ಸೌಂದತ್ತಿ

ಶಿಕ್ಷಕರನ್ನು ಬಿಎಲ್ಓ ಕೆಲಸದಿಂದ ಮುಕ್ತಗೊಳಿಸುವಂತೆ ಒತ್ತಾಯಿಸಿ ಮನವಿ

ಶಿಕ್ಷಕರನ್ನು ಬಿಎಲ್ಓ ಕೆಲಸದಿಂದ ಮುಕ್ತಗೊಳಿಸುವಂತೆ ಒತ್ತಾಯಿಸಿ ಮನವಿ

ಸವದತ್ತಿ: ಶಿಕ್ಷಕರನ್ನು ಬಿ.ಎಲ್.ಓ ಕೆಲಸಕ್ಕೆ ನೇಮಕ ಮಾಡುತ್ತಿರುವದರಿಂದ ಶಾಲಾ ಮಕ್ಕಳಿಗೆ ಪಠ್ಯ ಬೋಧನೆಯಲ್ಲಿ ಹೆಚ್ಚಿನ ತೊಂದರೆಯಾಗುತ್ತಿದ್ದು, ಕೂಡಲೆ ಶಿಕ್ಷಕರನ್ನು ಬಿಎಲ್ಓ ಕೆಲಸದಿಂದ ಮುಕ್ತಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದಿಂದ ಗ್ರೇಡ್-2 ತಹಸೀಲ್ದಾರ ಎಮ್.ವಿ.ಗುಂಡಪ್ಪಗೋಳರವರಿಗೆ ಮನವಿ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷ ಕಿರಣ ಕುರಿ ಮಾತನಾಡಿ, ಪ್ರತಿಯೊಂದು ಶಾಲೆಯಲ್ಲಿ ಶಿಕ್ಷಕರು ಬಿಎಲ್ಓ ಕೆಲಸಕ್ಕೆ ಹೋಗುವದರಿಂದ ಪಾಲಕರು ತಕರಾರು ಮಾಡುತ್ತಿದ್ದು, ಮಕ್ಕಳಿಗೆ ಪಾಠ ಬೋಧನೆಯು ಸರಿಯಾಗಿ ನಡೆಯುತ್ತಿಲ್ಲ ಎಂದು ಪಾಲಕರು ಆಪಾದಿಸುತ್ತಿರುವದರಿಂದ ನಮ್ಮ ಮನವಿಗೆ ಸರಕಾರ ಕೂಡಲೆ ಸ್ಪಂಧಿಸಬೇಕೆಂದು ಒತ್ತಾಯಿಸಿದರು. 

ಸಂಗಮೇಶ ಖನ್ನಿನಾಯ್ಕರ, ಎಮ್.ಎಫ್.ಸಿದ್ದನಗೌಡರ, ಪತ್ತಿನ ಸಂಘದ ಅಧ್ಯಕ್ಷ ಮನೋಹರ ಚೀಲದ, ಎಮ್.ಎಸ್.ಹೊಂಗಲ, ಸುಧೀರ ವಾಘೇರಿ,  ಎಸ್.ಎನ್.ಪಾಶ್ಚಾಪೂರ, ಎಸ್.ಬಿ.ಮಿಕಲಿ, ಎಮ್.ಎಮ್.ನರೇಂದ್ರ, ಆಯ್.ಪಿ.ಕಿತ್ತೂರ, ಎ.ಎಸ್.ಮದನಬಾವಿ, ಪಿ.ಎ.ಹಲಕಿ, ವ್ಹಿ.ಜಿ.ಚಂದರಗಿ ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು .


ಸುದ್ದಿ ಓದಿ