ತಾಳಿಕೋಟಿ

ಮಾಂಸದ ಅಂಗಡಿ ತೆರವುಗೊಳಿಸುವಂತೆ ಆಗ್ರಹಿಸಿ ಮನವಿ

ಮಾಂಸದ ಅಂಗಡಿ ತೆರವುಗೊಳಿಸುವಂತೆ ಆಗ್ರಹಿಸಿ ಮನವಿ

ತಾಳಿಕೋಟಿ: ಪಟ್ಟಣದ  ಅಂಬಾಭವಾನಿ ದೇವಸ್ಥಾನ ಹತ್ತಿರದ ಮುಖ್ಯ ರಸ್ತೆಯ ಪಕ್ಕದಲ್ಲಿ ನಡೆಸುತ್ತಿರುವ ಅನಧಿಕೃತ ಮಾಂಸದ ಅಂಗಡಿಗಳನ್ನು ತೆರವು ಗೊಳಿಸುವಂತೆ ಆಗ್ರಹಿಸಿ ತಾಲೂಕಾ ಆಡಳತ ಹಾಗೂ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು. 

ಪಟ್ಟಣದ ಹೃದಯ ಭಾಗವಾಗಿರುವ  ಅಂಭಾವಾನಿ ದೇವಸ್ಥಾನ ಹತ್ತಿರದ ಮುಖ್ಯ ರಸ್ತೆಯ ಪಕ್ಕದಲ್ಲಿ ಉಮೇಶ ಕಲಾಲ ಮತ್ತು ಗಣಪತಿ ಕಲಾಲ ಎಂಬವರು ಎರಡು ಮಾಂಸದ ಅಂಗಡಿಗಳನ್ನು ಅನಧಿಕೃತವಾಗಿ ನಡೆಸುತ್ತಿದ್ದಾರೆ. ಇದಕ್ಕೆ ಯಾವುದೇ ರೀತಿಯ ಪರವಾನಗಿ ಇರುವುದಲ್ಲ. ಮಾಂಸ ಮಾರಾಟಕ್ಕಾಗಿ ಪುರಸಭೆಯಿಂದ ಪ್ರತ್ಯೇಕವಾಗಿ ಮಳಿಗಗಳನ್ನು ನಿರ್ಮಿಸಿಕೊಡಲಾಗಿದೆ. 

ಇದೇ ಮುಖ್ಯ ಮಾರ್ಗವಾಗಿ ದಿನಾಲೂ ಸಾವಿರಾರು ಭಕ್ತರು ಶ್ರೀ ಅಂಬಾಭವಾನಿ, ಶ್ರೀ ಬಸವೇಶ್ವರ ಹಾಗೂ ಶ್ರೀ ಖಾಸ್ಗತೇಶ್ವರ ಮಠಕ್ಕೆ ದರ್ಶನಕ್ಕೆ ತೆರಳುತ್ತಾರೆ. ಇದು ಶ್ರದ್ಧಾಭಕ್ತಿಯ ಮುಖ್ಯ ವಿಷಯವಾಗಿದೆ. ಇದರಿಂದ ಭಕ್ತರಿಗೆ ತೀವ್ರ ಮುಜುಗರವಾಗುತ್ತಿದೆ ಎಂದು ಆರೋಪಿಸಿರುವ ಸಾರ್ವಜನಿಕರು ಸದರಿ ಮಾಂಸದ ಅಂಗಡಿಗಳನ್ನು ಪುರಸಭೆ ಆಡಳಿತ ಆದಷ್ಟು ಬೇಗ ತೆರವು ಗೊಳಿಸಬೇಕು, ಇಲ್ಲದೆ ಹೋದಲ್ಲಿ ನಾವು ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದು ಅನಿವಾರ‌್ಯವಾಗುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ. 

ಈ ವೇಳೆ ರವಿ ಕಲಾಲ, ನಿಸಾರ ಬೇಪಾರಿ, ಹುಸೇನ ಬೇಪಾರಿ, ಇಬ್ರಾಹೀಮ್ ಬೀಳಗಿ, ಕೃಷ್ಣಾಜಿ ಕಲಾಲ, ಬಬ್ಲು ಕೆಂಭಾವಿ, ಚಂದಾವಲಿ ಬೇಪಾರಿ, ಟೀಪು ನಮಾಜಕಟ್ಟೆ, ಮುಸ್ತಫಾ ಬೇಪಾರಿ, ಇಬ್ರಾಹೀಂ ಬೇಪಾರಿ, ಹಸನ್ ಬೇಪಾರಿ ಇದ್ದರು 


ಸುದ್ದಿ ಓದಿ