ಶಿಗ್ಗಾವ್

ಶಿಕ್ಷಕರ ವರ್ಗಾವಣೆ ರದ್ದು ಪಡಿಸಲು ಮನವಿ

ಶಿಕ್ಷಕರ ವರ್ಗಾವಣೆ ರದ್ದು ಪಡಿಸಲು ಮನವಿ

ಶಿಗ್ಗಾವಿ 08: ತಾಲೂಕಿನ ಕಡಹಳ್ಳಿ ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸುಭಾಷ ಶಿರಹಟ್ಟಿಯವರ ವಗರ್ಾವಣೆಯನ್ನು ರದ್ದುಪಡಿಸುವಂತೆ ಆಗ್ರಹಿಸಿ ಶಾಲೆಯ ಎಸ್ಡಿಎಮ್ಸಿ ಯವರು ಕ್ಷೇತ್ರ ಶಿಕ್ಷಣಾಧಿಕಾರಿ ಎಮ್ ಬಿ ಅಂಬಿಗೇರರವರಿಗೆ  ಮನವಿ ಸಲ್ಲಿಸಿದರು.

ಶಿಕ್ಷಕ ಸುಭಾಷ ಶಿರಹಟ್ಟಿಯವರು ಶಾಲೆಯಲ್ಲಿ  ಹಲವಾರು ಸಮಸ್ಯೆಗಳಿದ್ದು ಎಲ್ಲಾ ರೀತಿ ಕುಂದುಕೊರತೆಗಳನ್ನು ಬಗೆ ಹರಿಸಿಕೊಂಡು ಹೋಗಲು ಸಮರ್ಥರಾಗಿದ್ದು ಇವರ ವಗರ್ಾವಣೆಯನ್ನು ರದ್ದುಪಡಿಸಿ ಅದೇ ಶಾಲೆಯಲ್ಲಿ ಸೇವೆಗೆ ನಿಯುಕ್ತಿಗೊಳಿಸಬೇಕು,  ಇಲ್ಲವಾದಲ್ಲಿ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಪಂ ಉಪಾದ್ಯಕ್ಷ ಬಸನಗೌಡ ರಾಮನಗೌಡ್ರ, ಎಸ್ಡಿಎಮ್ಸಿ ಮಾಜಿ ಅದ್ಯಕ್ಷ ನಾಗರಾಜ ಬಡ್ನಿ, ಉಪಾದ್ಯಕ್ಷೆ ಸುಮಿತ್ರಾ ಬಡ್ನಿ, ಸದಸ್ಯರಾದ ಸರಿತಾ ಮಸಳಿ, ನಿರ್ಮಲಾ ಹಿಂದಿನಮನಿ, ಮಾದೇವಿ ಮುಂದಿನಮನಿ, ರೇಣುಕಾ ಗುಂಡಣ್ಣವರ, ರಮೇಶ ಹಿಂದಿನಮನಿ, ಶೇಕಪ್ಪ ಹಿಂದಿನಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

ಸುದ್ದಿ ಓದಿ