ಶಿಗ್ಗಾವ್

ಮಾರುತಿ ದೇವಸ್ಥಾನದ ಆವರಣ ಗೋಡೆ ನಿರ್ಮಿಸುವಂತೆ ಆಗ್ರಹ

ಮಾರುತಿ ದೇವಸ್ಥಾನದ ಆವರಣ ಗೋಡೆ ನಿರ್ಮಿಸುವಂತೆ ಆಗ್ರಹ


ಲೋಕದರ್ಶನ ವರದಿ 

ಶಿಗ್ಗಾವಿ 17: ಮಾರುತಿ ದೇವಸ್ಥಾನದ ಸುತ್ತಮುತ್ತಲೂ ಅಕ್ರಮ ಮಾಡಿಕೊಂಡಿದ್ದಾರೆ ಅವುಗಳನ್ನು ತೆರವುಗೋಳಿಸಿ ಮಾರುತಿ ದೇವಸ್ಥಾನದ ಆವರಣ ಗೋಡೆಯನ್ನು ನಿರ್ಮಿಸುವಂತೆ ಆಗ್ರಹಿಸಿ ಎನ್‌.ಎಮ್ ತಡಸ (ನೀರಲಗಿ) ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ. 

ತಾಲೂಕಿನ ಎನ್‌.ಎಮ್ ತಡಸ (ನೀರಲಗಿ) ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿರುವ ಮಾರುತಿ ದೇವಸ್ಥಾನವಿದ್ದು ಅದರ ಆಜುಬಾಜು ಇದ್ದ ಜಾಗೆದವರು ಮಾರುತಿ ದೇವಸ್ಥಾನದ ಜಾಗೆಯನ್ನು ಒತ್ತುವರಿ ಮಾಡಿದ್ದಾರೆ ಅದನ್ನು ತಕ್ಷಣವೆ ಒತ್ತುವರಿಯನ್ನು ತೆರವುಗೋಳಿಸಬೇಕು ಇಲ್ಲದೆ ಇದ್ದರೆ ಮಾರುತಿ ದೇವಸ್ಥಾನದ ಜಾಗೆಯನ್ನು ದಿನದಿಂದ ದಿನಕ್ಕೆ ಒತ್ತುವರಿಯನ್ನು ಮಾಡಿ ದೇವಸ್ಥಾನದ ಜಾಗೆಯನ್ನು ಪೂರ್ತಿ ಪ್ರಮಾಣದಲ್ಲಿ ಅಕ್ರಮಗೋಳಿಸುತ್ತಾರೆ ಆದ್ದರಿಂದ ಪಂಚಾಯತ ಅಭಿವೃದ್ದಿ ಅಧಿಕಾರಿಗಳು ತಕ್ಷಣವೆ ತೆರವುಗೋಳಿಸಬೇಕು ಎಂದು ಆಗ್ರಹಿಸುತ್ತೆವೆ. 

ಮಾರುತಿ ದೇವಸ್ಥಾನಕ್ಕೆ ಈಗಾಗಲೇ ಸರಕಾರದ ಅನುದಾನ ಮಂಜೂರಾಗಿದ್ದು ಅದರ ಕಾಮಗಾರಿಯನ್ನು ಮಾಡಲು ಮುಂದಾಗುತ್ತಿದ್ದು ಅಕ್ರಮಗೋಂಡ ಆಜುಬಾಜು ಇದ್ದ ಜಾಗೆಯನ್ನು ತೆರವುಗೋಳಿಸಬೇಕು ಎಂದು ಈಗಾಗಲೇ ಮನವಿಯನ್ನು ಕೂಡಾ ನೀಡಲಾಗಿದೆ ಆದರೆ ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಇದ್ಯಾವದಕ್ಕೂ ಕ್ರಮವನ್ನು ತೆಗೆದುಕೋಳ್ಳಲು ಮುಂದಾಗುತ್ತಿಲ್ಲಾ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ತಕ್ಷಣವಾಗಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕರು ಪಿಡಿಓ ಅವರ ಮೇಲೆ ಕ್ರಮ ಜರುಗಿಸಿ ಮಾರುತಿ ದೇವಸ್ಥಾನದ ಜಾಗೆಯನ್ನು ತೆರವುಗೋಳಿಸಿ ದೇವಸ್ಥಾನದ ಕಟ್ಟಡವನ್ನು ಕಟ್ಟಲು ಅನುಕೂಲವನ್ನು ಮಾಡಬೇಕು ಎಂದು ಆಗ್ರಹಸಿದ್ದಾರೆ. 

ಗ್ರಾಮಸ್ಥರಾದ ಪರಸಪ್ಪ ಹಳ್ಯಾಳ, ವಿ.ದಾ ಪಾಟೀಲ, ಜಿ.ಎಸ್‌.ಪಾಟೀಲ, ದೇವಪ್ಪ ಹಂಚಿಮನಿ, ಗಂಗಯ್ಯ ಪೂಜಾರ, ಎಸ್‌.ಎನ್‌.ದುಂಡಶಿ, ವಿ.ಸಿ.ಕೋಣನವರ, ಬಸವರಾಜ ತಡ್ಲೀಗಿ, ಕರವೇ ಜಿಲ್ಲಾ ಅಧ್ಯಕ್ಷ ಸಂತೋಷ ಚಾಕಲಬ್ಬಿ, ರುದ್ರಗೌಡ ಎನ್ ಅತ್ತಿಮರದ, ಎಮ್ ವಾಯ್ ಹಳ್ಯಾಳ, ಶಿವಾನಂದ ಕ್ಷೌರದ, ಪಿ.ಎಚ್‌.ಒಲೇಕಾರ, ಬಸವರಾಜ ಶಿ ಗಾಣಿಗೇರ ಸೇರಿದಂತೆ ಹಲವಾರು ಗ್ರಾಮಸ್ಥರು ಆಗ್ರಹಿಸಿದ್ದಾರೆ. 


ಸುದ್ದಿ ಓದಿ