ್ಮ ಅಭಿವೃದ್ದಿ ನಿಗಮಕ್ಕೆ ಅನುದಾನ ಬಿಡುಗಡೆಗೆ ಮನವಿ
ಶಿಗ್ಗಾವಿ : ರಾಜ್ಯ ವಿಶ್ವಕರ್ಮ ಅಭಿವೃದ್ದಿ ನಿಗಮಕ್ಕೆ 250 ಕೋಟಿ ರೂ. ಅನುಧಾನವನ್ನು ಆಯವ್ಯಯದಲ್ಲಿ ಘೋಶಿಸುವಂತೆ ವಿಶ್ವಕರ್ಮ ಸಮುದಾಯದಿಂದ ಶಿಗ್ಗಾವಿಯಲ್ಲಿ ಸಿ ಎಂ ಬೊಮ್ಮಾಯಿಯವರಿಗೆ ಮನವಿ ಅರ್ಿಸಲಾಯಿತು.
ವಿಶ್ವಕರ್ಮ ಸಮಾಜದ ಜಿಲ್ಲಾದ್ಯಕ್ಷ ಕಾಳಪ್ಪ ಬಡಿಗೇರ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ವಿಶ್ವಕರ್ಮ ಜನಾಂಗದವರು ಸುಮಾರು 45ಲಕ್ಷ ಜನಸಂಖ್ಯೆ ಹೊಂದಿದೆ, ಇದು ಬಡ ಸಮಾಜವಾಗಿದ್ದು, ನಮ್ಮ ಸಮಾಜವು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಎಲ್ಲಾ ರಂಗದಲ್ಲಿ ಅತೀ ಹಿಂದುಳಿದ ಸಮಾಜವಾಗಿದ್ದು ಕುಲಕಸಬುಗಳಾದ ಬಡಿಗತನ, ಅಕ್ಕಸಾಲಿಗ, ಕಮ್ಮಾರಿಕಿ, ಕುಲಕಸುಬುಗಳನ್ನು ಮಾಡುತ್ತಾ ಬದುಕು ಸಾಗಿಸುವ ನಮ್ಮ ಸಮಾಜವಾಗಿದೆ, ಇಲ್ಲಿಯವರೆಗೂ ಯಾರೊಬ್ಬರು ಮಂತ್ರಿಗಳು ಲೋಕಸಭಾ ಸದಸ್ಯರು, ವಿಧಾನಸಭಾ, ರಾಜ್ಯಸಭಾ ಸದಸ್ಯರು ಆಗಿಲ್ಲ, ಎಲ್ಲಾ ರಂಗಗಳಲ್ಲಿ ಅಭಿವೃದ್ಧಿ ಹೊಂದಬೇಕಾದರೆ ನಮ್ಮ ಸಮಾಜಕ್ಕೆ ಇರುವ ವಿಶ್ವಕರ್ಮ ರಾಜ್ಯ ಮಟ್ಟದ ನಿಗಮಕ್ಕೆ ಶೀಘ್ರದಲ್ಲಿ ತಾವು ರಾಜ್ಯದ ಆಯವ್ಯಯ ಮಂಡಿಸಲಿದ್ದು ಆಯವ್ಯಯದಲ್ಲಿ ನಮ್ಮ ನಿಗಮಕ್ಕೆ ಕನಿಷ್ಠ 250 ಕೋಟಿ ರೂಪಾಯಿ ಅನುದಾನವನ್ನು ನೀಡಿ ಸಮಾಜವು ಎಲ್ಲಾ ರಂಗದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಹೊಂದಲು ಅವಕಾಶ ಮಾಡಿಕೊಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿಯನ್ನು ಅರ್ಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ನಾಗರಾಜ ಬಡಿಗೇರ, ವಾಸ್ತುತಜ್ಞರಾದ ರುದ್ರ್ಪ ಕಮ್ಮಾರ, ಡಿ ಎಸ್ ಮಾಳಗಿ, ವಿರುಪಾಕ್ಷಪ್ಪ ಬಡಿಗೇರ, ಮಂಜುನಾಥ ಅರ್ಕಸಾಲಿ, ದೇವೆಂದ್ರ್ಪ ಬಡಿಗೇರ, ಶೇಷಪ್ಪ ಬಡಿಗೇರ, ಗೀರೀಶ ಕಮ್ಮಾರ, ನಾರಾಯಣ ಬಡಿಗೇರ, ಸುಭಾಷ ಬಡಿಗೇರ, ಮೌನೇಶ ಬಡಿಗೇರ, ಮೌನೇಶ ಕಮ್ಮಾರ, ಓಂಕಾರ ಆಚಾರ್ಯ ಬಡಿಗೇರ, ಲಕ್ಷ್ಮಣ ಕಮ್ಮಾರ, ಮಾನಪ್ಪ ಕಮ್ಮಾರ, ದೇವಣ್ಣ ಕಮ್ಮಾರ, ರುದ್ರೇಶ ಬಡಿಗೇರ, ಕೋಟೆಪ್ಪ ಬಡಿಗೇರ, ಮೌನೇಶ ಬಡಿಗೇರ, ಶಂಕ್ರ್ಪ ಬಡಿಗೇರ, ಮಂಜುನಾಥ ಬಡಿಗೇರ, ನಿಶಿಮಪ್ಪ ಕಮ್ಮಾರ, ಹರೀಶ ಕಮ್ಮಾರ, ವಾಸಪ್ಪ ಕಮ್ಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.