ನಗರದಲ್ಲಿನ ರಸ್ತೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಮನವಿ
ಬೆಳಗಾವಿ : ನಗರದಲ್ಲಿ ಬಾರಿ ಪ್ರಮಾಣದ ಮಳೆಯಾಗುತ್ತಿರುವದರಿಂದ ರಸ್ತೆಗಳು ದುರಸ್ತಿಗಿಡಾವೆ ಈ ಕೂಡಲೇ ರಸ್ತೆಗಳನ್ನು ಸರಿಪಡಿಸಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ದಿ. 23ರಂದು ಜಯಕನರ್ಾಟಕ ಸಂಘಟನೆಯವರು ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಗರದ ಚನ್ನಮ್ಮ ವೃತ್ತದಲ್ಲಿ ಕೆಲಹೊತ್ತು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಬಳಿಕ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಈ ಕುರಿತು ಮನವಿ ಸಲ್ಲಿಸಿ, ಪ್ರಮುಖ ರಸ್ತೆಗಳ ದುರಸ್ತಿ ಮಾಡುವಂತೆ ಒತ್ತಾಯಿಸಿದರು.
ದುರಸ್ತಗಿಡಾದ ರಸ್ತೆಗಳು ಬಾಜಿ ಮಾಕರ್ೆಟ್ ರೋಡ, ರೆಲ್ವೆ ಸ್ಟೆಶನ್, ಕಫಲೇಶ್ವರ ರೋಡ, ಶಾಪೂರ, ಅನಗೋಳ, ತಿಳಕವಾಡಿ, ವೈಭವನಗರ, ಅಜಮ್ ನಗರ, ಹೊಸ ಗಾಂದಿನಗರ, ಶ್ರೀನಗರ, ಮಾಂತೇಶ ನಗರ ಹೀಗೆ ನಗರದ ಹಲವಾರು ರಸ್ತೆಗಳು ಹಾಳಾಗಿವೆ.
ಈ ಬಾಗದಲ್ಲಿ ರಾತ್ರಿ ವೇಳೆ ಬೀದಿ ದೀಪಗಳಿರುವುದಿಲ್ಲ ಇದರಿಂದ ಬೀದಿಗಳನ್ನು ಅಗೆದಿರುವದು ಕಾನದೆ ದ್ವಿಚಕ್ರ ವಾಹನ ಚಾಲಕರು ಅನಾಹುತಕ್ಕಿಡಾಗುತ್ತಿದ್ದಾರೆ ಇದಕ್ಕೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲೆಂದು ಜಯಕನರ್ಾಟಕ ಸಂಘಟನೆಯವರು ಜಿಲ್ಲಾಧಿಕಾರಿಗಳಿಗೆ ನೀಡಿರುವ ಮನವಿಯಲ್ಲಿ ಒತ್ತಾಯಿಸಿದರು.