ರಾಣೆಬೆನ್ನೂರ

ಬೋರ್‌ವೆಲ್ ಮಾಲೀಕರಿಂದ ರೈತರಿಗೆ ಆಗುತ್ತಿರುವ ಅನ್ಯಾಯ ತಡೆಗಟ್ಟುವಂತೆ ಮನವಿ

ಬೋರ್‌ವೆಲ್ ಮಾಲೀಕರಿಂದ ರೈತರಿಗೆ ಆಗುತ್ತಿರುವ ಅನ್ಯಾಯ ತಡೆಗಟ್ಟುವಂತೆ ಮನವಿ

ರಾಣಿಬೆನ್ನೂರ 13: ಖಾಸಗಿ ಬೋರ್‌ವೆಲ್ ಮಾಲೀಕರಿಂದ ರೈತರಿಗೆ ಮತ್ತು ಸರ್ಕಾರಕ್ಕೆ ಆಗುತ್ತಿರುವ ಅನ್ಯಾಯ ತಡೆಗಟ್ಟುವಂತೆ ಒತ್ತಾಯಿಸಿ, ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು  ತಹಶೀಲ್ದಾರ ಸುರೇಶಕುಮಾರ ಟಿ. ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.  

ಈ ವೇಳೆ ರೈತ ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ, ತಮಿಳುನಾಡು ರಾಜ್ಯದಿಂದ ಕರ್ನಾಟಕ ರಾಜ್ಯಕ್ಕೆ ಬಂದು ಯಾವುದೇ ಸರ್ಕಾರದ ಅನುಮತಿ ಪಡೆಯದೆ ಮತ್ತು ಜಿ.ಎಸ್‌.ಟಿ. ಬಿಲ್ ಒದಗಿಸದೆ ಅನಧಿಕೃತವಾಗಿ ರೈತರ ಹೊಲಗಳಲ್ಲಿ ಬೋರ್‌ವೆಲ್ ಕೊರೆದು ಅವರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವುದು ಕಂಡುಬಂದಿದೆ.ಈಗಾಗಲೇ ರೈತರ ಹೊಲಗಳಲ್ಲಿ 

ಪ್ರಸ್ತುತ ಪೆಟ್ರೋಲ್ ಹಾಗೂ ಡಿಸೇಲ್ ದರ ಕಡಿಮೆಯಾಗಿದ್ದರೂ ಕೂಡ ಕಳೆದ ಒಂದು ತಿಂಗಳಿಂದ ಹೆಚ್ಚು ಹಣಕ್ಕೆ ಬೇಡಿಕೆಯಿಟ್ಟು ಬೊರ್‌ವೆಲ್ ಕೊರೆಯುತ್ತಿದ್ದಾರೆ. ಇದರಿಂದ ರೈತರು, ಸಾರ್ವಜನಿಕರು ಬರಗಾಲದ ಸಂಕಷ್ಟ ಪರಿಸ್ಥಿತಿಯಲ್ಲಿ ಅನ್ಯಾಯಕ್ಕೆ ಒಳಗಾಗುವಂತಾಗಿದೆ. ಕೂಡಲೇ ಸರ್ಕಾರ ಇವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. 

ಉಮೇಶ ಕರೂರ, ರವಿ ಮುಲ್ಕಿಗೌಡ್ರ, ಬಸಪ್ಪ ಲಗುಬಗಿ, ಚಂದ್ರಣ್ಣ ಬೇಡರ, ಜಗದೀಶ ಹಿತ್ತಲಮನಿ, ಕರಬಸಪ್ಪ ಪಾಟೀಲ, ಚಮನಸಾಬ ಮುಮ್ಮಣಗೇರಿ, ಜಿ.ಎಂ. ಮುಮ್ಮಣಗೇರಿ, ಕರಬಸಯ್ಯ ಶಂಕ್ರಿಮಠ, ವಾಸು ಗುಡ್ಡಣ್ಣನವರ, ಶೇಖಪ್ಪ ಹಿರೇಬಿದರಿ, ಹನುಮಂತಪ್ಪ ಬಸ್ರಳ್ಳಿ, ಲಕ್ಷ್ಮಣ ನಾಯಕ ಮತ್ತಿತರರಿದ್ದರು. 


ಸುದ್ದಿ ಓದಿ