ಸೋಮವಂಶ ಸಹಸ್ರಾರ್ಜುನ ಜಯಂತಿ ಆಚರಣೆ ಮಾಡುವಂತೆ ಮನವಿ
ಲೋಕದರ್ಶನ ವರದಿ
ಶಿಗ್ಗಾವಿ 18: ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ (ಸಾವಜಿ) ಸಮಾಜಕ್ಕೆ ಅಭಿವೃಧಿ ನಿಗಮ ಮಂಡಳಿ, ಪ್ರತಿ ಜಿಲ್ಲೆಯಲ್ಲಿ ಸಹಸ್ರಾರ್ಜುನ ವೃತ್ತ ನಿರ್ಮಾಣ ಹಾಗೂ ಸರಕಾರದಿಂದ ಸೋಮವಂಶ ಸಹಸ್ರಾರ್ಜುನ ಜಯಂತಿ ಆಚರಣೆ ಮಾಡುವಂತೆ ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸೇವಾ ಸಂಸ್ಥೆ ಶಿಗ್ಗಾವಿ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಹಶಿಲ್ದಾರರ ಮೂಲಕ ಮನವಿ ಅರ್ಪಿಸಿ ಒತ್ತಾಯಿಸಿದರು.
ಸೋಮವಂತ ಸಹಸ್ರಾರ್ಜುನ ತೃತೀಯ (ಸಾವಜಿ) ವಂಶದರು ಆಗಿದ್ದು ಸರಕಾರಿ ಗೆಜೆಟ್ಟಿನಲ್ಲಿ ಪಟೆಗಾರ ಅಂತಾ ಇದೆ, ಕರ್ನಾಟಕದಲ್ಲಿ ನಾವು ಅಂದಾಜು 16ಲಕ್ಷ ಜನರಿದ್ದೇವೆ, ಶೇಕಡಾ 45 ಜನ ಕಡು ಬಡವರಾಗಿದ್ದು ಎಸ್ಎಸ್ಬಿ ಸಮಾಜದ ಬಾಂಧವರು ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀವಾಗಿ ಅತಿ ಹಿಂದುಳಿದ ಜನಾಂಗವಾಗಿದ್ದು, ಇಲ್ಲಿಯವರೆಗೆ ಯಾವ ಸರಕಾರಗಳು ಸಹ ಸಮಾಜದ ಅಭಿವೃದ್ಧಿಪರ ಯೋಜನೆಗಳನ್ನು ನೀಡದೆ ಇರುವುದು ಒಂದು ಖೇದಕರ ಸಂಗತಿಯಾಗಿದೆ, ಆದ ಕಾರಣ ರಾಜ್ಯಾದ್ಯಂತ ಸಂಘಟಿತರಾಗಿ ರಾಜ್ಯ ಸರಕಾರಕ್ಕೆ ಮನವಿ ಮಾಡಿಕೋಳ್ಳುವದೇನೇಂದರೆ ಸಮಾಜದ ಏಳಿಗೆಗಾಗಿ ಶ್ರೀ ಸೋಮವಂಶ ಸಹಸ್ರಾರ್ಜುನ ಕ್ಷಯ (ಸಾವಜಿ) ಸಮಾಜಕ್ಕೆ ಅಭಿವೃದ್ಧಿ ನಿಗದು ಮಂಡಳಿಯನ್ನು ಪ್ರತ್ಯೇಕವಾಗಿ ಸ್ಥಾಪಿಸಿ, ಹೆಚ್ಚಿನ ಅನುದಾನವನ್ನು ಮಿಸಲಿರಿಸುವ ಜೊತೆಗೆ ವಿವಿಧ ಸಮಾಜ ಸುಧಾರಕರ ಜಯಂತಿಗಳನ್ನು ರಾಜ್ಯ ಸರಕಾರ ಆಚರಿಸುತ್ತಾ ಬಂದಿದ್ದು ಸಂತಸದ ವಿಷಯ ಅದರಂತೆ ನಮ್ಮ ಸಮಾಜದ ಮೂಲ ಪುರುಷ ಸೋಮವಂತ ಸಹಸ್ರಾರ್ಧನ ಮಹಾರಾಜರ ಜಯಂತಿಯನ್ನು ಸಹ ಪ್ರತಿ ವರ್ಷವು ರಾಜ್ಯ ಸರಕಾರದಿಂದ ಆಚರಿಸಬೇಕೆಂದು ಈ ಮನವಿ ಮೂಲಕ ಒತ್ತಾಯಿಸುತ್ತೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಅದ್ಯಕ್ಷ ಆನಂದ ದಾನಿ, ಉಪಾದ್ಯಕ್ಷ ಮೋಹನ್ಸಾ ಬದ್ದಿ, ಕಾರ್ಯದರ್ಶಿ ಸೂರ್ಯಕಾಂತ ಕಾಟಗೇರ, ಖಜಾಂಚಿ ನಾಗೇಂದ್ರ ಕಾಟಗೇರ, ಸದಸ್ಯರಾದ ಕೃಷ್ಣಸಾ ಬೇವಿನಕಟ್ಟಿ, ಸುಭಾಸ್ ಕಾಟಗೇರ, ಗುರುನಾಥ ರಾಜೋಳ್ಳಿ, ಮನೋಹರ ಅರವಟಗಿ, ಚಂರಕಾಂತ ಕಾಟಗೇರ, ನಾಗರಾಜ ದಾನಿ, ಅಮೃತ ಮೆತ್ರಾಣಿ, ಮಹಿಳಾ ಸದಸ್ಯರಾದ ರೂಪಾ ಕಾಟಗೇರ, ರೇಣುಕಾ ಬಗಾಡೆ, ರೇಖಾ ದಾನಿ, ಜ್ಯೋತಿ ಬದ್ದಿ, ನೇಹಾ ಕಾಟಗೇರ, ಲಕ್ಷ್ಮೀಬಾಯಿ ಮೆತ್ರಾಣಿ, ಮಮತಾ ರಾಜೋಳ್ಳಿ, ನೀತಾ ಕಾಟಗೇರ, ಸೋನಾ ದಾನಿ, ಶೋಭಾ ಬಾಕಳೆ ಸೇರಿದಂತೆ ಉಳಿದ ಸದಸ್ಯರು ಇದ್ದರು