ಶಿಗ್ಗಾವ್

ಅರ್ಹ ಫಲಾನುಭವಿಗಳಿಗೆ ಮನೆ ಒದಗಿಸಲು ಮನವಿ

ಅರ್ಹ ಫಲಾನುಭವಿಗಳಿಗೆ ಮನೆ ಒದಗಿಸಲು ಮನವಿ

ಶಿಗ್ಗಾವಿ 05: ಪುರಸಭೆ ವ್ಯಾಪ್ತಿಯಲ್ಲಿಯ ಕೊಳಚೆ ನಿರ್ಮೂಲನ ಮಂಡಳಿಯಿಂದ ಬಡವರ ಮನೆ ನಿರ್ಮಾಣದಲ್ಲಿ ಅರ್ಹ ಫಲಾನುಭವಿಗಳಿಗೆ ಮನೆ  ಒದಗಿಸುವ ಕೆಲಸ ಅಧಿಕಾರಿಗಳಿಂದ ಸರಿಯಾಗಿ ಆಗಬೇಕು ಪುರಸಭೆಯ ಮುಖ್ಯಾಧಿಕಾರಿ ಸಂಗನಬಸಯ್ಯ ಅವರಿಗೆ ಮನವಿ ಸಲ್ಲಿಸಿ ಮಂಜುನಾಥ್ ಮಣ್ಣಣ್ಣನವರ ಆಗ್ರಹಿಸಿದ್ದಾರೆ. 

 ಪಟ್ಟಣದ ವ್ಯಾಪ್ತಿಯಲ್ಲಿ ಕೊಳಚೆ ನಿರ್ಮೂಲನ ಮಂಡಳಿಯಿಂದ ನಿರ್ಮಾಣವಾಗುತ್ತಿರುವ ಬಡವರ ಪಾಲಿನ ಮನೆಗಳ ನಿರ್ಮಾಣದಲ್ಲಿ ಉದ್ದೇಶಪೂರ್ವಕ ವಿಳಂಬ ಧೋರಣೆ ಹಾಗೂ ಕಳಪೆ ಸಾಮಗ್ರಿ ಪೂರೈಕೆ ಸಂಪೂರ್ಣ ನಿರ್ಲಕ್ಷದ ಫಲಾನುಭವಿಗಳಿಂದ ಹಣ ಪಾವತಿಸಿಕೊಂಡು ಪುರಸಭೆಯವರು ಸೂಚಿಸಿದ ನಿವೇಶನದಲ್ಲಿ ಫಲಾನುಭವಿಗೆ ಮನೆ ಕೊಡದೆ ಬೇರೆಯವರಿಗೆ ಮನೆ ಹಂಚಿಕೆಯಾಗಿದೆ ಇದರಿಂದ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗಿದೆ ಪುರಸಭೆ ಹಾಗೂ ಕೊಳಚೆ ನಿರ್ಮೂಲನ ಮಂಡಳಿ ಅಧಿಕಾರಿಗಳ ಬಗ್ಗೆ ನಿರ್ಲಕ್ಷದೋರಣಿ ಸರಿಯಲ್ಲ ಕೂಡಲೇ ಸರಿಪಡಿಸಬೇಕು ಇಲ್ಲವಾದರೆ ಹೋರಾಟದ ಜೊತೆ ಸರಕಾರದ ಗಮನಕ್ಕೆ ತರಲಾಗುವುದು ಎಂದು ಸಮಸ್ಯೆ ಪರಿಹರಿಸಲು ಪುರಸಭೆ ಅಧಿಕಾರಿಗಳಿಗೆ  ಸಾಮಾಜಿಕ ಹೋರಾಟಗಾರ ಕಾಂಗ್ರೆಸ್ ಪಕ್ಷದತಾಲೂಕ ವಕ್ತಾರ ಮಂಜುನಾಥ್ ಮುನ್ನಣ್ಣವರ್ ಕೂಡಲೇ ಸಮಸ್ಯೆ ಪರಿಹಾರಕ್ಕೆಆಗ್ರಹ ಪಡಿಸಿದ್ದಾರೆ. ಅಲ್ಲದೇ ಪರಿಹರಿಸಲು ನಿರ್ಲಕ್ಷ ಧೋರಣೆ ತೋರಿದಲ್ಲಿ ಕೊಳಚೆ ನಿರ್ಮೂಲನ ಮಂಡಳಿಯ ಮನೆ ನಿರ್ಮಾಣಗಳ ಬಗ್ಗೆ ಸಂಪೂರ್ಣ ಪರೀಶೀಲನೆ ಹಾಗೂ ತನಿಖೆಗೆ ಸರ್ಕಾರದ ವಸತಿ ಸಚಿವರಿಗೂ ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದೆಂದು ತಿಳಿಸಿದ್ದಾರೆ. 

ಅವಕಾಶ ವಂಚಿತ ಫಲಾನುಭವಿ ಆಟೋ ಚಾಲಕ ದುಂಡಿಗೌಡ್ರ, ತಾಲೂಕ ಯುವ ಕಾಂಗ್ರೆಸ್ಸಿನ ಅಧ್ಯಕ್ಷ ನಿಸಾರ್ ಮಹಮ್ಮದ್ ತೋಕಲ್ಲಿ ಹಾಜರಿದ್ದರು. 


ಸುದ್ದಿ ಓದಿ