ಶಾಲೆಗಳಿಗೆ ರಜೆ ಘೋಶಿಸದಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ
ರಾಣೇಬೆನ್ನೂರು 17: ಕೊರೊನಾ ಲಾಕ್ಡೌನ್ನಿಂದ ಸರಕಾರ ಶಾಲೆಗಳಿಗೆ “ 2” ವರ್ಷದಿಂದ ರಜೆ ನೀಡುತ್ತಲೇ ಬಂದಿದ್ದು ಮಕ್ಕಳ ಭವಿಷ್ಯ ಹಾಳಾಗಿದೆ.
ಈಗ ಮತ್ತೆ ಕೊರೊನಾ ಹೆಚ್ಚಳದಿಂದ ಸರಕಾರ ಶಾಲೆಗಳಿಗೆ ರಜೆ ಕೊಡುವ ಬಗ್ಗೆ ಆಯಾ ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ ನೀಡಿದ್ದು ಪರಿಸ್ಥಿತಿ ನೋಡಿಕೊಂಡು ರಜೆ ಘೋಶಿಸುವಂತೆ ಆದೇಶಿಸಿದೆ ಇದನ್ನೇ ನೆಪ ಇಟ್ಟುಕೊಂಡು ಜಿಲ್ಲಾಧಿಕಾರಿಗಳು ಭಾರ ತಪ್ಪಿಸಿಕೊಳ್ಳಲು ಶಾಲೆಗಳಿಗೆ ರಜೆ ಘೋಶಿಸಬಾರದೆಂದು ತಾ.ಪಂ. ಮಾಜಿ ಅಧ್ಯಕ್ಷ, ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಎಫ್ ಪಾಟೀಲ ಮಾನ್ಯ ಜಿಲ್ಲಾಧಿಕಾರಿಗಳಿಗೆ ಜಿಲ್ಲೆಯ ಪೋಷಕರ ಪರವಾಗಿ ಮನವಿ ಸಲ್ಲಿಸಿದ್ದಾರೆ.
ಕಳೆದ “ 2” ವರ್ಷಗಳಿಂದ ಸರಿಯಾಗಿ ಶಾಲೆಗಳು ತೆರೆಯದೆ ಇದ್ದುದ್ದರಿಂದ ಮಕ್ಕಳ ಭವಿಷ್ಯ ನಿಂತ ನೀರಾಗಿದೆ ಸರಕಾರದ ಆನ್ಲೈನ್, ಆಫ್ಲೈನ್ಗಳಿಗೆ ಹೊಂದಿಕೊಳ್ಳುವಷ್ಟು ನಮ್ಮ ಗ್ರಾಮೀಣ ಭಾಗದಲ್ಲಿ ಇನ್ನು ಮುಂದುವರಿದಿಲ್ಲ, ಸಾಕಷ್ಟು ಪ್ರತಿಭೆಗಳ ಭವಿಷ್ಯ ಮಂಕಾಗಿದೆ. ಮಕ್ಕಳು ಶಾಲೆಗೆ ಹೋಗದೆ ಖಿನ್ನತೆಗೆ ಒಳಗಾಗಿದ್ದಾರೆ. ಸ್ಫರ್ಧಾ ಜಗತ್ತಿನಲ್ಲಿ ಭಾರಿ ಮುಂಚುಣಿಯಲ್ಲಿದ್ದಮಕ್ಕಳಿಗ ದಾರಿ ತಪ್ಪಿಸುತ್ತಿದ್ದಾರೆ.
ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಕೋವಿಡ್ ಪ್ರಕರಣಗಳ ಸಂಖ್ಯೆಯನ್ನು ಆಧರಿಸಿ ಶಾಲೆಗಳಿಗೆ ರಜೆ ಘೋಶಿಸುವ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಗ್ರಾಮದ ಜನಸಂಖ್ಯಾ ನಗರದಲ್ಲಿ ವಾರ್ಡಿನಲ್ಲಿರುವ ಜನಸಂಖ್ಯೆ ಅಲ್ಲಿಯ ಸೊಂಕಿತರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ರಜೆ ಘೋಶಿಸುವ ತೀರ್ಮಾನ ಕೈಗಳಬೇಕು ಜನಸಂಖ್ಯಾಗನುಗುಣವಾಗಿ ಸೊಂಕಿತರ ಗರಿಷ್ಠ ಪ್ರಮಾಣವನ್ನು ಲೆಕ್ಕಾಚಾರ ಹಾಕಿ ಅಲಲ್ಲಿಯ ಶಾಲೆಗಳಿಗೆ ರಜೆ ಘೋಶಿಸುವಂತೆ ನಿಯಮಗಳನ್ನು ಜಾರಿಗೆ ತರಬೇಕು. ಗ್ರಾಮೀಣ ಭಾಗದಲ್ಲಂತೂ ಹೆಚ್ಚಾಗಿ ರಜೆ ಕೊಡುವ ಸಂದರ್ಭವೇ ಬರುವುದಿಲ್ಲ. ನಗರದಲ್ಲಿ ಮಾತ್ರ ಕೋವಿಡ್ ಸೊಂಕಿತರ ಪ್ರಮಾಣ ನೋಡಿ ರಜೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು.
“ಕಂಬಳಿ ಬೀಸಿ ಕರಡಿ ಬಂತು”ಎನ್ನುವ ಪದ್ಧತಿ ಕೈ ಬಿಡಬೇಕು ಪ್ರತಿವರ್ಷ ಈ ಕೊರೊನಾ ಸೊಂಕು ಬರಲು ಪ್ರಾರಂಭಿಸಿದರೆ ನಾವುಗಳು ಯುದ್ದೋಪಾದಿಯಲ್ಲಿ ಅದನ್ನು ಹೊಡೆದೋಡಿಸಬೇಕು ನಮ್ಮ ಮಕ್ಕಳನ್ನು ಕೂಡಾ ‘ಆ’ ಸಾಂಕ್ರಮಿಕ ರೋಗವನ್ನು ಗೆಲ್ಲವು ರೀತಿ ನಾವು ತಯಾರಿ ಮಾಡಬೇಕಾಗಿದೆ.
ಪದೆ ಪದೇ ಶಾಲೆಗಳ ರಜೆ ಘೋಷಣೆಯ ಮಧ್ಯಯು ಸರಕಾರ ಮೊನ್ನೆಯ ಅಕ್ಟೋಬರ್ ತಿಂಗಳಲ್ಲಿ ದಸರಾ ಹಬ್ಬದ ಪ್ರಯುಕ್ತ ಮತ್ತೆ ‘15’ ದಿವಸ ರಜೆ ಘೋಶಿಸಿದ್ದ ಸರಕಾರದ “ ಮಂಗನಾಟಕ್ಕೆ”ಹಿಡಿದ ಕನ್ನಡಿಯಾಗಿದೆ.
ಆದ್ದರಿಂದ ಜಿಲ್ಲಾಧಿಕಾರಿಗಳು ಜಿಲ್ಲೆಯ ಶಾಲೆಗಳಿಗೆ ರಜೆ ಘೋಶಿಸುವ ಮುನ್ನ ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆಯನ್ನು ಮಾಡಿ ಈ ಮೇಲಿನ ಮನವಿಯಲ್ಲಿರುವ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಶನಿವಾರ, ಭಾನುವಾರ ಮತ್ತು ಇತರೆ ಸರಕಾರ ರಜೆ ದಿನಗಳಲ್ಲೂ ಕೂಡಾ ಶಾಲೆಗಳನ್ನು ಪ್ರಾರಂಭಿಸಿ ಮಕ್ಕಳಿಗೆ ಶಿಕ್ಷಣದಲ್ಲಿ ಆಗಿರುವ ನಷ್ಟವನ್ನು ತುಂಬವತ್ತ ಚಿಂತನೆಯನ್ನು ಮಾಡಬೇಕೆಂದು ಜಿಲ್ಲೆಯ ಪೋಷಕರ ಪರವಾಗಿ ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಶಿಕ್ಷಣ ತಜ್ಞರು, ಶಿಕ್ಷಣ ಪ್ರೇಮಿಗಳು, ಬುದ್ದಿಜೀವಿಗಳು ಕೆಲವು ಶಿಕ್ಷಣ ಸಂಸ್ಥೆಗಳ ಮುಖಂಡರು, ಪೋಷಕರು ಜೊತೆಯಲ್ಲಿದ್ದರು.