ಮನೆಯನ್ನು ಪರೀಶೀಲಿಸಿ ಸೂಕ್ತ ಪರಿಹಾರ ನೀಡುವಂತೆ ಮನವಿ : ತಿಮ್ಮಾಪೂರ
ಶಿಗ್ಗಾವಿ 25 : ಪಟ್ಟಣದ ವಾರ್ಡ್ 5 ರ ಭಾವನ ಮಠದ ಹತ್ತಿರ ಇರುವ ತುಳಸವ ಸೋಲಂಕಿ ಇವರ ಮನೆಯ ನಿರಂತರ ಮಳೆಯಿಂದ ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಗೋಡೆಗಳು ಕುಸಿದಿದ್ದು ಮೇಲ್ಭಾಗದ ಚಾವಣಿಯೂ ಸಹ ಜಕಮ್ಗೊಂಡ ಸುದ್ದಿ ತಿಳಿದ ಕಾಂಗ್ರೆಸ್ ಪಕ್ಷದ ಪುರಸಭೆ ಸದಸ್ಯನಿ ಪತಿ ಹಾಗೂ ಪಕ್ಷದ ಮುಖಂಡ ಮುಕ್ತಿಯಾರ ತಿಮ್ಮಾಪುರ ಅವರ ಜೊತೆ ಸ್ಥಳಕ್ಕೆ ದಾವಿಸಿ ಜಕಮ್ ಗೊಂಡಿರುವ ಮನೆಯನ್ನು ಪರೀಶೀಲಿಸಿ ಅದೃಷ್ಟವಶಾತ ಯಾವುದೇ ಜೀವ ಹಾನಿ ಆಗಿರುವುದಿಲ್ಲ. ದೂರವಾಣಿ ಮುಖಾಂತರ ಪುರಸಭೆಯ ಮುಖ್ಯಾಧಿಕಾರಿ ಹಾಗೂ ಇಂಜಿನಿಯರ್ ಸಂಪರ್ಕಿಸಿ ಸ್ಥಳಕ್ಕೆ ಕರೆಸಿಕೊಂಡು ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿಕೊಳ್ಳಲಾಯಿತು.
ಮನೆಯ ದಾಖಲಾತಿಗಳನ್ನು ಹಾಗೂ ಅರ್ಜಿಯನ್ನು ಹಾಜರುಪಡಿಸಿ ಪರಿಹಾರಕ್ಕಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿಗಳು ತಿಳಿಸಿದರು. ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಹಾಗೂ ನೂತನ ನಾಮ ನಿರ್ದೇಶಕ ಸದಸ್ಯ ಮಂಜಣ್ಣ ಮಣ್ಣಣ್ಣವರ ನಿರಂತರ ಮಳೆಯಿಂದ ಕೆಲವು ವಾರ್ಡಗಳಲ್ಲಿ ಮನೆಗಳಿಗೆ ಹಾನಿಯಾಗಿದ್ದು ಮನೆಯ ಮಾಲೀಕರಾಗಲಿ ಅಕ್ಕಪಕ್ಕದವರಾಗಲಿ, ಹಾನಿಯ ಬಗ್ಗೆ ತಿಳಿಸಿದರೆ ಜೊತೆಗೆ ಗಂಜಿ ಕೇಂದ್ರಗಳ ಬಗ್ಗೆಯೂ ಮಾಹಿತಿ ನೀಡುವಂತೆ ನಾಗರೀಕರ ದೃಷ್ಟಿಯಿಂದ ತಕ್ಷಣ ಸ್ಥಳಕ್ಕೆ ಹೋಗಿ ಪರೀಶೀಲನೆ ಮಾಡುವಂತೆ ಹಾಗೂ ಪರಿಹಾರಕ್ಕೆ ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡರು ಜೊತೆಗೆ ನಾಗರೀಕರು ಜಕಮ್ ಗೊಂಡಿರುವ ಮನೆಗಳಿದ್ದರೆ ತಕ್ಷಣ ಸ್ಥಳಾಂತರಗೊಳ್ಳುವುದು ಒಳಿತು ಜೊತೆಗೆ ಗಂಜಿ ಕೇಂದ್ರಗಳ ಕುರಿತು ತಹಶೀಲ್ದಾರ ಹಾಗೂ ಪುರಸಭೆಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುವಂತೆ ಮನವಿ ಮಾಡಿಕೊಂಡರು.